Subscribe to Gizbot

ವೀಡಿಯೋಕಾನ್ ಹಿಟ್ ಆಗಲು ಕಾರಣ ಗೊತ್ತೆ?

Posted By: Super

ವೀಡಿಯೋಕಾನ್ ಹಿಟ್ ಆಗಲು ಕಾರಣ ಗೊತ್ತೆ?
ಭಾರತ ಹೇಳಿ ಕೇಳಿ ಮಧ್ಯಮ ವರ್ಗದವರು ಹೆಚ್ಚಾಗಿರುವ ದೇಶ , ಆದ್ದರಿಂದ ಮಾರುಕಟ್ಟೆಯಲ್ಲಿ ಅಧಿಕ ಬೆಲೆಯ ವಸ್ತುಗಳಿಗಿಂತ ಕಡಿಮೆ ಬೆಲೆ ವಸ್ತುಗಳು ಬೇಗನೆ ಕ್ಲಿಕ್ ಆಗುತ್ತದೆ. ಅಧಿಕ ಸೌಲಭ್ಯದ ಜೊತೆಗೆ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಂದ ವಿಡಿಯೋಕಾನ್ ಭಾರತದಲ್ಲಿ ಹಿಟ್ ಆಗುತ್ತಿರಲು ಸಹ ಅದೇ ಕಾರಣ.

ಈ ವೀಡಿಯೋಕಾನ್ V1531 ಮೊಬೈಲ್ ಅನ್ನು ಬಳಕೆದಾರರ ಬೇಡಿಕೆಗೆ ತಕ್ಕದಾಗಿ ರೂಪಿಸಲಾಗಿದೆ. 93.2ಗ್ರಾಂ ತೂಕವಿರುವ ಇದು 114.2mm x 51 mm x 14.2 mm ಆಯಾಮವನ್ನು ಹೊಂದಿದೆ. ಇದರಲ್ಲಿ 5 ಗಂಟೆಯವರೆಗಿನ ಟಾಕ್ ಟೈಮ್ ಆಫರ್ ಅನ್ನು ಸಹ ನೀಡಲಾಗಿದೆ.

2G ನೆಟ್ ವರ್ಕ್ ಸೌಲಭ್ಯ ಇರುವ ಇದು 2.4 ಇಂಚು ಡಿಸ್ ಪ್ಲೇಯನ್ನು ಹೊಂದಿದೆ. ಇದರಲ್ಲಿ 1.3 ಮೆಗಾ ಪಿಕ್ಸಲ್ ಕ್ಯಾಮೆರಾ ಹಾಗೂ ಫ್ಲಾಷ್ ಲೈಟ್ ಮತ್ತು ಡಿಜಿಟಲ್ ಜೂಮ್ ಸೌಲಭ್ಯವನ್ನು ಹೊಂದಿದೆ.

ಇದರಲ್ಲಿ ಇಂಟರ್ನಲ್ ಮೆಮೋರಿ 233 KB ಹಾಗೂ T-ಫ್ಲಾಷ್ ಕಾರ್ಡ್ ಇದೆ, ಅಲ್ಲದೆ ಇದರಲ್ಲಿ ಗುಣಮಟ್ಟದ Li-ion 1000 mAH ಬ್ಯಾಟರಿಯನ್ನು ಬಳಸಲಾಗಿದೆ.

ಇದರಲ್ಲಿ A2DP ಆಯಾಮದ ಬ್ಲೂಟೂತ್ ಸಹ ನೀಡಲಾಗಿದೆ, ಅಲ್ಲದೆ GPRS ಮತ್ತುUSB ಪೋರ್ಟ್ ನ ಸೌಲಭ್ಯ ಕೂಡ ಹೊಂದಿದೆ.
ಇದರಲ್ಲಿ ಚಿಕ್ಕ ಮತ್ತು ಮಲ್ಟಿ ಮೀಡಿಯಾ ಮೆಸೇಜ್ ಸರ್ವೀಸ್ ಕೂಡ ಇದೆ. ಅಷ್ಟಲ್ಲದೆ 1.3 ಮೆಗಾ ಪಿಕ್ಸಲ್ ಕ್ಯಾಮೆರಾ ಸೌಲಭ್ಯ ಕೂಡ ಹೊಂದಿದೆ.

ಇಷ್ಟೆಲ್ಲಾ ಸೌಲಭ್ಯವಿರುವ ಈ ಮೊಬೈಲ್ ಬೆಲೆ ರು. 1,800 ಆಗಿರುವುದರಿಂದ ಉತ್ತಮ ಮಾರುಕಟ್ಟೆ ಸಿಗುತ್ತಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot