ನೋಕಿಯಾ ತಂದಿದೆ ಬಣ್ಣ ಬಣ್ಣದ ಸ್ಮಾರ್ಟ್ ಫೋನ್

Posted By: Staff

ನೋಕಿಯಾ ತಂದಿದೆ ಬಣ್ಣ ಬಣ್ಣದ ಸ್ಮಾರ್ಟ್ ಫೋನ್
ಸ್ಮಾರ್ಟ್ ಫೋನ್ ಸರಣಿಗೆ ನೋಕಿಯಾ ತನ್ನ ಇನ್ನೊಂದು ವಿನೂತನ ಮೊಬೈಲ್ ಸೇರಿಸಿದೆ. ಚಿತ್ತಾಕರ್ಶಕ ಬಣ್ಣಗಳಲ್ಲಿ ನೋಕಿಯಾ 710 ಮೊಬೈಲ್ ಬಿಡುಗಡೆ ಮಾಡಿರುವ ನೋಕಿಯಾ ಗ್ರಾಹಕರನ್ನು ತೃಪ್ತಿಪಡಿಸಲು ಅನೇಕ ಸವಲತ್ತುಗಳನ್ನೂ ನೀಡಿದೆ.

ಬಳಕೆದಾರರ ಅನುಕೂಲಕ್ಕೆಂದು ಮೊಬೈಲ್ ನಲ್ಲಿ 521 ಎಂಬಿ Ram ಬೆಂಬಲಿತ 1.4 ಗಿಗಾ ಹಟ್ಸ್ ಪ್ರೊಸೆಸರ್ ಹೊಂದಿಸಲಾಗಿದೆ. ನೋಡಿದ ತಕ್ಷಣವೇ ಮನಸ್ಸಿಗೆ ಇಷ್ಟವಾಗುವಂತಹ ಆಕರ್ಷಕ ಡಿಸ್ಪ್ಲೇ ಡಿಸೈನ್ ಹೊಂದಿದೆ. 3.7 ಇಂಚಿನ ಡಿಸ್ಪ್ಲೇ ಇರುವ ಈ ಸ್ಮಾರ್ಟ್ ಫೋನ್ ನಲ್ಲಿ ಟಚ್ ಸ್ಕ್ರೀನ್ ಜೊತೆ ಮಲ್ಟಿ ಟಚ್ ಆಯ್ಕೆಯೂ ಇದೆ.

ನೋಕಿಯಾ 710 ಮೊಬೈಲ್ ಆಂತರಿಕ ಮೆಮೊರಿ 8 ಜಿಬಿಯಾಗಿದ್ದು, ಇದು ಸಾಕೆನಿಸದಿದ್ದ ಪಕ್ಷದಲ್ಲಿ ಬೇರೆ ಮೆಮೊರಿ ಕಾರ್ಡ್ ಮೂಲಕ ಮೆಮೊರಿ ಸಂಗ್ರಹಣಾ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದು. 5 ಮೆಗಾ ಪಿಕ್ಸಲ್ ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ನಲ್ಲಿ ಉತ್ತಮ ಗುಣಮಟ್ಟದ ಚಿತ್ರಣ ಪಡೆಯಬಹುದು. ವಿಡಿಯೋ ರೆಕಾರ್ಡಿಂಗ್ ಗೆಂದು 720 p HD ಸಾಮರ್ಥ್ಯ ಕೂಡ ಕ್ಯಾಮೆರಾ ನೀಡುತ್ತದೆ.

ಇದರಲ್ಲಿ ಇನ್ನೂ ಅತ್ಯಾಧುನಿಕವಾದ GPS, ವೈ-ಫೈ, ಬ್ಲೂಟೂಥ್ ಮತ್ತು ಸಾಮಾಜಿಕ ತಾಣಗಳೂ ಲಭ್ಯವಿದೆ. ಸ್ಟಾಂಡರ್ಡ್ 820 mAh ಬ್ಯಾಟರಿ ಹೊಂದಿರುವ ಮೊಬೈಲ್, 7 ಗಂಟೆ ಟಾಕ್ ಟೈಂ ಮತ್ತು 400 ಗಂಟೆ ಸ್ಟಾಂಡ್ ಬೈ ಟೈಂ ನೀಡುತ್ತದೆ. ಆದರೆ ನೋಕಿಯಾ 710 ಸ್ಮಾರ್ಟ್ ಫೋನ್ ನಿಖರ ಬೆಲೆ ಇನ್ನೂ ತಿಳಿದುಬಂದಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot