ಕಡಿಮೆ ಬೆಲೆಗೆ ನೋಕಿಯಾ X2-05 ಸೂಪರ್ ಮೊಬೈಲ್

2.2 ಇಂಚು, QVGA ಡಿಸ್ಪ್ಲೇ ಮತ್ತು 240 x 20 ಪಿಕ್ಸಲ್ ರೆಸೊಲ್ಯೂಷನ್ ಸ್ಕ್ರೀನ್ ಹೊಂದಿರುವ ಈ ಮೊಬೈಲ್ ಸಿಂಬಾನಿಯನ್ S40 ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ. 32 ಜಿಬಿ ವರೆಗೂ ಮೆಮೊರಿ ವಿಸ್ತರಣೆ ಇದರಲ್ಲಿ ಸಾಧ್ಯವಿರುವುದು ವಿಶೇಷ ಕೊಡುಗೆ ಎನಿಸಲಿದೆ.
ಎಲ್ಲ ರೀತಿಯ ಫೈಲ್ ಫಾರ್ಮೆಟ್ ಗೂ ಹೊಂದಿಕೆಯಾಗುವ ಮೀಡಿಯಾ ಪ್ಲೇಯರ್ ಅತ್ಯುತ್ತಮ ಗುಣಮಟ್ಟದ ಆಡಿಯೋ ಮತ್ತು ವಿಡಿಯೋ ಸ್ಪಷ್ಟತೆ ನೀಡಲಿದೆ. ಎಫ್ ಎಂ ರೇಡಿಯೋ ಜೊತೆ ರೇಡಿಯೋದಲ್ಲಿನ ಹಾಡುಗಳನ್ನು ರೆಕಾರ್ಡ್ ಮಾಡಿಕೊಳ್ಳುವ ಸೌಲಭ್ಯವನ್ನೂ ನೀಡಲಾಗಿದೆ.
ಫೇಸ್ ಬುಕ್ ಮತ್ತು ಟ್ವಿಟ್ಟರ್ ನಂತಹ ಸಾಮಾಜಿಕ ತಾಣಗಷ್ಟೇ ಅಲ್ಲ, ಜಿಮೇಲ್, ಹಾಟ್ ಮೇಲ್ ಕೂಡ ಇದ್ದು, ನೋಕಿಯಾ ಲೈಫ್ ಟೂಲ್ಸ್ 1.7 ಆಯ್ಕೆ ನಿಮ್ಮದಾಗಲಿದೆ.
ಕೆಂಪು, ಬೆಳ್ಳಿ ಬಣ್ಣ ಮತ್ತು ಕಪ್ಪು ಇಂತಹ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಈ ಹ್ಯಾಂಡ್ ಸೆಟ್ ಬ್ಯಾಟರಿ ಬ್ಯಾಕಪ್ ಬಗ್ಗೆಯೂ ಮಾತಿಲ್ಲ. BL-5CB 800 mAh ಲಿಯಾನ್ ಬ್ಯಾಟರಿ ಹೊಂದಿರುವ ಮೊಬೈಲ್ 7.4 ಗಂಟೆ ಟಾಕ್ ಟೈಂ ಮತ್ತು 643 ಸ್ಟಾಂಡ್ ಬೈ ಟೈಂ ನೀಡುತ್ತದೆ. ಇಷ್ಟೆಲ್ಲಾ ಸೌಲಭ್ಯ ಹೊಂದಿರುವ ಈ ಹ್ಯಾಂಡ್ ಸೆಟ್ ಬೆಲೆ ನಿಜಕ್ಕೂ ಆಶ್ಚರ್ಯ ತರುತ್ತದೆ. 3,750 ರುಗೆ ದೊರೆಯಲಿರುವ ಈ ಹ್ಯಾಂಡ್ ಸೆಟ್ ನಿಮ್ಮ ಅತ್ಯುತ್ತಮ ಆಯ್ಕೆಯಾಗಲಿದೆ.


Click it and Unblock the Notifications