ರೇಸ್ ನಲ್ಲಿದೆ ಮೊಟೊರೊಲಾ ಡ್ರಾಯ್ಡ್ ರೇಝರ್

By Super
|
ರೇಸ್ ನಲ್ಲಿದೆ ಮೊಟೊರೊಲಾ ಡ್ರಾಯ್ಡ್ ರೇಝರ್
ಮೊಟೊರೊಲಾ ಡ್ರಾಯ್ಡ್ ರೇಝರ್ ವಿನೂತನ ಸ್ಮಾರ್ಟ್ ಫೋನ್ ಅಮೆರಿಕದಲ್ಲಿ ಅಕ್ಟೋಬರ್ 18 ಕ್ಕೆ ಬಿಡುಗಡೆಯಾಗಲಿದೆ. ಮೊಟೊರೊಲಾ ಸ್ಪೈಡರ್ ಎಂದು ಕರೆಯಲ್ಪಡುವ ಈ ಮೊಬೈಲ್ ವರ್ಷಾಂತ್ಯಕ್ಕೆ ಭಾರತಕ್ಕೂ ಕಾಲಿಡಲಿದೆ.

ಕ್ಯಾಂಡಿ ಬಾರ್ ಮಾದರಿಯಲ್ಲಿರುವ ಈ ಡ್ರಾಯ್ಡ್ ಸ್ಮಾರ್ಟ್ ಫೋನ್ ಗೆ ವಾಟರ್ ಪ್ರೂಫ್ ನೀಡಲಾಗಿದ್ದು, ಅತ್ಯಾಧುನಿಕ AMOLED ತಂತ್ರಜ್ಞಾನ ಮತ್ತು 540 x 960 ರೆಸೊಲ್ಯೂಷನ್ ಡಿಸ್ಪ್ಲೇ ಹೊಂದಿಸಲಾಗಿದೆ. ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಜೊತೆ ಡ್ಯೂಯಲ್ ಕೋರ್ 1200 ಮೆಗಾ ಹಟ್ಸ್ ಪ್ರೊಸೆಸರ್ ಮತ್ತು RAM 1024 ಎಂಬಿ ಸಾಮರ್ಥ್ಯ ಹೊಂದಿದೆ.

ಗ್ರಾಹಕರು ಬಯಸುವ ವಿನೂತನ ತಂತ್ರಜ್ಞಾನವೆಲ್ಲವನ್ನೂ ಹೊಂದಿರುವ ಈ ಸ್ಮಾರ್ಟ್ ಫೋನ್ ನಲ್ಲಿ ದೋಷ ಹುಡುಕುವುದು ಸ್ವಲ್ಪ ಕಷ್ಟವೇ. 4.30 ಇಂಚು ಸ್ಕ್ರೀನ್ ಜೊತೆ ಮಲ್ಟಿ ಟಚ್, ಪ್ರಾಕ್ಸಿಮಿಟಿ ಸೆನ್ಸಾರ್ ಮುಂತಾದ ಆಯ್ಕೆ ಇದರಲ್ಲಿದೆ. ಮೊಬೈಲ್ ಸ್ಕ್ರೀನ್ ಸುರಕ್ಷತೆಗಾಗಿ ಸ್ಕ್ರಾಚ್ ರೆಸಿಸ್ಟಂಟ್ ನೀಡಲಾಗಿದೆ.

ಕ್ಯಾಮೆರಾ ಪಿಕ್ಸಲ್ ಮತ್ತು ಸ್ಪಷ್ಟತೆ ಬಗ್ಗೆ ಈ ಬಾರಿ ಹೆಚ್ಚು ಗಮನ ನೀಡಿದ್ದು, ಮೊಟೊರೊಲಾದಲ್ಲಿ 8 ಮೆಗಾ ಪಿಕ್ಸಲ್ ಕ್ಯಾಮೆರಾ ಇರುವುದೆಂದುಅಂದಾಜಿಸಲಾಗಿದೆ. ಹೈಡೆಫನಿಶನ್ ಇಮೇಜಿಂಗ್ ಮತ್ತು ವಿಡಿಯೋ ಕ್ಯಾಪ್ಚರಿಂಗ್ ಇರುವ ಮೊದಲ ಹ್ಯಾಂಡ್ ಸೆಟ್ ಇದಾಗಿದ್ದು, ತುಂಬಾ ಉತ್ಕ್ರಷ್ಟ ಮಟ್ಟದ ವಿಡಿಯೊ ರೆಕಾರ್ಡಿಂಗ್ ನಿರೀಕ್ಷಿಸಬಹುದು.

ಅತ್ಯಾಧುನಿಕ GPS ತಂತ್ರಜ್ಞಾನದೊಂದಿಗೆ ಬ್ಲೂಟೂಥ್, ವೈ-ಫೈ, 3 ಜಿ , USB ಪೋರ್ಟ್, 3.5 ಎಂಎಂ ಸ್ಟಿರಿಯೋ ಹೆಡ್ ಸೆಟ್ ಜಾಕ್, ಆಡಿಯೋ, ವಿಡಿಯೋ ಪ್ಲೇಯರ್ ಬೆಂಬಲಿಸಲು ಮಲ್ಟಿ ಮೀಡಿಯಾ ಫೈಲ್ ಒಳಗೊಂಡಿದೆ.

ಈ ಸ್ಮಾರ್ಟ್ ಫೋನ್ ನಲ್ಲಿ ಲಿಯಾನ್ ಸ್ಟಾಂಡರ್ಡ್ ಬ್ಯಾಟರಿ ಇದ್ದು, ಸ್ಟಾಂಡ್ ಬೈ ಮತ್ತು ಟಾಕ್ ಟೈಂ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಕೆಲವು ಮೂಲದ ಪ್ರಕಾರ ಇದು 4 ಜಿ ಮತ್ತು ಐಸ್ ಕ್ರೀಂ ಸ್ಯಾಂಡ್ ವಿಚ್ ಎಂಬ ಆಂಡ್ರಾಯ್ಡ್ ವಿನೂತನ ಆಯಾಮವನ್ನೂ ಬೆಂಬಲಿಸಲಿರುವುದಾಗಿ ತಿಳಿದುಬಂದಿದೆ. ಆದರೆ ಈ ಹ್ಯಾಂಡ್ ಸೆಟ್ ಬೆಲೆ ಕುರಿತು ಕಂಪನಿ ಇನ್ನೂ ಘೋಷಿಸಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X