ಸ್ಮಾರ್ಟ್ ಫೋನ್ ಜಗತ್ತಿನತ್ತ ಸೋನಿ ಎರಿಕ್ಸನ್ ಚಿತ್ತ

ಕಂಪನಿ ಸ್ಮಾರ್ಟ್ ಫೋನ್ ವಹಿವಾಟಿಗೆ ಇದೇ ಮೊದಲು ಕಾಲಿಡುತ್ತಿಲ್ಲ. ಎರಡು ವರ್ಷದ ಮೊದಲೊಮ್ಮೆ ಪ್ರವೇಶಿಸಿ ಕಾಲು ಸುಟ್ಟುಕೊಂಡಿತ್ತು.
"ಕಂಪನಿಯು ವಹಿವಾಟಿನಲ್ಲಿ ಸುಮಾರು 80 % ಮಾರಾಟ ಹೊಂದಬೇಕಾದರೆ ವಿನೂತನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳನ್ನು ಹೊರತರಬೇಕು. ಇದುವರೆಗೂ ಕಂಪನಿ 22 ಮಿಲಿಯನ್ ಎಕ್ಸ್ ಪಿರಿಯಾ ಸಿರೀಸ್ ಹ್ಯಾಂಡ್ ಸೆಟ್ ಗಳನ್ನು ಮಾರಾಟ ಮಾಡಿದೆ. ಆದರೆ ಸಿಂಬಿಯಾನ್ ಸರಣಿಯ ಫೋನ್ ಗಳನ್ನು ಅಭಿವೃದ್ಧಿಪಡಿಸಿದರೆ ಕಂಪನಿ ಇನ್ನಷ್ಟು ಪ್ರಗತಿ ಕಾಣಲಿದೆ" ಎಂದು ಸೋನಿ ಸಿಇಒ ಬರ್ಟ್ ನಾರ್ಡ್ ಹೇಳುತ್ತಾರೆ.
ಈಗ ಕಂಪನಿಯು ಪ್ರತಿವರ್ಷ ಶೇಕಡ 8ರಷ್ಟು ಮಾರಾಟ ಹೆಚ್ಚಿಸಿಕೊಳ್ಳುತ್ತಿದೆ. ಜಾಗತಿಕ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಸೋನಿ ಮಾರುಕಟ್ಟೆ ಪಾಲು ಶೇಕಡ 12ರಷ್ಟಿದೆ. ಇದು ಕಂಪನಿಯ ಸ್ಮಾರ್ಟ್ ಫೋನ್ ವಹಿವಾಟಿಗೆ ಇನ್ನಷ್ಟು ಹುರುಪು ನೀಡಲಿದೆ ಎಂದು ಅವರು ಹೇಳಿದ್ದಾರೆ.
"ಮಧ್ಯಮ ವರ್ಗದ ಜನರನ್ನು ಉದ್ದೇಶವಾಗಿಟ್ಟುಕೊಂಡು ಮಾರುಕಟ್ಟೆಗೆ ಹೆಚ್ಚು ಸ್ಮಾರ್ಟ್ ಫೋನ್ ಪರಿಚಯಿಸುವುದರಿಂದ ನಷ್ಟವನ್ನು ತುಂಬಿಕೊಳ್ಳಬಹುದು" ಎಂದರು. "ಸ್ಮಾರ್ಟ್ ಪೋನ್ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಿರುವುದರಿಂದ ವಿನೂತನ ಸ್ಮಾರ್ಟ್ ಫೋನ್ ಸಾಧನಗಳನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚು ಚಿಂತಿಸಬೇಕಿದೆ" ಎಂದು ಬರ್ಟ್ ಹೇಳುತ್ತಾರೆ.


Click it and Unblock the Notifications