Subscribe to Gizbot

ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಪಾಲಿಸುವ ಮಂತ್ರ

Posted By: Super

ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಪಾಲಿಸುವ ಮಂತ್ರ
ಸ್ಯಾಮ್ ಸಂಗ್ ಉತ್ಪನ್ನಗಳು ಒಳ್ಳೆಯ ಗುಣಮಟ್ಟದ ಜೊತೆಗೆ ಕಡಿಮೆ ದರದಲ್ಲಿ ಇರುವುದರಿಂದ ಸಾಮಾನ್ಯ ಜನರ ಮೆಚ್ಚುಗೆಯನ್ನು ಹೊಂದಿದೆ. ಇದರ ಇತ್ತೀಚಿನ ಮಾಡಲ್ ಸ್ಯಾಮ್ ಸಂಗ್ T528Gಕೂಡ ಇದೇ ಪ್ರಮುಖ ಗುಣವನ್ನು ಹೊಂದದೆ.

ನೋಡಲು ಆಕರ್ಷಕವಾಗಿರುವ ಸ್ಯಾಮ್ ಸಂಗ್ T528g ಟಚ್ ಸ್ಕ್ರೀನ್ ಸೌಲಭ್ಯವನ್ನು ಹೊಂದಿದೆ. ಇದರಲ್ಲಿ ಬಳಸಬಹುದಾದ ಇಂಟರ್ ನೆಟ್ ಸೌಲಭ್ಯದಿಂದಾಗಿ ಸೋಷಿಯಲ್ ನೆಟ್ ವರ್ಕಿಂಗ್ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳ ಬಹುದಾಗಿದೆ.

2 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ಹೊಂದಿರುವ ಇದರಿಂದ ವಿಡಿಯೋವನ್ನು ಸಹ ತೆಗೆಯಬಹುದಾಗಿದೆ, ಇದರಲ್ಲಿರುವ Li-ion ಬ್ಯಾಟರಿಯ ಟಾಕ್ ಟೈಮ್ 6 ಗಂಟೆಗಳಷ್ಟು ಆಗಿದೆ.

ಇದರಲ್ಲಿರುವ ಬ್ಲೂಟೂತ್ ಬಲಸಿ ಹಾಡುಗಳನ್ನು ಕೇಳಬಹುದು, ವೈರ್ ಲೆಸ್ ಆಗಿ ಮಾತನಾಡಬಹುದು, 3G ತಂತ್ರಜ್ಞಾನವನ್ನು ಬಳಸಿ ಫೈಲ್ ಗಳನ್ನು ಸುಲಭವಾಗಿ ಅಪ್ ಲೋಡ್ ಬಹುದಾಗಿದೆ.

3 ಇಂಚು ಟಚ್ ಸ್ಕ್ರೀನ್ ಹೊಂದಿರುವ ಈ ಮೊಬೈಲ್ ನಲ್ಲಿರುವ QWERTY ಕೀಪ್ಯಾಡ್ ಟೈಪ್ ಮಾಡಲು ಸುಲಭವಾಗಿದೆ.

ಇಷ್ಟೆಲ್ಲಾ ಸೌಲಭ್ಯ ಹೊಂದಿರುವ ಈ ಮೊಬೈಲ್ ಬೆಲೆಯನ್ನೂ ಇನ್ನೂ ನಿಗದಿ ಪಡಿಸಿಲ್ಲ, ಇದು ಕೂಡ ಸಾಮಾನ್ಯ ಜನರ ಕೈಗೆಟುಕುವ ದರದಲ್ಲಿ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot