ಸ್ಮಾರ್ಟ್ ಔಟ್ ಲುಕ್ ಮೊಬೈಲ್ ನಿಮಗೆ ಬೇಕಾ?

Posted By: Staff

ಸ್ಮಾರ್ಟ್ ಔಟ್ ಲುಕ್ ಮೊಬೈಲ್ ನಿಮಗೆ ಬೇಕಾ?
ವಿನೂತನ ಮಾದರಿಯ ಮೊಬೈಲ್, ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿರುವ ಸ್ಯಾಮ್ ಸಂಗ್ ಕಂಪನಿ, ಸ್ಯಾಮ್ ಸಂಗ್ ಟ್ರಾನ್ಸ್ ಫಿಕ್ಸ್ ಎಂಬ ಸ್ಮಾರ್ಟ್ ಫೋನ್ ಬಿಡುಗಡೆಗೆ ಸಜ್ಜಾಗಿದೆ.

ಆಂಡ್ರಾಯ್ಡ್ 2.3 ಆಪರೇಟಿಂಗ್ ಸಿಸ್ಟಮ್ ಬೆಂಬಲಿತ ಈ ಸ್ಮಾರ್ಟ್ ಫೋನ್ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ರೂಪುಗೊಂಡಿದ್ದು, ಸ್ಮಾರ್ಟ್ ಫೋನ್ ಪ್ರಿಯರನ್ನು ಆಕರ್ಷಿಸುವ ಸುಂದರ ಔಟ್ ಲುಕ್ ಹೊಂದಿದೆ. ಇದರಲ್ಲಿ ಇನ್ನೂ ಅನೇಕ ವಿಶೇಷತೆ ಹೊಂದಿದೆ. ಏನೆಂದು ಮುಂದೆ ತಿಳಿಯಿರಿ.

ಸ್ಯಾಮ್ ಸಂಗ್ ಟ್ರಾನ್ಸ್ ಫಿಕ್ಸ್ ವಿಶೇಷತೆ:
* 3.2 ಇಂಚು 320*480 ಪಿಕ್ಸಲ್ ರೆಸೊಲ್ಯೂಷನ್ ಸ್ಕ್ರೀನ್ ಡಿಸ್ಪ್ಲೇ
* 126 ಗ್ರಾಂ ತೂಕ
* ಟಚ್ ಸ್ಕ್ರೀನ್ ನೊಂದಿಗೆ ಕ್ವೆರ್ಟಿ ಕೀಬೋರ್ಡ್
* 800 ಮೆಗಾ ಹಟ್ಸ್ ಸಿಂಗಲ್ ಕೋರ್ Qualcomm ARM 9 ಪ್ರೊಸೆಸರ್
* 3.2 ಮೆಗಾ ಪಿಕ್ಸಲ್ ಕ್ಯಾಮೆರಾ ಜತೆ ಆಟೊ ಫೋಕಸ್, ಡಿಜಿಟಲ್ ಝೂಮ್ ಆಯ್ಕೆ
* ಸ್ಟಾಂಡರ್ಡ್ ವಿಡಿಯೋ ಕ್ಯಾಪ್ಚರ್ ತಂತ್ರಜ್ಞಾನ
* ಬ್ಲೂಟೂಥ್, ವೈ-ಫೈ ಮತ್ತು USB 2.0 ಪೋರ್ಟ್
* 3.5 ಎಂಎಂ ಆಡಿಯೋ ಪ್ಲಗ್
* 3 ಜಿ ಸಂಪರ್ಕ, GPS ನೇವಿಗೇಶನ್
* ಮೈಕ್ರೊ SD ಕಾರ್ಡ್, 125 ಎಂಬಿ ಮೆಮೊರಿ ವಿಸ್ತರಣೆ

ಯಾವುದೇ ರೀತಿಯ ಆಡಿಯೋ ಮತ್ತು ವಿಡಿಯೋ ಪ್ಲೇಯರ್ ಫಾರ್ಮೆಟ್ ಬೆಂಬಲಿಸುವ ಈ ಮೊಬೈಲ್ ನಲ್ಲಿ ಯೂ-ಟ್ಯೂಬ್ ಪ್ಲೇಯರ್ ಸಹ ಇದೆ. ಟ್ರೈ ಬ್ಯಾಂಡ್ ಮತ್ತು ಮೊಬೈಲ್ ವೆಬ್ ಅಪ್ಲಿಕೇಶನ್, HTML ಮತ್ತು ಫ್ಲಾಶ್ ಬೆಂಬಲಿತ ಇಂಟರ್ ನೆಟ್ ಬ್ರೌಸಿಂಗ್ ಇಂತಹ ಇನ್ನಿತರ ಸೌಲಭ್ಯಗಳನ್ನು ಬಳಕೆದಾರರಿಗೆ ನೀಡಲಾಗಿದೆ. 1500mAh ಲೀಥಿಯಂ ಬ್ಯಾಟರಿ ಇರುವ ಸ್ಮಾರ್ಟ್ ಫೋನ್ 3 ಗಂಟೆ ಟಾಕ್ ಟೈಂ ಮತ್ತು 200 ಗಂಟೆ ಸ್ಟಾಂಡ್ ಬೈ ಟೈಂ ನೀಡುತ್ತದೆ.

ಇಷ್ಟೆಲ್ಲಾ ಅವಕಾಶಗಳನ್ನು ಹೊಂದಿರುವ ಈ ಸ್ಮಾರ್ಟ್ ಫೋನ್ ದರ ಸುಮಾರು 9000 ರು ಎಂದು ಅಂದಾಜಿಸಲಾಗಿದ್ದು, ಭಾರತೀಯರಿಗೆ ಸಿಹಿ ಸುದ್ದಿ ಎನಿಸಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot