ಅಡಿಯಿಡಲಿದೆ ಮೊಟೊರೊಲಾ ಅಡ್ಮಿರಲ್ ಫೋನ್

By Super
|
ಅಡಿಯಿಡಲಿದೆ ಮೊಟೊರೊಲಾ ಅಡ್ಮಿರಲ್ ಫೋನ್
ಕಡಿಮೆ ಬೆಲೆಗೆ ಉತ್ಕ್ರಷ್ಟ ಮಟ್ಟದ ಮೊಬೈಲ್ ನೀಡುವಲ್ಲಿ ಹೆಸರುಗಳಿಸಿರುವ ಮೊಟೊರೊಲಾ ಕಂಪನಿ ಮೊಟೊರೊಲಾ ಅಡ್ಮಿರಲ್ XT603 ಎಂಬ ಸ್ಮಾರ್ಟ್ ಫೋನ್ ಡಿಸೆಂಬರ್ ನಲ್ಲಿ ಬಿಡುಗಡೆಗೊಳಿಸಲಿದೆ.

ತುಂಬಾ ಅತ್ಯಾಧುನಿಕ 2.3 ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಮೊಬೈಲ್ ಕ್ವಾಲ್ ಕಂ ಸ್ನಾಪ್ ಡ್ರಾಗನ್ XT603 ಪ್ರೊಸೆಸರ್ ಹೊಂದಿದೆ. ಇದರಲ್ಲಿ ಇನ್ನೂ ಅನೇಕ ವಿಶೇಷತೆಗಳಿವೆ. ಅದೇನೆಂದು ಮುಂದೆ ತಿಳಿಯಿರಿ.

ಮೊಟೊರೊಲಾ XT603 ನಲ್ಲಿನ ವಿಶೇಷತೆ:
* 3.1 ಇಂಚಿನ 480*640 ಪಿಕ್ಸಲ್ ರೆಸೊಲ್ಯೂಷನ್ ಸ್ಕ್ರೀನ್
* ಮಲ್ಟಿ ಟಚ್ ಸ್ಕ್ರೀನ್ ನೊಂದಿಗೆ ಕ್ವೆರ್ಟಿ ಕೀಬೋರ್ಡ್
* 3.5 ಆಡಿಯೋ ಜಾಕ್
* CDMA 800 ಮತ್ತು CDMA 1900 ಸೆಲ್ಯುಲಾರ್ ನೆಟ್ ವರ್ಕ್
* ಬ್ಲೂಟೂಥ್ ಮತ್ತು ವೈ-ಫೈ ಸಂಪರ್ಕ
* ಮೈಕ್ರೊ SD ಕಾರ್ಡ್
* USB 2.0 ಪೋರ್ಟ್ ಮತ್ತು GPS ನೇವಿಗೇಶನ್
* 802.11 b/g/n ವೈರ್ ಲೆಸ್ LAN ಸಂಪರ್ಕ
* 5 ಮೆಗಾ ಪಿಕ್ಸಲ್ ಕ್ಯಾಮೆರಾದೊಂದಿಗೆ (ಡಿಜಿಟಲ್ ಕ್ಯಾಮೆರಾ)
* ಆಟೊ ಫೋಕಸ್ ಮತ್ತು ಆಪ್ಟಿಕಲ್ ಝೂಮ್ ಆಯ್ಕೆ
* ಜೊತೆ ಎಲ್ ಇಡಿ ತಂತ್ರಜ್ಞಾನ ಬೆಂಬಲಿತ ಇಂಟೆಗ್ರೇಟೆಡ್ ಮೊಬೈಲ್ ಲೈಟ್
* 1860 mAh ಲೀಥಿಯಂ ಬ್ಯಾಟರಿ

ಈ ಮೊಟೊರೊಲಾ ಅಡ್ಮಿರಲ್ ಹ್ಯಾಂಡ್ ಸೆಟ್ ಬೆಲೆ 24, 000 ರು ಎಂದು ಅಂದಾಜಿಸಲಾಗಿದ್ದು, ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಹೊಂದುವುದಾಗಿ ನಿರೀಕ್ಷಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X