ಬಡಾ ಮೇಲೆ ಸ್ಯಾಮ್ ಸಂಗ್ ಪ್ರೀತಿ, ಆಂಡ್ರಾಯ್ಡ್ ಗೆ ???

Posted By: Staff

ಬಡಾ ಮೇಲೆ ಸ್ಯಾಮ್ ಸಂಗ್ ಪ್ರೀತಿ, ಆಂಡ್ರಾಯ್ಡ್ ಗೆ ???
ಸ್ಯಾಮ್ ಸಂಗ್ ಮೊಬೈಲ್ ಗೆ ಆಂಡ್ರಾಯ್ಡ್ ಮೇಲಿನ ಮಮಕಾರ ಕಡಿಮೆಯಾಗಿ, ಅದರ ಪ್ರೀತಿ ಮತ್ತೆ ಬಡಾ ಅಪರೇಡಿಂಗ್ ಕಡೆ ತಿರುಗಿದೆಯೆ ? ಹೌದು ಸ್ಯಾಮ್ ಸಂಗ್ ಮುಂದಿನ ಹೆಜ್ಜೆ ಏನು ಎಂಬುದನ್ನು ಅದನ್ನು ಹೊರೆತು ಬೇರೆ ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.

ಬಡಾ ಆಪರೇಟಿಂಗ್ ಸಿಸ್ಟಮ್ ಸ್ಯಾಮ್ ಸಂಗ್ ಮೊಬೈಲ್ ಮಾರುಕಟ್ಟೆಯಲ್ಲಿ ಕಂಪನಿಗೆ ಹಿಂದೊಮ್ಮೆ ಸಾಕಷ್ಟು ಕೊಡುಗೆಯನ್ನು ನೀಡಿತ್ತು, ಅಲ್ಲದೆ ಬಳಕೆದಾರರ ಮೆಚ್ಚುಗೆಯನ್ನು ಸಹ ಗಳಿಸಿತ್ತು.

ನಂತರ ಸ್ಯಾಮ್ ಸಂಗ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಇರುವ ಸಾಕಷ್ಟು ಮೊಬೈಲ್ ಗಳನ್ನು ಬಿಡುಗಡೆ ಮಾಡಿದ್ದರೂ ಬಡಾ ಮೊಬೈಲ್ ಈಗಲೂ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದೆ.

ಬಡಾ ಆಪರೇಟಿಂಗ್ ಸಿಸ್ಟಮ್ ಇರುವ ಸ್ಮಾರ್ಟ್ ಪೋನ್ ಗಳನ್ನು ಸಹ ಅತ್ಯುತ್ತಮವಾದ ಮೊಬೈಲ್ ಗಳೆಂದು ಪರಿಗಣಿಸಲ್ಪಟ್ಟಿದೆ. ಬಡಾ ಸಿಸ್ಟಮ್ ಬಳಕೆದಾರರಿಗೆ ಮೊಬೈಲ್ ನಲ್ಲಿ ಅಧಿಕ ಕಾರ್ಯಗಳನ್ನು ಒಮ್ಮೆಲೆ ಮಾಡುವಂತೆ ಸಹಾಯಕವಾಗಿದೆ.

ಈ ಸಿಸ್ಟಮ್ ಬಳಸುವುದರ ಒಂದು ದೋಷ ಏನಪ್ಪಾ ಅಂದರೆ ಒಂದು ಅಪ್ಲಿಕೇಶನ್ ನಿಂದ ಮತ್ತೊಂದು ಅಪ್ಲಿಕೇಶನ್ ಗೆ ಬದಲಾಯಿಸುವ ದರ ಪ್ರೊಸೆಸಿಂಗ್ ಪವರ್ ಆಗಿದೆ. ಮಲ್ಟಿ ಟಾಸ್ಕ್ ನಲ್ಲಿ ಪ್ರೊಸೆಸಿಂಗ್ ಪವರ್ ಯಾವಾಗಲೂ ಅವಶ್ಯಕವಾಗಿದೆ.

ಸ್ಯಾಮ್ ಸಂಗ್ ಮೊಬೈಲ್ ಸಲ್ಯೂಶನ್ ಕೇಂದ್ರದ ಮುಖ್ಯಸ್ಥರಾದ ಲೀ ಹೊ ಸೂ ಕಂಪನಿ ಈ ಹೊಸ ಯೋಜನೆಯ ಬಗ್ಗೆ ಯಾವುದೆ ಮಹತ್ತರ ನಿರ್ಧಾರ ತೆಗೆದು ಕೊಂಡಿಲ್ಲ. ಒಂದು ವೇಳೆ ಕಂಪನಿ ಹೊಸ ಆವಿಷ್ಕಾರವನ್ನು ತಂದರೆ ಅದು ನಿರೀಕ್ಷೆಗೆ ತಕ್ಕದಾಗಿರುತ್ತದೆ ಎಂದಿದ್ದಾರೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot