ಬಿಟ್ಟರೆ ಮತ್ತೆ ಸಿಗೊಲ್ಲ ಈ ಚಾಕಲೇಟ್ ಫೋನ್

ಚಾಕಲೇಟ್ ಬಾರ್ ನಂತಿರುವ ಶಾರ್ಪ್ ಕ್ಯೂ ಪಾಡ್ ಮೊಬೈಲ್ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಲು ಶಾರ್ಪ್ ಕಂಪನಿ ಸಿದ್ಧವಾಗಿದ್ದು, ಅಕ್ಟೋಬರ್ 18 ಕ್ಕೆ ಬಿಡುಗಡೆಗೊಳ್ಳಲಿದೆ.
ಈ ಶಾರ್ಪ್ ಡಿಸೈನ್ ಚಾಕಲೇಟ್ ಬಾರ್ ನಂತಿದ್ದು, ತುಂಬಾ ಆಕರ್ಷಕವಾಗಿದೆ. ಎಲ್ಲ ವಯೋಮಿತಿಯವರಿಗೂ ಇಷ್ಟವೆನಿಸುವ ಈ ಮೊಬೈಲ್ ಸಿಂಗಲ್ ಕೋರ್ ಸ್ನಾಪ್ ಡ್ರಾಗನ್ ಪ್ರೊಸೆಸರ್ ಹೊಂದಿದೆ.
1 ಗಿಗಾ ಹಟ್ಸ್ ಬೆಂಬಲಿತ MSM 8255 ಮತ್ತು 512 ಎಂಬಿ RAM ಇದರಲ್ಲಿದೆ. 3.7 ಇಂಚಿನ LCD ಸ್ಕ್ರೀನ್ ಡಿಸ್ಪ್ಲೇ ಮತ್ತು 540*960 ಪಿಕ್ಸಲ್ ರೆಸೊಲ್ಯೂಷನ್ ಹೊಂದಿದೆ. QHD ರೆಸೊಲ್ಯೂಷನ್ ಸಲುವಾಗಿ ಟಚ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. 8 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿರುವ ಈ ಮೊಬೈಲ್ ನಲ್ಲಿ LED ಫ್ಲಾಶ್ ಲೈಟ್ ಮತ್ತು ವಾಟರ್ ಪ್ರೂಫ್ ಸೌಲಭ್ಯ ನೀಡಲಾಗಿದೆ.
ಇದರಲ್ಲಿರುವ ಚಾಕೊಬೆಡ್ ಚಾರ್ಜಿಂಗ್ ಗೆ ನೆರವಾಗಲಿದೆ. 802.11 b/ g/ n ನೊಂದಿಗೆ ಬ್ಲೂಟೂಥ್, ವೈ-ಫೈ ಜೊತೆಗೆ USB ಸಂಪರ್ಕ ನೀಡಲಾಗಿದೆ. HDMI ಔಟ್ ಪುಟ್ ಹೈ ಡೆಫೆನಿಶನ್ ವೀಡಿಯೋ ರೆಕಾರ್ಡಿಂಗ್ ನೀಡಲಿದೆ. ಉತ್ಕ್ರಷ್ಟ ಮಟ್ಟದ ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದ್ದು, ಟಾಕ್ ಟೈಂ ಮತ್ತು ಸ್ಟಾಂಡ್ ಬೈ ಟೈಂ ಉತ್ತಮವಾಗಿದೆ.
ಅಕ್ಟೋಬರ್ 18, 2011 ಗೆ ಬಿಡುಗಡೆಗೊಳ್ಳುತ್ತಿರುವ ಈ ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ.


Click it and Unblock the Notifications







