Subscribe to Gizbot

ಮಾರುಕಟ್ಟೆಗೆ ಪಾದರ್ಪಣೆಗೆ ಸಿದ್ಧವಾಗಿರುವ ZTE ಟ್ಯುರೀಸ್

Posted By: Super
ಮಾರುಕಟ್ಟೆಗೆ ಪಾದರ್ಪಣೆಗೆ ಸಿದ್ಧವಾಗಿರುವ ZTE ಟ್ಯುರೀಸ್
ಪ್ರಪಂಚದಲ್ಲಿರುವ ದೊಡ್ಡ ದೂರ ಸಂಪರ್ಕ ಸಾಧನಗಳ ಪೂರೈಕೆದಾರಲ್ಲಿ ZTE ಕಾರ್ಪೋರೇಶನ್ ಕೂಡ ಒಂದಾಗಿದೆ. ಈಗ ಈ ZTE ಆಂಡ್ರಯ್ಡ್ ಇರುವ QWERTYಮೊಬೈಲ್ ಗಳನ್ನು ತರಲಿದೆ

ಇದೆ ತಿಂಗಳಿನಲ್ಲಿಯೆ ಮಾರುಕಟ್ಟೆಗೆ ಬರಲಿರುವ ZTE ಟ್ಯುರೀಸ್ 63.2 x 112 x 11.8mm ಆಯಾಮಾನ ಹಾಗೂ 126 ಗ್ರಾಮ ತೂಕವನ್ನು ಹೊಂದಿದೆ. ಇದನ್ನು ಆಂಡ್ರಾಯ್ಡ್ 2.3 ಆಧಾರಿಸಿ ತಯಾರಿಸಲಾಗಿದೆ.

ಇದರಿಂದ ಬಳಕೆದಾರರು ಆಂಡ್ರಾಯ್ಡ್ ಮಾರುಕಟ್ಟೆಯಿಂದ ಇತ್ತೀಚಿನ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳ ಬಹುದಾಗಿದೆ.
ಈ ಪ್ರೊಸೆಸರ್ 800 MHz ಬಳಸಿ ಈ ಆಪರೇಟಿಂಗ್ ಸಿಸ್ಟಮ್ ನ ಸಾಮರ್ಥ್ಯ ಮತ್ತಷ್ಟು ಹೆಚ್ಚುವಂತೆ ರೂಪಿಸಲಾಗಿದೆ.

ಇದರ ಡಿಸ್ ಪ್ಲೇ ನೋಡಲು ಆಕರ್ಷಕವಾಗಿದ್ದು TFT ಕಲರ್ ಟ್ರಾನ್ಸ್ ಮಿಸಿವ್ ಟೆಕ್ನೋಲಜಿಯ ಜೊತೆ 2.6 ಗಾತ್ರವನ್ನು ಹೊಂದಿದೆ.

ಇದರ ಕೀಬೋರ್ಡ್ ಅನ್ನು ಟೈಪ್ ಮಾಡಲು ಸುಲಭವಿರುವ ಹಾಗೆ ವಿನ್ಯಾಸಗೊಳಿಸಲಾಗಿದೆ. ಇದರ ಸ್ಲೋಟ್ ಗೆ ಮೈಕ್ರೋSD ಮತ್ತು ಟ್ರಾನ್ಸ್ ಫ್ಲಾಷ್ ಆಫ್ ಹೈಯರ್ ಮೆಮೋರಿಯ ಸಪೋರ್ಟ್ ಇದೆ.

ಇದು ಯಾವುದೆ ಆಸ್ಪತ್ರೆಯಾಗಲಿ, ರೆಸ್ಟೋರೆಂಟ್ ಹಾಗೂ ಪಾರ್ಕ್ ನ ಬಗ್ಗೆ ಗೈಡ್ ಮಾಡುತ್ತಿದೆ. ಇದರಲ್ಲಿ 3.1 ಮೆಗಾ ಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಬಳಸಲಾಗಿದೆ.

ಸದ್ಯದಲ್ಲಿಯೆ ಮಾರುಕಟ್ಟೆಗೆ ಬರಲಿರುವ ಈ ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ರು. 9,000ಕ್ಕೆ ಲಭ್ಯವಾಗಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot