ವೈದ್ಯಕೀಯ ಪ್ರಪಂಚಕ್ಕೆ ಈ ಸ್ಮಾರ್ಟ್ ಫೋನ್ ಉಡುಗೊರೆ

ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ ಮೊಬಿಸ್ಯಾಂಟ್ ಕಂಪನಿಯ ಅಲ್ಟ್ರಾ ಸೌಂಡ್ ಮೊಬಿUS ಎಂಬ ವಿನೂತನ ಸ್ಮಾರ್ಟ್ ಫೋನ್ ಆರೋಗ್ಯ ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಲು ಹೊರಟಿದೆ.
ಬಳಕೆಗೆ ಸುಲಭವೆನಿಸಿದ್ದು, ಮೆಡಿಕಲ್ ಪ್ರಪಂಚಕ್ಕೆ ಅನುವಾಗುವ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಈ ಮೊಬೈಲ್ ನಲ್ಲಿ ಏನೇನು ವಿಶೇಷತೆ ಇದೆ ಎಂದು ಇಲ್ಲಿ ತಿಳಿಯೋಣ:
ಅಲ್ಟ್ರಾ ಸೌಂಡ್ ಮೊಬಿUS ವಿಶೇಷತೆ:
* ಮೆಡಿಕಲ್ ಡಯಾಗ್ನಾಸಿಸ್ ಉದ್ದೇಶಗಳಿಗೆ ಬಳಸಲಾಗುವ ಅಲ್ಟ್ರಾ ಸೌಂಡ್ ಇಮೇಜಿಂಗ್ ವ್ಯವಸ್ಥೆ
* ಮೆಡಿಕಲ್ ಡಯಾಗ್ನಾಸಿಸ್ ಗೆ ಬಳಸಬಹುದಾಗಿದೆ ( ಅಬ್ಡಾಮಿನಲ್ ಇಮೇಜಿಂಗ್ ಮತ್ತು ಫೀಟಲ್ ಇಮೇಜಿಂಗ್ )
* ವ್ಯಾಸ್ಕುಲಾರ್ DVT ಮತ್ತು ವ್ಯಾಸ್ಕುಲರ್ ಅಕ್ಸೆಸ್ ಚಿಕಿತ್ಸೆಗೂ ಮಾರ್ಗದರ್ಶಕವೆನಿಸುತ್ತದೆ
* ಎಕ್ಟೋಪಿಕ್ ಗರ್ಭಧಾರಣೆ ಮತ್ತು ಆಮ್ನಿಯಾಟಿಕ್ ಫ್ಲುಯಿಡ್ ಅಸೆಸ್ ಮೆಂಟ್ ನ ವಿಶ್ಲೇಷಣೆಗೂ ಸಹಕರಿಸಲಿದೆ.
ಬಿಳಿ ಬಣ್ಣದ ಪ್ಯಾನೆಲ್ ನೊಂದಿಗೆ ಆಕರ್ಷಕವಾಗಿ ಹೊರಬಂದಿರುವ ಈ ಸ್ಮಾರ್ಟ್ ಫೋನ್ ವೈದ್ಯರಿಗೆ ಮತ್ತು ಮೆಡಿಕಲ್ ಲ್ಯಾಬ್ ತಂತ್ರಜ್ಞರಿಗೆ ಹೆಚ್ಚು ಸೂಕ್ತವಾಗಿದೆ. 4.1 ಇಂಚು WVGA ಡಿಸ್ಪ್ಲೇ, 800*480 ಪಿಕ್ಸಲ್ ರೆಸೊಲ್ಯೂಷನ್ ಹೊಂದಿರುವ ಈ ಮೊಬೈಲ್ ನಲ್ಲಿ 8ಜಿಬಿವರೆಗೂ ಮೆಮೊರಿ ಸಾಮರ್ಥ್ಯವಿದೆ.
ತೋಷಿಬಾ TG101 ಸ್ಮಾರ್ಟ್ ಫೋನ್ ನ ವಿಂಡೋಸ್ ಮೊಬೈಲ್ 6.5 ಬೆಂಬಲಿತವಾಗಿರುವ ಮೊಬಿಯುಎಸ್ ಸ್ಮಾರ್ಟ್ ಫೋನ್ ನಲ್ಲಿ ಡಯಾಗ್ನಿಸಿಸ್ ಸಹಾಯಕ್ಕೆಂದು USB 2.0 ಪೋರ್ಟ್ ನೀಡಲಾಗಿದೆ. ವಿಂಡೋಸ್ ಎಕ್ಸ್ ಪಿ, ವಿಂಡೋಸ್ ವಿಸ್ತಾ ಮತ್ತು ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಹೊಂದಿದೆ.
ಹೃದಯದ, ರಕ್ತನಾಳದ ವಿಮರ್ಶೆಗೂ ಇದು ಸಹಕಾರಿಯಾಗಲಿದೆ. ತುರ್ತು ಪರಿಸ್ಥಿತಿಯಲ್ಲಿ ವೈದ್ಯರು ಇದರ ಸಂಪೂರ್ಣ ಉಪಯೋಗ ಹೊಂದಬಹುದು. ದೊಡ್ಡ ಆಸ್ಪತ್ರೆ ಮತ್ತು ಆರೋಗ್ಯ ಸಂಸ್ಥೆಗಳನ್ನು ಉದ್ದೇಶವಾಗಿಟ್ಟುಕೊಂಡು ತಯಾರಿಸಿರುವ ಈ ಮೊಬೈಲ್ ಬೆಲೆ 3, 37, 500 ರು ಎಂದು ತಿಳಿಸಿದೆ.


Click it and Unblock the Notifications







