ಸೋನಿ ಎರಿಕ್ಸನ್ ಪರಿಷ್ಕ್ರತ X8 ಸ್ಮಾರ್ಟ್ ಪೋನ್ ಸಿದ್ಧ

By Super
|
ಸೋನಿ ಎರಿಕ್ಸನ್ ಪರಿಷ್ಕ್ರತ X8 ಸ್ಮಾರ್ಟ್ ಪೋನ್ ಸಿದ್ಧ
ಸೋನಿ ಕಂಪನಿ ಗುಣಮಟ್ಟದ ತಂತ್ರಜ್ಞಾನ ನೀಡುವಲ್ಲಿ ಹೆಸರುವಾಸಿ. 2010 ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಂಡ ಸೋನಿ ಎರಿಕ್ಸನ್ ಎಕ್ಸ್ ಪೀರಿಯಾ X8 ಇದೀಗ ಪರಿಷ್ಕ್ರತ ರೀತಿಯಲ್ಲಿ ಮೂಡಿಬಂದಿದೆ.

3ಜಿ ಇರುವ ಸೋನಿ ಎರಿಕ್ಸನ್ X8 ಮೊಬೈಲ್, ಆಂಡ್ರಾಯ್ಡ್ 1.6 ಆಪರೇಟಿಂಗ್ ಸಿಸ್ಟಮ್ ನಿಂದ 2.1 ಗೆ ಪರಿಷ್ಕ್ರತಗೊಂಡಿದ್ದು, 128 ಎಂಬಿ ಮೆಮೊರಿಯೊಂದಿಗೆ 168 ಎಂಬಿ RAM ಇದ್ದದ್ದು ಇದೀಗ 16 ಜಿಬಿಗೆ ಪರಿಷ್ಕ್ರತಗೊಂಡಿದೆ.

ಕೇವಲ 104 ಗ್ರಾಂ ತೂಕವಿರುವ ಈ ಸ್ಮಾರ್ಟ್ ಫೋನ್, ಬೆಳ್ಳಿ ಮತ್ತು ಬಿಳಿ ಮಿಶ್ರಣ, ತೆಳು ನೀಲಿ ಮತ್ತು ಬಿಳಿ ಮಿಶ್ರಣ, ಪಿಂಕ್ ಮತ್ತು ಬಿಳಿ, ಬಿಳಿ ಬಣ್ಣ, ಹೀಗೆ ಚಿತ್ತಾಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಟಚ್ ನೊಂದಿಗೆ 3 ಬಟನ್ ನೀಡಲಾಗಿದ್ದು, ಮನಮೋಹಕವಾಗಿದೆ.

ಸೋನಿ ಎರಿಕ್ಸನ್ X8 ವಿಶೇಷತೆ:
* 2 ಜಿಬಿ ಮೈಕ್ರೊ SD ಕಾರ್ಡ್
* 3 ಇಂಚಿನ TFT ಟಚ್ ಸ್ಕ್ರೀನ್, 320x480 ಪಿಕ್ಸಲ್ ರೆಸೊಲ್ಯೂಷನ್
* 16 ಮಿಲಿಯನ್ ಕಲರ್ ಬೆಂಬಲಿಸುವ ಸ್ಕ್ರೀನ್
* 3.2-ಮೆಗಾ ಪಿಕ್ಸಲ್, 2048x1536 ಪಿಕ್ಸಲ್ ರೆಸೊಲ್ಯೂಷನ್ ಕ್ಯಾಮೆರಾ, ಜಿಯೋಟ್ಯಾಗಿಂಗ್ ಸೌಲಭ್ಯ
* ಸ್ಕ್ರಾಚ್ ಪ್ರೂಫ್
* ಪ್ರಾಕ್ಸಿಮಿಟಿ ಸೆನ್ಸಾರ್, ಟೈಂಸ್ಕೇಪ್ ಯೂಸರ್ ಇಂಟರ್ ಫೇಸ್, ಅಕ್ಸೆಲೆರೋಮೀಟರ್ ಸೆನ್ಸಾರ್
* 3 ಜಿಗೆ HSUPA 2 Mbps ಮತ್ತು HSDPA 7.2 Mbps ಡೌನ್ ಲೋಡ್ ಸ್ಪೀಡ್
* EDGE (up to 236.8 kbps), GPRS (up to 85.6 kbps) ಮತ್ತು WLAN (Wi-Fi 802.11 b/g)
* MP3, MP4, WAV ಮತ್ತು WMV ಫಾರ್ಮೆಟ್
* ಬ್ಲೂಟೂಥ್ (v2.1 ಜೊತೆ A2DP), ಮತ್ತು USB (v2.0 ಮೈಕ್ರೊ USB)
* ಲಿ-ಪೊ 1200 mAh ಸ್ಟಾಂಡರ್ಡ್ ಬ್ಯಾಟರಿ, 2ಜಿಗೆ 446 ಗಂಟೆ ಸ್ಟಾಂಡ್ ಬೈ ಟೈಂ ಮತ್ತು 3ಜಿಗೆ 476 ಗಂಟೆ, 2ಜಿಗೆ ಟಾಕ್ ಟೈಂ 4 ಗಂಟೆ 45 ನಿಮಿಷ, 3ಜಿನಲ್ಲಿ 5 ಗಂಟೆ 40 ನಿಮಿಷ, 23 ಗಂಟೆ 40 ನಿಮಿಷ ಮ್ಯೂಸಿಕ್ ಪ್ಲೇಯರ್ ಬ್ಯಾಟರಿ

ಇದರಲ್ಲಿ ಶಾರ್ಟ್ ಕಟ್ ವಿಧಾನವೂ ಇದ್ದು, ಮೇಲ್, ಮ್ಯಾಬ್ ಮುಂತಾದುವು ಹೋಮ್ ಸ್ಕ್ರೀನ್ ನಲ್ಲಿಯೇ ಕಾಣಲಿದೆ. ಗೂಗಲ್ ಸರ್ಚ್, ಜಿಮೇಲ್, ಗೂಗಲ್ ಟಾಕ್, ಮ್ಯಾಪ್, ಕ್ಯಾಲೆಂಡರ್, ಯೂಟೂಬ್, ನೇವಿಗೇಶನ್ ಗೆಂದು GPS ವ್ಯವಸ್ಥೆಯೂ ಇದರಲ್ಲಿದೆ.

SNS integration, ಜಾವಾ MIDP ಎಮ್ಯುಲೇಟರ್, ಪ್ರೆಡಿಕ್ಟಿವ್ ಟೆಕ್ಸ್ಟ್ ಇನ್ ಪುಟ್ ವಾಯ್ಸ್ ಮೆಮೊ, ಡಿಜಿಟಲ್ ಕಾಂಪಾಸ್ ಇನ್ನಿತರ ಸೌಲಭ್ಯವೂ ನಿಮಗೆ ಈ ಸ್ಮಾರ್ಟ್ ಫೋನ್ ನಲ್ಲಿ ದೊರೆಯಲಿದೆ. ಸೋನಿ ಎರಿಕ್ಸನ್ X8 ಬೆಲೆ ಭಾರತದಲ್ಲಿ ಸುಮಾರು 11,000 ರು ಆಗಿದ್ದು, ಆನ್ ಲೈನ್ ನಲ್ಲಿ 8,699 ರುಗೆ ಲಭ್ಯವಿರುವುದಾಗಿ ತಿಳಿದುಬಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X