Subscribe to Gizbot

ರಾಯಲ್ ಲುಕ್ ನೀಡುತ್ತೆ ಎಕ್ಸೇಜ್ ಹ್ಯಾಂಡ್ ಸೆಟ್

Posted By: Staff

ರಾಯಲ್ ಲುಕ್ ನೀಡುತ್ತೆ ಎಕ್ಸೇಜ್ ಹ್ಯಾಂಡ್ ಸೆಟ್
ಎಕ್ಸೇಜ್ ಮೊಬೈಲ್ ಕಂಪನಿ ನೂತನ ಎಕ್ಸೇಜ್ M234 ಹ್ಯಾಂಡ್ ಸೆಟ್ ಬಿಡುಗಡೆ ಮಾಡುತ್ತಿದೆ. ಗ್ರಾಹಕರ ಅವಶ್ಯಕತೆಗಳನ್ನೂ ಪೂರೈಸಲು ಹೊರಟಿರುವ ಈ ಹ್ಯಾಂಡ್ ಸೆಟ್ ಸುಂದರ ವಿನ್ಯಾಸದೊಂದಿಗೆ ರಾಯಲ್ ಲುಕ್ ಹೊಂದಿದೆ.

59 ಗ್ರಾಂ ತೂಕ ಹೊಂದಿರುವ ಈ ಮೊಬೈಲ್ 2.4 ಇಂಚಿನ ಡಿಸ್ಪ್ಲೇ ಮತ್ತು 114.4 ಎಂಎಂ x 58 ಎಂಎಂ x 8.8 ಎಂಎಂ ಡೈಮೆಂಶನ್ ಹೊಂದಿದೆ. ಡ್ಯೂಯಲ್ ಸಿಮ್ ಸೌಲಭ್ಯ ಹೊಂದಿರುವ ಈ ಹ್ಯಾಂಡ್ ಸೆಟ್ ಬಜೆಟ್ ಗೆ ಉತ್ತಮ ಆಯ್ಕೆಯಾಗಿದೆ.

ಕಡಿಮೆ ಬೆಲೆಗೆ ದೊರೆಯಲಿರುವ ಈ ಹ್ಯಾಂಡ್ ಸೆಟ್ ನಲ್ಲಿ 1.3 ಮೆಗಾ ಪಿಕ್ಸಲ್ ಕ್ಯಾಮೆರಾ ಇದೆ. ಮೆಮೊರಿ ಸಾಮರ್ಥ್ಯದಲ್ಲೂ ಹ್ಯಾಂಡ್ ಸೆಟ್ ಹಿಂದೆ ಇಲ್ಲ. ಮೊಬೈಲ್ ಆಂತರಿಕ ಮೆಮೊರಿ 128 ಎಂಬಿಯಾಗಿದ್ದರೆ, ಮೆಮೊರಿ ವಿಸ್ತರಣೆಗೆ 8ಜಿಬಿವರೆಗೂಮೈಕ್ರೊ SD ಕಾರ್ಡ್ ಲಭ್ಯವಿದೆ. ಫೇಸ್ ಬುಕ್ ಗೆಂದೇ ಪ್ರತ್ಯೇಕ ಆಯ್ಕೆ ಕೂಡ ಇದರಲ್ಲಿದೆ.

ಎಫ್ ಎಂ ಮತ್ತು ಮೀಡಿಯಾ ಪ್ಲೇಯರ್, GPRS, ಬ್ಲೂಟೂಥ್ , USB port ನೊಂದಿಗೆ ಉತ್ತಮ ಗುಣಮಟ್ಟ ಹೊಂದಿರುವ ಲಿಯಾನ್ 1100 mAH ಬ್ಯಾಟರಿ ಪಡೆದುಕೊಂಡಿದೆ. ಇದು 6 ಗಂಟೆ ಟಾಕ್ ಟೈಂ ಮತ್ತು 288 ಗಂಟೆ ಸ್ಟಾಂಡ್ ಬೈ ಟೈಂ ನೀಡಲಿದೆ.

ಮೊಬೈಲ್ ಟ್ರ್ಯಾಕರ್ ಮತ್ತು 10 ಶಾರ್ಟ್ ಕಟ್ ಕೀ ಮತ್ತು ಆಟೊ ರೆಕಾರ್ಡಿಂಗ್ ಇದರಲ್ಲಿ ವಿಶೇಷವೆನಿಸಿದೆ. ಕಪ್ಪು ಬಣ್ಣದ ಈ ಆಕರ್ಷಿತ ಹ್ಯಾಂಡ್ ಸೆಟ್ ಬೆಲೆ 4,000 ರುಗಿಂತ ಕಡಿಮೆ ಎನ್ನಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot