ಮ್ಯಾಕ್ಸ್ ಡಿಟ್ಟೊ MX222 ಮೊಬೈಲ್ ನಲ್ಲಿ ಎರಡೆರಡು ಆಯ್ಕೆ

ಅತ್ಯಾಶ್ಚರ್ಯ ಆಯ್ಕೆಯಿರುವ ಮ್ಯಾಕ್ಸ್ ಡಿಟ್ಟೊ MX222 ಮೊಬೈಲ್ ನಲ್ಲಿ ವಿನೂತನ ಎರಡೆರಡು ಶೈಲಿಗಳು ನಿಮಗೆ ಸಿಗಲಿದೆ. ಎರಡೂ ಕಡೆಗಳಲ್ಲಿ ಸ್ಕ್ರೀನ್, ಕೀಪ್ಯಾಡ್ ಮತ್ತು ಕ್ಯಾಮೆರಾ ಹೊಂದಿರುವ ಈ ಹ್ಯಾಂಡ್ ಸೆಟ್ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗಲಿರುವುದು ಸ್ಪೆಷಲ್ ವಿಷಯ.
1.3 ಮೆಗಾ ಪಿಕ್ಸಲ್ ಕ್ಯಾಮೆರಾ ಬೆಂಬಲದೊಂದಿಗೆ ಎರಡೂ ಕಡೆಯಿಂದ ಫೋಟೊ ತೆಗೆಯಬಹುದು. EmoteTalk ಎಂಬ ವಿನೂತನ ಮಾದರಿಯನ್ನು ಮೊಬೈಲ್ ನಲ್ಲಿ ಅಳವಡಿಸಿರುವುದು ವಿಶೇಷವಲ್ಲದೆ ಇನ್ನೇನು?
ಇಷ್ಟೇ ಅಲ್ಲ, 2.0 ಇಂಚಿನ ವಿಸ್ತರಣೆಯೊಂದಿಗೆ TFT ಸ್ಕ್ರೀನ್ ಕೂಡ ಇದರಲ್ಲಿದೆ. WAP ಬ್ರೌಸರ್ ಇರುವ ಈ ಮೊಬೈಲ್ ನಲ್ಲಿ 2 ಜಿಬಿ ಮೆಮೊರಿ ವಿಸ್ತರಣೆಗೆ ಅವಕಾಶ ನೀಡಲಾಗಿದೆ. ಜೊತೆಗೆ MP3, Wav MP4 ಇವುಗಳ ಮಲ್ಟಿ ಫಾರ್ಮೆಟ್ ಆಯ್ಕೆಯೂ ಇದೆ. ಸಂಗೀತ ಪ್ರಿಯರಿಗೆಂದು ತುಂಬಾ ಉತ್ತಮ ಗುಣಮಟ್ಟದ ಎಫ್ ಎಂ ಸ್ಕೆಡ್ಯೂಲಿಂಗ್ ಮತ್ತು 3.5 ಎಂ ಎಂ ಆಡಿಯೋ ಜಾಕ್ ನೀಡಲಾಗಿದೆ.
A2DP ಯೊಂದಿಗೆ ಬ್ಲೂಟೂಥ್ ಇದ್ದು, 800 mAh ಬ್ಯಾಟರಿ ಬೆಂಬಲಿತ ಹ್ಯಾಂಡ್ ಸೆಟ್ ಕೆಂಪು, ನೀಲಿ ಮಿಶ್ರಿತ ಹಾಗೂ ಕೆಂಪು, ಹಳದಿ ಮಿಶ್ರಿತ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಆದರೆ ಮ್ಯಾಕ್ಸ್ ಡಿಟ್ಟೊ ಬೆಲೆ ಕೇಳಿದರೆ ನೀವೆ ದಂಗಾಗಿಹೋಗ್ತೀರ. ಇಷ್ಟೆಲ್ಲಾ ಆಯ್ಕೆಗಳನ್ನು ಒಳಗೊಂಡಿರುವ ಈ ಹ್ಯಾಂಡ್ ಸೆಟ್ ಕೇವಲ 3,788 ರುಗೆ ಸಿಗಲಿದೆ.


Click it and Unblock the Notifications