ಬ್ಲಾಕ್ ಬೆರಿ ನೀಡುತ್ತಿದೆ ಬಂಪರ್ 12 ಉಚಿತ ಅಪ್ಲಿಕೇಶನ್

By Super
|
ಬ್ಲಾಕ್ ಬೆರಿ ನೀಡುತ್ತಿದೆ ಬಂಪರ್ 12 ಉಚಿತ ಅಪ್ಲಿಕೇಶನ್
ದಿನಕ್ಕೊಂದು ಹೊಸ ಅಪ್ಲಿಕೇಶನ್ ಮೊಬೈಲ್ ನಲ್ಲಿ ಬಳಸಲಾಗುತ್ತಿದೆ, ಈ ಅಪ್ಲಿಕೇಶನ್ ಗಳಿಂದ ಮೊಬೈಲ್ ತನ್ನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚೆಸುತ್ತಿದೆ. ಅತ್ಯುತ್ತಮ ಮೊಬೈಲ್ ಗಳಲ್ಲಿ ಬ್ಲಾಕ್ ಬೆರಿ ಕೂಡ ಒಂದಾಗಿದ್ದು ಈಗ ತನ್ನ ಬಳಕೆದಾರರಿಗಾಗಿ ಹೊಸ 12 ಅಪ್ಲಿಕೇಶನ್ ಗಳನ್ನು ಉಚಿತವಾಗಿ ನೀಡಲು ತೀರ್ಮಾನಿಸಿದೆ.

1. ಸಿಮ್ಸ್ 3 ಅಪ್ಲಿಕೇಶನ್ ಬಳಕೆದಾರಲ್ಲಿ ಅಚ್ಚರಿಯನ್ನು ಉಂಟುಮಾಡುವಂತೆ ಕಾರ್ಯನಿರ್ವಹಿಸುತ್ತಿದೆ, ಇದನ್ನು ಬಳಸಿ ಬಳಕೆದಾರ ಪಟ್ಟಣದಲ್ಲಿರುವ ಹೊಸ ಸ್ಥಳಗಳನ್ನು ಕಂಡುಹಿಡಿಯಬಹುದಾಗಿದೆ, ಅಲ್ಲದೆ ಸಮೀಪದ ಸಿಮ್ಸ್ ಅನ್ನು ಸಂಪರ್ಕಿಸಬಹುದಾಗಿದೆ. ಆದರೆ ಇದಕ್ಕೆಲ್ಲಾ ಆನ್ ಲೈನ್ ಅಳವಡಿಸಿಕೊಳ್ಳ ಬೇಕಾಗಿದೆ.

2. ಬೇಜಿವೆಲ್ಡ್ ಬಳಸಿ ಸಿಂಗಲದ ಅಥವಾ ಮಲ್ಟಿಪ್ಲೇಯರ್ ಮೋಡ್ಸ್ ನಲ್ಲಿ ಶಬ್ದವನ್ನು ಹೊರಡಿಸಬಹುದು, ಇದರಲ್ಲಿ ಗೇಮ್ ಆಡುವಾಗ ಅನೀಮೇಶನ್ ಬಳಸಬಹುದಾಗಿದೆ, ಇದನ್ನು ಸೋಷಿಯಲ್ ಮತ್ತು ನೆಟ್ ವರ್ಕ್ಡ್ ಗೇಮ್ ಗೆ ಬಳಸಬಹುದಾಗಿದೆ.

3.N.O.V.A ಒಂದು ನಕಲಿ ಗೇಮ್ ಆಗಿದ್ದು , ಆಕರ್ಷಣೀಯವಾಗಿದ್ದು ಇದು ಸಾಕಷ್ಟು ಖುಷಿಯನ್ನು ನೀಡುವುದು.

4. ಹೋಲ್ಡ್'ಎಮ್ ಪೋಕರ್ ಒಂದು ಪೋಕರ್ ಗೇಮ್ ಆಗಿದ್ದು ಇದರಲ್ಲಿ ಎಲ್ಲಾ ಪೋಕರ್ ಟ್ರಿಕ್ಸ್ ಗಳನ್ನು ಅಳವಡಿಸಲಾಗಿದೆ.

5. ಬಬಲ್ ಬಾಶ್ 2 ತುಂಬಾ ಸರಳವಾದ ಮತ್ತು ಆಕರ್ಷಣೀಯವಾದ ಗೇಮ್ ಆಗಿದೆ. ಇದನ್ನು ಯಾರೂ ಬೇಕಾದರೂ ಅಡಬಹುದಾಗಿದೆ. ಆದರೆ ಗೇಮ್ ನ ಕೊನೆಗೆ ಸ್ವಲ್ಪ ಕೌಸಲ್ಯವನ್ನು ಬಳಸಬೇಕಾಗುತ್ತದೆ.

6. ಐಸ್ ಕೋಲ್ಡ್ ಅಪ್ಲಿಕೇಶನ್ ಆಂಡ್ರಾಯ್ಡ್ ಸಾಧನದಲ್ಲಿ ಪೋಟೋ ಎಡಿಟರ್ ಅನ್ನು ಉಚಿತವಾಗಿ ಬಳಸಬಹುದಾಗಿದೆ. ಇದರಲ್ಲಿ ಪೋಟೋಗಳನ್ನು ಒಂದು ಪೋಟೋವಾಗಿ ಜೋಡಿಸಬಹುದಾಗಿದೆ. ಇದು ಕಪ್ಪು,ಬಿಳಿ, ಬೂದು ಮುಂತಾದ ಕಲರ್ ಫಿಲ್ಟರ್ ಇರುವುದರಿಂದ ಪೋಡೋಗೆ ಒಂದು ಹೊಸ ಲುಕ್ ಕೊಡಬಹುದಾಗಿದೆ.

7.
ಡ್ರೈವ್ ಸೇಫ್.ಲೀ ಇದನ್ನು ಒಂದು ಟಚ್ ನಲ್ಲಿ ಆಕ್ಟಿವೇಶನ್ ಮಾಡುವುದರಿಂದ ಕೈಯ ಸಹಾಯವಿಲ್ಲದೆ ಮತ್ತೆ ಕಾರ್ಯ ನಿರ್ವಹಿಸುತ್ತದೆ. ಇದು ವಾಹನ ಚಾಲಕರಿಗೆ ತುಂಬಾ ಸಹಾಯಕವಾಗಿದೆ.ಈ ಅಪ್ಲಿಕೇಶನ್ ನಲ್ಲಿ ಮಹಿಳೆ ಅಥವಾ ಪುರುಷ ಯಾರ ಧ್ವನಿಯನ್ನು ಬೇಕಾದರೂ ಆಯ್ಕೆ ಮಾಡಬಹುದಾಗಿದೆ.

8.
ಐಸ್ಪೀಚ್ ಟ್ರಾನ್ಸ್ ಲೇಟರ್ ಸುಲಭವಾಗಿ ಮಾತನಾಡಲು, ಪದಗಳನ್ನು ಭಾಷಾಂತರ ಮಾಡಲು ಸಹಾಯಕವಾಗಿದೆ.

9.ಡ್ರೈವ್ ಸೇಫ್.ಲೀ ಬಳಸಿ ವಾಯ್ಸ್ ನ ಮುಖಾಂತರ ಟೆಕ್ಸ್ಟ್ ಮೆಸಾಜ್ ಕಳುಹಿಸುತ್ತಾ ಚಾಟ್ ಮಾಡಬಹುದಾಗಿದೆ.

10. ನೋಬೆಕ್ಷ್ ರೇಡಿಯೋದ ಸಹಾಯದಿಂದ 16,000 ಸ್ಟೇಷನ್ ನಿಂದ ರೇಡಿಯೋ ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ.

11.ಶಹಜಾಮ್ ಅಪ್ಲಿಕೇಶನ್ ಬಳಸಿ ಟ್ರ್ಯಾಕ್ ಅನ್ನು ಓದಲು ಮತ್ತು ಆಲ್ಬಂ ಅನ್ನು ಮ್ತತೆ ನೋಡಲು ಬಳಸಬಹುದು. ಅಲ್ಲದೆ ಇದನ್ನು ಬಳಸಿ ಇಮೇಲ್, ಟೆಕ್ಸ್ಟ್, ಟ್ವಿಟರ್ ಮಾಡಬಹುದಾಗಿದೆ.

12. ವಿಲಿನ್ ಗೋ ಅಪ್ಲಿಕೇಶನ್ ಬಳಸಿ ವರ್ಡ್ಸ್ ಅನ್ನು ಆಕ್ಷನ್ ಆಗಿ ಪರಿವರ್ತಿಸಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X