ಗ್ಯಾಲಕ್ಸಿ ಮೊಬೈಲ್ ನಲ್ಲಿ ಪ್ಲಸ್ ಪಾಯಿಂಟ್ ಏನಿದೆ?

Posted By: Staff

ಗ್ಯಾಲಕ್ಸಿ ಮೊಬೈಲ್ ನಲ್ಲಿ ಪ್ಲಸ್ ಪಾಯಿಂಟ್ ಏನಿದೆ?
ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳ ಜಾಗತಿಕ ಮಾರುಕಟ್ಟೆಗೆ ದಿನೇ ದಿನೇ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಸ್ಯಾಮ್ ಸಂಗ್ ಇದೀಗ ಗ್ಯಾಲಕ್ಸಿ ಎಸ್ ಪ್ಲಸ್ ಎಂಬ ವಿನೂತನ ಸ್ಮಾರ್ಟ್ ಫೋನ್ ಪರಿಚಯಿಸಿದೆ.

ಹಿಂದಿನ ಸ್ಯಾಮ್ ಸಂಗ್ ಮೊಬೈಲ್ ಗಳಿಗಿಂತ ಈ ಹ್ಯಾಂಡ್ ಸೆಟ್ ಅನೇಕ ವಿಶೇಷತೆ ಹೊಂದಿದೆ. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಜಿಂಜರ್ ಬರ್ಡ್ ಆಯಾಮ 2.3 ಹೊಂದಿದ್ದು, 1.4 ಗಿಗಾ ಹಟ್ಸ್ ಸ್ಕಾರ್ಪಿಯನ್ ಪ್ರೊಸೆಸರ್ ಬೆಂಬಲಿತವಾಗಿದೆ. ಅಡೆರ್ನೊ 205 GPU ಮತ್ತು ಕ್ವಾಲ್ಕಂ MSM 8255T ಸ್ನಾಪ್ ಡ್ರಾಗನ್ ಹೊಸತು. ಹಳೆಯ ಸ್ಯಾಮ್ ಸಂಗ್ ಮೊಬೈಲ್ ಗೆ ಹೋಲಿಸಿದರೆ 40 % ಹೆಚ್ಚು ಉತ್ತಮ ಗುಣಮಟ್ಟ ಪ್ರದರ್ಶಿಸುತ್ತದೆ.

ಈ ಹ್ಯಾಡ್ ಸೆಟ್ 4.0 ಇಂಚಿನ ವಿಸ್ತಾರದ ಸ್ಕ್ರೀನ್ ಹೊಂದಿದ್ದು, ಅತ್ಯಾಧುನಿಕ AMOLED ಟಚ್ ಸ್ಕ್ರೀನ್ ನೊಂದಿಗೆ 480 x 800 ಪಿಕ್ಸಲ್ ರೆಸೊಲ್ಯೂಷನ್ ಪಡೆದುಕೊಂಡಿದೆ. ಇಷ್ಟೆ ಅಲ್ಲ, ಟಚ್ ವಿಝ್ 3.0 ಯೂಸರ್ ಇಂಟರ್ ಫೇಸ್ ಮತ್ತು ಗೊರಿಲ್ಲಾ ಗ್ಲಾಸ್ ಡಿಸ್ಪ್ಲೇ ಆಕರ್ಷಿತವಾಗಿದೆ.

ಮಾಹಿತಿ ವಿನಿಮಯಕ್ಕೆಂದು GPRS, EDGE ನೊಂದಿಗೆ 3ಜಿ ಒದಗಿಸಲಾಗಿದೆ. 32-48 Kbps ವೇಗದ GPRS ಲಭ್ಯವಿದ್ದು, 3ಜಿ 5.76 Mbps ವೇಗ ಹೊಂದಿದೆ. 3.0 ಆಯಾಮದ ಬ್ಲೂಟೂಥ್, A2DP ಮತ್ತು USB ಪೋರ್ಟ್ ನೀಡಲಾಗಿದೆ.

5 ಮೆಗಾ ಪಿಕ್ಸಲ್ ಕ್ಯಾಮೆರಾ ಸ್ಪಷ್ಟ ಚಿತ್ರ ನೀಡಲಿದ್ದು, ಜಿಯೋ ಟ್ಯಾಗಿಂಗ್ ಮತ್ತು ಟಚ್ ಫೋಕಸ್, ಮತ್ತು ಅಡೆರ್ನೊ 205 ಜಿಪಿಯು ಇದೆ. 720p@30fps ವಿಡಿಯೋ ರೆಕಾರ್ಡಿಂಗ್ ನೊಂದಿಗೆ ಉತ್ಕ್ರಷ್ಟ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಸಾಧ್ಯವಿದೆ. ಲಿಯಾನ್ 1650 mAh ಬ್ಯಾಟರಿ 6 ಗಂಟೆ ಟಾಕ್ ಟೈಂ, 3ಜಿಗಾದರೆ 30 ನಿಮಿಷ ಮತ್ತು 2ಜಿನಲ್ಲಿ 12 ಗಂಟೆ 50 ನಿಮಿಷ ಟಾಕ್ ಟೈಂ ನೀಡುತ್ತದೆ.

ಈ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ ಪ್ಲಸ್ ಬೆಲೆ 22,000 ರು ಎಂದು ಕಂಪನಿ ತಿಳಿಸಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot