ಈ ಸ್ಯಾಮ್ ಸಂಗ್ ಮೊಬೈಲ್ ಗೆ ಮನಸೋಲದವರಾರು?

Posted By: Staff

ಈ ಸ್ಯಾಮ್ ಸಂಗ್ ಮೊಬೈಲ್ ಗೆ ಮನಸೋಲದವರಾರು?
ಮೊಬೈಲ್ ತಯಾರಿಕೆಯಲ್ಲಿ ಉನ್ನತ ಸ್ಥಾನ ಹೊಂದಿರುವ ಸ್ಯಾಮ್ ಸಂಗ್ ಕಂಪನಿ, ಸ್ಯಾಮ್ ಸಂಗ್ T528g ಹ್ಯಾಂಡ್ ಸೆಟ್ ಪರಿಚಯಿಸಿದೆ.

ಸಿಂಪಲ್ ಮತ್ತು ಆಕರ್ಷಕವಾಗಿರುವ ಈ ಸ್ಯಾಮ್ ಸಂಗ್ SGH-T528G ಮೊಬೈಲ್ ನಲ್ಲಿ ನೀವು ಬಯಸುವ ಹಲವು ಆಯ್ಕೆಗಳು ಲಭಿಸಲಿದೆ. ಕ್ಯಾಂಡಿ ಬಾರ್ ಮಾದರಿಯಲ್ಲಿರುವ ಈ ಹ್ಯಾಂಡ್ ಸೆಟ್ ಎಡಭಾಗದಲ್ಲಿ ವಾಲ್ಯೂಮ್ ಮತ್ತು ಲಾಕ್ ಮುಂತಾದ ಫೀಚರಿಂಗ್ ಕೀ ನೀಡಲಾಗಿದೆ.

ಸ್ಯಾಮ್ ಸಂಗ್ SGH-T528G ನಲ್ಲಿ ಏನಿದೆ?

* 3 ಇಂಚಿನ TFT ಟಚ್ ಸ್ಕ್ರೀನ್
* ಕ್ವೆರ್ಟಿ ಕೀಪ್ಯಾಡ್
* ಪ್ರಾಕ್ಸಿಮಿಟಿ ಸೆನ್ಸಾರ್
* 2 ಮೆಗಾ ಪಿಕ್ಸಲ್ ಕ್ಯಾಮೆರಾ
* 1000mAh ಲಿಯಾನ್ ಬ್ಯಾಟರಿ, 6 ಗಂಟೆ ಟಾಕ್ ಟೈಂ ಮತ್ತು 250 ಗಂಟೆ ಸ್ಟಾಂಡ್ ಬೈ ಟೈಂ
* ಮೈಸ್ಪೇಸ್, ಟ್ವಿಟ್ಟರ್, ಫೇಸ್ ಬುಕ್, ಡಾಲ್ಫಿನ್ ಬ್ರೌಸರ್
* ವಿಡಿಯೋ ಪ್ಲೇ ಬ್ಯಾಕ್, ಆಡಿಯೋ ಮತ್ತು ವಿಡಿಯೋ ಸ್ಟ್ರೀಮಿಂಗ್ ಮತ್ತು ಮ್ಯೂಸಿಕ್ ಪ್ಲೇಯರ್
* ಬ್ಲೂಟೂಥ್, ವೈ-ಫೈ, ಮೈಕ್ರೊ SD ಕಾರ್ಡ್
* ಮೈಕ್ರೊ USB 2.0, USB ಚಾರ್ಜಿಂಗ್ ಆಯ್ಕೆ
* ಸ್ಯಾಮ್ ಸಂಗ್ TouchWiz 2.0 ಇಂಟರ್ ಫೇಸ್

ಮೊಬೈಲ್ ನಲ್ಲಿ ಬ್ಲೂಟೂಥ್ ವೈರ್ ಲೆಸ್ ತಂತ್ರಜ್ಞಾನ ಅಳವಡಿಸಿರುವುದರಿಂದ, ವೈರ್ ಇಲ್ಲದೆಯೇ ಸುಲಭವಾಗಿ ಮಾತನಾಡಬಹುದು, ಸಂಗೀತವನ್ನು ಆಸ್ವಾದಿಸಬಹುದು. 3ಜಿ ಸ್ಪೀಡ್ ಇರುವುದರಿಂದ ಫೈಲ್, ಇಮೇಜ್, ವಿಡಿಯೋಗಳನ್ನು ವೇಗವಾಗಿ ಅಪ್ ಲೋಡ್ ಅಥವಾ ಡೌನ್ ಲೋಡ್ ಮಾಡಿಕೊಳ್ಳಬಹುದು.

ಮೈಕ್ರೊ USB ಟ್ರಾವೆಲ್ ಚಾರ್ಜರ್, ಮೈಕ್ರೊ USB ಕಾರ್ ಪವರ್ ಚಾರ್ಜರ್, USB ಚಾರ್ಜಿಂಗ್ ಡೇಟಾ ಕೇಬಲ್ ಪೌಚ್ ಕೂಡ ಇದೆ. ಆದರೆ ಕಂಪನಿ ಇನ್ನೂ ಇದರ ಬೆಲೆಯನ್ನು ಘೋಷಿಸಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot