ಸಖತ್ ಕ್ಲಾಸಿಯಾಗಿದೆ ಈ ನೋಕಿಯಾ ಮೊಬೈಲ್

By Super
|
ಸಖತ್ ಕ್ಲಾಸಿಯಾಗಿದೆ ಈ ನೋಕಿಯಾ ಮೊಬೈಲ್
ಪ್ರತಿಷ್ಟಿತ ನೋಕಿಯಾ ಮೊಬೈಲ್ ಕಂಪನಿ ನೋಕಿಯಾ 701 ಸ್ಮಾರ್ಟ್ ಫೋನ್ ಹೊರತರಲಿದೆ. ತುಂಬಾ ಉತ್ಕ್ರಷ್ಟ ಗುಣಮಟ್ಟದ ಗ್ರಾಫಿಕ್, LED-ಬ್ಯಾಕ್ ಲಿಟ್ IPS TFT ಜೊತೆ 16 ಮಿಲಿಯನ್ ಕಲರ್ ಸಪೋರ್ಟ್ ನೀಡಲಿರುವ ಈ ಕ್ಲಾಸಿ ಮೊಬೈಲ್ ನಿಮ್ಮ ಚಿತ್ತಾಕರ್ಷಿಸುವುದರಲ್ಲಿ ಸಂಶಯವೇ ಇಲ್ಲ.

360x640 ಪಿಕ್ಸಲ್ ಕ್ಲಿಯರ್ ಕಪ್ಪು ಡಿಸ್ಪ್ಲೇ ಹೊಂದಿರುವ ಈ ಹ್ಯಾಂಡ್ ಸೆಟ್ ಅಮೆಥಿಸ್ಟ್ ನೀಲಿ, ಬೆಳ್ಳಿ, ಸ್ಟೀಲ್ ಡಾರ್ಕ್ ಮತ್ತು ಬಿಳಿಯಂತಹ ಆಕರ್ಷಕ ಬಣ್ಣಗಳಲ್ಲಿ ಮೂಡಿಬಂದಿದೆ. ಸ್ಟೇನ್ ಲೆಸ್ ಸ್ಟೀಲ್ ಫಿನಿಶಿಂಗ್ ಇನ್ನೂ ಮೆರುಗು ನೀಡಲಿದೆ.

ನೋಕಿಯಾ 701 ವಿಶೇಷತೆ:

* ಗೊರಿಲ್ಲಾ ಗ್ಲಾಸ್ ವಿಶೇಷ ಡಿಸ್ಪ್ಲೇ
* 1 ಗಿಗಾ ಹಟ್ಸ್ ಪ್ರೊಸೆಸರ್ ಪವರ್ ನೊಂದಿಗೆ ಸಿಂಬಿಯಾನ್ ಬೆಲ್ಲೆ ಆಪರೇಟಿಂಗ್ ಸಿಸ್ಟಮ್
* 8 ಜಿಬಿ ಸ್ಟೊರೇಜ್ ಸಾಮರ್ಥ್ಯ
* 512ಎಂಬಿ RAM ಮತ್ತು 1ಜಿಬಿ ROM
* 32 ಜಿಬಿ ಮೆಮೊರಿ ವಿಸ್ತರಣೆಯ ಮೈಕ್ರೊ SD ಕಾರ್ಡ್
* ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸೆಲೆರೊಮೀಟರ್ ಮತ್ತು ಟಚ್ ಇನ್ ಪುಟ್
* ಶಬ್ದ ನಿಯಂತ್ರಣ (ನಾಯ್ಸ್ ಕ್ಯಾನ್ಸಲೇಶನ್)
* 3264x2448 ರೆಸೊಲ್ಯೂಷನ್ 8 ಮೆಗಾ ಪಿಕ್ಸಲ್ ಕ್ಯಾಮೆರಾ
* ಡ್ಯೂಯಲ್ ಎಲ್ ಇಡಿ ಫ್ಲಾಶ್, ಜಿಯೋ ಟ್ಯಾಗಿಂಗ್ ಮತ್ತು ಫಿಕ್ಸ್ಡ್ ಫೋಕಸ್
* 720p@30 fps ನಿಂದ ಅತ್ಯಂತ ಗುಣಮಟ್ಟದ ವಿಡಿಯೋ ಸಾಧ್ಯವಿದೆ
* ವಿಡಿಯೋ ಕಾನ್ಫೆರೆಂಸಿಂಗ್ ಗೆ 0.3 ಮೆಗಾ ಪಿಕ್ಸಲ್ VGA ಕ್ಯಾಮೆರಾ
* a1300 mAh ಲಿಯಾನ್ ಬ್ಯಾಟರಿ
* 2ಜಿಗೆ 17 ಗಂಟೆ ಮತ್ತು 3ಜಿಗೆ 6.45 ನಿಮಿಷ ಟಾಕ್ ಟೈಂ, 2ಜಿಗೆ 504 ಗಂಟೆ ಸ್ಟಾಂಡ್ ಬೈ ಟೈಂ ಮತ್ತು 3ಜಿಗೆ 55 ಗಂಟೆ

ಮೊಬೈಲ್ ಜೊತೆ ಅನೇಕ ಅಪ್ಲಿಕೇಶನ್ ಕೂಡ ಲಭ್ಯವಿದ್ದು, RSS feeds, HTML ಮತ್ತು WAP2.0/XHTML ಜೊತೆ MIDP 2.1. ಜಾವಾ ಕೂಡ ಇದೆ. ಇದು ಡಿಜಿಟಲ್ ಕಾಂಪಾಸ್, ಫೋಟೊ ಎಡಿಟರ್, ಪ್ರೆಡಿಕ್ಟಿವ್ ವಾಯ್ಸ್ ಕಮಾಂಡ್ ಹೊಂದಿದೆ. ಇದರೊಂದಿಗೆ NFC Support, MP4/WAV/EAAC+/WMA ಪ್ಲೇಯರ್ ಮತ್ತು MP4/H.263/H.264 ಪ್ಲೇಯರ್ ಬೆಂಬಲಿಸುತ್ತದೆ.

NFC ತಂತ್ರಜ್ಞಾನದೊಂದಿಗೆ EDR and A2DP, WiFi 802.11 b/g ಹೊಂದಿರುವ ಬ್ಲೂಟೂಥ್ 3.0 ಮತ್ತು v2.0 ಮೈಕ್ರೊ USB ಹೊಂದಿದೆ. GSM 850/900/1800/1900 2G ಮತ್ತು HSDPA 850 / 900 / 1700 / 1900 / 2100 3G ನೆಟ್ ವರ್ಕ್ ಗಳನ್ನು ಬೆಂಬಲಿಸುತ್ತದೆ. ಈ ಅತ್ಯಾಕರ್ಷಕ ನೋಕಿಯಾ 701 ಬೆಲೆ ಭಾರತದಲ್ಲಿ 19,000/- ರು ಎಂದು ತಿಳಿದುಬಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X