ಫೇಸ್ ಬುಕ್ ಪ್ರಿಯರಿಗೆ ಬರಲಿದೆ ಫೇಸ್ ಬುಕ್ ಫೋನ್

ಮೊಬೈಲ್ ನಲ್ಲಿ ಸೋಷಿಯಲ್ ನೆಟ್ ವರ್ಕ್ ಸೌಲಭ್ಯವಿದ್ದರೆ ಅದು ಹೆಚ್ಚಿನ ಗ್ರಾಹಕರನ್ನು ಅದರಲ್ಲೂ ಯುವ ಪೀಳಿಗೆಯವರನ್ನು ಹೆಚ್ಚಾಗಿ ಆಕರ್ಷಸುತ್ತಿದೆ.
ಈಗಂತೂ ಜನರು ಕನ್ನಡಿಯಲ್ಲಿ ಫೇಸ್ ನೋಡಲು ಮರೆತರು ಫೇಸ್ ಬುಕ್ ನೀಡಲು ಮರೆಯುತ್ತಿಲ್ಲ, ಇದನ್ನರಿತ ಮೊಬೈಲ್ ಕಂಪನಿಗಳು ತಮ್ಮ ಮೊಬೈಲ್ ಗಳಲ್ಲಿ ಫೇಸ್ ಬುಕ್ ಸೌಲಭ್ಯವನ್ನು ಒದಗಿಸುತ್ತಿದೆ.
ಕೇವಲ ರು. 2,500 ಗೆ ದೊರೆಯಲಿರುವ ಈ ಫೋನನ್ನು ಹುವೈ ಕಂಪನಿ ತಯಾರಿಸುತ್ತಿದೆ. ಹುವೈ ಕಂಪನಿ ಕೂಡ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ದಿನದಿಂದ ದಿನಕ್ಕೆ ವೃದ್ಧಿಸುತ್ತಿದ್ದು ಅದರಲ್ಲೂ ಈ ಹೊಸ ಟಾಟಾ ಡೊಕೊಮೊ ಮೊಬೈಲ್ ಪೋನ್ ತಯಾರಿಸಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯಲ್ಲಿದೆ.
ಸದ್ಯದಲ್ಲಿ ದೊರಕಿರುವ ಮಾಹಿತಿ ಪ್ರಕಾರ ಈ ಫೇಸ್ ಬುಕ್ ಪೋನ್ ಅನ್ನು “F” ಬಟನ್ ನಿಂದ ವಿನ್ಯಾಸಗೊಳಿಸಲಾಗಿದೆ. ಈ ಬಟನ್ ನ ಪ್ರೆಸ್ ಮಾಡಿ ಫ್ರೆಂಡ್ಸ್ ಗಳ ಜೊತೆ ಚಾಟ್, ಮಾಹಿತಿ ವಿನಿಮಯ ಮಾಡಬಹುದಾಗಿದೆ.
ಇದರ ಸ್ಕ್ರೀನ್ 2.4 ರಷ್ಟು ಅಗಲವಿರಬಹುದು ಎಂದು ಅದಾಜು ಮಾಡಲಾಗಿದೆ. ಇದರಲ್ಲಿರುವ QWERTY ಕೀಪ್ಯಾಡ್ ನಿಂದ ಅತಿ ಸುಲಭವಾಗಿ ಟೈಪ್ ಮಾಡಬಹುದಾಗಿದೆ. ಇದರಲ್ಲಿ 2.0 ಮೆಗಾಪಿಕ್ಸಲ್ ಕ್ಯಾಮೆರಾವನ್ನು ಬಳಸಲಾಗುತ್ತಿದೆ.
ಬ್ಲೂಟೂತ್ ಮತ್ತು FM ರೇಡಿಯೊ ಸೌಲಭ್ಯವಿದ್ದು ಅದರ ಬ್ಯಾಟರಿಯ ಬಗ್ಗೆ ಮಾಹಿತಿ ದೊರಕಿಲ್ಲ. ಅತಿ ಕಡಿಮೆ ಬೆಲೆ ಫೇಸ್ ಬುಕ್ ಸೌಲಭ್ಯವನ್ನು ನೀಡುವ ಈ ಮೊಬೈಲ್ ಸದ್ಯದಲ್ಲಿಯೆ ಮಾರುಕಟ್ಟೆಯನ್ನು ಫೇಸ್ ಮಾಡಲಿದ್ದು ,ಫೇಸ್ ಬುಕ್ ಪ್ರಿಯರಿಗೆ ಇದೊಂದು ಸಿಹಿ ಸುದ್ದಿಯಾಗಿದೆ.


Click it and Unblock the Notifications








