ನಿಮ್ಮ ಮನಗೆಲ್ಲುವ ಆಪಲ್ ಚೆಲುವೆಯರು !

Posted By: Staff

ನಿಮ್ಮ ಮನಗೆಲ್ಲುವ ಆಪಲ್ ಚೆಲುವೆಯರು !
ಆಪಲ್ ವಸ್ತುಗಳು ಇಷ್ಟವಾಗುವುದೆ ಅದರ ಕಾರ್ಯ ವೈಖರಿಗೆ, ಬೇರೆ ಯಾವುದರಲ್ಲೂ ಕಾಣ ಸಿಗದ ಸ್ಪೆಷಾಲಿಟಿ ಈ ಆಪಲ್ ಉತ್ಪನ್ನಗಳಲ್ಲಿ ಕಾಣಬಹುದು. ಆಪಲ್ ಕಂಪ್ಯೂಟರಿನ ಕ್ಷೇತ್ರದಲ್ಲಿ ತನ್ನ ಕೊಡುಗೆಯಿಂದ ಅಗ್ರ ಸ್ಥಾನದಲ್ಲಿರುವ ಆಪಲ್ ಮೊಬೈಲ್ ಕ್ಷೇತ್ರಕ್ಕೂ ತನ್ನ ಸೇವೆಯನ್ನು ವಿಸ್ತರಿಸಿದೆ.

ಆಪಲ್ ಮೊಬೈಲ್ ಪೋನ್ ಗಳನ್ನು ಸಹ ಬಿಡುಗಡೆ ಮಾಡಿದ್ದು ಇತ್ತೀಚಿಗೆ ಐಪೋನ್ 4 ಮತ್ತು ಐಪೋನ್ 4S ಎಂಬ ಮತ್ತೆರಡು ಮೊಬೈಲ್ ಗಳು ಮಾರುಕಟ್ಟೆಯಲ್ಲಿ ರಾರಜಿಸುತ್ತಿವೆ.

ಐಪೋನ್ 4 ಮತ್ತು ಐಪೋನ್ 4S ಮೊಬೈಲ್ 3.5 ಇಂಚು ಡಿಸ್ ಪ್ಲೇಯನ್ನು ಹೊಂದಿದೆ. ಇದರಲ್ಲಿ ಸ್ಕ್ರೀನ್ ರೆಸ್ಯೂಲೇಶನ್ 960*640ರಷ್ಟು ಪಿಕ್ಸಲ್ ರೆಟಿನಾ ಡಿಸ್ ಪ್ಲೇಯನ್ನು ಹೊಂದಿದ್ದು, 5 ಮೆಗಾ ಪಿಕ್ಸಲ್ ಕ್ಯಾಮೆರಾ ಸಾಮರ್ಥ್ಯವನ್ನು ಹೊಂದಿದೆ.

ಇದರಲ್ಲಿರುವ LED ಹೈ ಡೆಫಿನೆಷನ್ ಬಳಸಿ ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ, ಅದರಲ್ಲೂ ಐಪೋನ್ 4S 8 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ಹೊಂದಿದೆ.ಐಪೋನ್ 4 ಮತ್ತು ಐಪೋನ್ 4S ರಲ್ಲಿ GPS ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಅಲ್ಲದೆ ಡಿಜಿಟಲ್ ಕಂಪಾಸ್ ಕೂಡ ಇದರಲ್ಲಿದೆ. ಈ ಎರಡೂ ಪೋನ್ ಗಳು ಕಪ್ಪು ಬಣ್ಣದ ಚೆಲುವೆಯರಾಗಿದ್ದಾರೆ. ಇದರಲ್ಲಿ ಲಿಥಿನಂ ion ಬ್ಯಾಟರಿಯನ್ನು ಬಳಸಿದ್ದು ಇದರಲ್ಲಿ 8 ಗಂಟೆಗಳ ಕಾಲ ಮಾತಾನಾಡಬಹುದಾಗಿದೆ.

ಎರಡಲ್ಲೂ 10 ಗಂಟೆಗಳ ವಿಡಿಯೋ ಪ್ಲೇ ಬ್ಯಾಕ್ ಸಾಮರ್ಥ್ಯ ಹೊಂದಿದೆ.

ಐಪೋನ್ 4 ಮೊಬೈಲ್ ಬೇಸ್ ಮಾಡಲ್ ರು. 4, 500 ರಿಂದ ರು. 13, 000 ರವರೆಗಿನ ಬೆಲೆಯಲ್ಲಿ ಕೊಳ್ಳಬಹುದಾಗಿದೆ.

ಅದೇ ರೀತಿ 4 ಮತ್ತು ಐಪೋನ್ 4S ಬೇಸ್ ಮಾಡಲ್ ರು.8, 500ರಿಂದ ಹಿಡಿದು ರು.17, 000 ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot