ಕಾರ್ಬನ್ ತರಲಿದೆ ನಾಲ್ಕು ಆಕರ್ಷಕ ಸ್ಮಾರ್ಟ್ ಫೋನ್

Posted By: Staff

ಕಾರ್ಬನ್ ತರಲಿದೆ ನಾಲ್ಕು ಆಕರ್ಷಕ ಸ್ಮಾರ್ಟ್ ಫೋನ್
ಅಗ್ಗದ ಬೆಲೆಗೆ ಉನ್ನತ ಮೊಬೈಲ್ ಗಳನ್ನು ನೀಡುತ್ತಾ ಬಂದಿರುವ ಕಾರ್ಬನ್ ಒಟ್ಟಿಗೇ ನಾಲ್ಕು ಟಚ್ ಸ್ಕ್ರೀನ್ ಮೊಬೈಲ್ ಪರಿಚಯಿಸಲಿದೆ. ಕಾರ್ಬನ್ K1616, K1818, K1515 ಮತ್ತು K1010 ಎಂಬ ನಾಲ್ಕು ಟಚ್ ಸ್ಕ್ರೀನ್ ಮೊಬೈಲ್ ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಸುದ್ದಿ ಮಾಡಲಿವೆ.

ಈ ನಾಲ್ಕು ಮೊಬೈಲ್ ಗಳ ವಿಶೇಷತೆಯನ್ನು ತಿಳಿಯೋಣ:

ಕಾರ್ಬನ್ K1616 ಸ್ಮಾರ್ಟ್ ಫೋನ್: 3.5 ಇಂಚಿನ HVGA ಸ್ಕ್ರೀನ್ ಡಿಸ್ಪ್ಲೇ ಜೊತೆ 480*320 ಪಿಕ್ಸಲ್ ರೆಸೊಲ್ಯೂಷನ್ ಹೊಂದಿದೆ. ಈ ಟಚ್ಚ್ ಸ್ಕ್ರೀನ್ ಮೊಬೈಲ್ ನ್ಲಲಿ 3 ಡಿ ಯೂಸರ್ ಇಂಟರ್ ಫೇಸ್ ನೀಡಲಾಗಿದ್ದು, ಜಿ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸೆಲೆರೊಮೀಟರ್ ಇದೆ. 3.2 ಮೆಗಾ ಪಿಕ್ಸಲ್ ಕ್ಯಾಮೆರಾ ನೊಂದಿಗೆ KZone ಎಂಬ ನೂತನ ಅಪ್ಲಿಕೇಶನ್ ಅಳವಡಿಸಲಾಗಿದೆ.

ಇದರಿಂದ ನಿಮ್ಮಗಿಷ್ಟದ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಾಗಲಿದೆ. EDGE ಬೆಂಬಲಿತವಾಗಿರುವ ಈ ಮೊಬೈಲ್ GPRS ಗಿಂತ ಹೆಚ್ಚು ವೇಗವಾಗಿ ಕೆಲಸ ನಿರ್ವಹಿಸುತ್ತದೆ.

ಕಾರ್ಬನ್ K1818 ಸ್ಮಾರ್ಟ್ ಫೋನ್: K1616 ನ ಹಲವು ಹೋಲಿಕೆ ಹೊಂದಿರುವ ಈ ಮೊಬೈಲ್ ನಲ್ಲಿರುವ ಒಂದು ವ್ಯತ್ಯಾಸವೆಂದರೆ ಸ್ಕ್ರೀನ್ ಡಿಸ್ಪ್ಲೇ. 3.2 ಇಂಚಿನ ಡಿಸ್ಪ್ಲೇ ಯೊಂದಿಗೆ WQVGA 430*240 ಪಿಕ್ಸಲ್ ರೆಸೊಲ್ಯೂಷನ್ ಹೊಂದಿದೆ. 8 ಜಿಬಿ ಮೆಮೊರಿ ವಿಸ್ತರಣಾ ಸಾಮರ್ಥವೂ ಇದರಲ್ಲಿದೆ.

ಕಾರ್ಬನ್ K1515: K1818 ನ ಹೋಲಿಕೆಯನ್ನೂ ಇದು ಪಡೆದುಕೊಂಡಿದ್ದು, GPRS ಮತ್ತು ಕ್ಯಾಮೆರಾ ಸೌಲಭ್ಯ ಒದಗಿಸಲಾಗಿದೆ. 2 ಮೆಗಾ ಪಿಕ್ಸಲ್ ಕ್ಯಾಮೆರಾದೊಂದಿಗೆ 8ಜಿಬಿ ಮೆಮೊರಿ ವಿಸ್ತರಣಾ ಸಾಮರ್ಥ್ಯವಿದೆ. ಜೊತೆಗೆ ಬಹುಭಾಷಾ ಬೆಂಬಲಿತ ತಂತ್ರಜ್ಞಾನ ಇದರಲ್ಲಿದೆ.

ಕಾರ್ಬನ್ K1010: ತುಂಬಾ ಕಡಿಮೆ ಬೆಲೆಯದ್ದಾಗಿದ್ದಾಗಿರುವ ಕಾರ್ಬನ್ K1010 2.8 ಇಂಚಿನ ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ. 8ಜಿ ಬಿ ಮೆಮೊರಿ ವಿಸ್ತರಣಾ ಸಾಮರ್ಥ್ಯ ಒದಗಿಸಲಾಗಿದ್ದು, ವೆಬ್ ಬ್ರೌಸಿಂಗ್ ಗಾಗಿ GPRS ನೀಡಲಾಗಿದೆ. 1.3 ಮೆಗಾ ಪಿಕ್ಸಲ್ ಕ್ಯಾಮೆರಾ ಕೂಡ ಇದೆ. ಆದರೆ ಇದರಲ್ಲಿ KZone ಅಪ್ಲಿಕೇಶನ್ ನೀಡಲಾಗಿಲ್ಲ.

ಕಾರ್ಬನ್ K1616 ಬೆಲೆ ಸುಮಾರು 4,600ರೂ, ಕಾರ್ಬನ್ K1818 ಮೊಬೈಲ್ 3,700 ರು, ಕಾರ್ಬನ್ K1515 3,800ರು ಮತ್ತು K1010 ಬೆಲೆ ಸುಮಾರು 3,000 ರು ಎಂದು ಅಂದಾಜಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot