Subscribe to Gizbot

ಡ್ಯುಯೆಲ್ ಜೊತೆ ಡ್ಯುಯೆಟ್ ಗೆ ರೆಡಿನಾ?

Posted By: Super

ಡ್ಯುಯೆಲ್ ಜೊತೆ ಡ್ಯುಯೆಟ್ ಗೆ ರೆಡಿನಾ?
ಟು ಇನ್ ಒನ್ ಅಂದರೆ ಎಲ್ಲರಿಗೂ ಇಷ್ಟ. ಆದ್ದರಿಂದಲೆ ಈ ಡ್ಯುಯೆಲ್ ಸಿಮ್ ಮೊಬೈಲ್ ಆಂಡ್ರಾಯ್ಡ್, ಸ್ಮಾರ್ಟ್ ಪೋನಿನಷ್ಟೆ ತನ್ನ ಬೇಡಿಕೆಯನ್ನು ಹೊಂದಿದೆ.

ಭಾರತದ ಪ್ರಸಿದ್ಧ ಟೆಲಿಕಾಮ್ ಕಂಪನಿಗಳಾದ ಜೈನ್ ಗ್ರೂಪ್ ಮತ್ತು UTL ಗ್ರೂಪ್ ಜೊತೆ ಸೇರಿ ಈ ಕಾರ್ಬನ್ ಮೊಬೈಲ್ ಅನ್ನು ತಯಾರಿಸುತ್ತಿವೆ. ಈ ಮೊಬೈಲ್ ವಿದೇಶಗಳಲ್ಲಿ ತಯಾರಿಯಾಗುವ ಮೊಬೈಲ್ ಗಳಷ್ಟೆ ಗುಣಮಟ್ಟವನ್ನು ಹೊಂದಿದೆ.

ಈಗ ಈ ಕಾರ್ಬನ್ ಮೊಬೈಲ್ ಹೊಸ ಮಾಡಲ್ ನ GSM ಡ್ಯುಯೆಲ್ ಸಿಮ್ ಕಾರ್ಬನ್ KW ಮೊಬೈಲ್ ಅನ್ನು ಬಿಡುಗಡೆ ಮಾಡಿ ಮಾರುಕಟ್ಟೆಗೆ ಬರುವ ಹಂತದಲ್ಲಿದೆ. ಈ ಮೊಬೈಲ್ ನಲ್ಲಿ QWERTY ಕೀಪ್ಯಾಡ್ ಅನ್ನು ಬಳಸಲಾಗಿದೆ.

ಮೈಕ್ರೋಕಾರ್ಡ್ ಸಪೋರ್ಟ್ ನಿಂದಾಗಿ ಇದರ ಇಂಟರ್ನಲ್ ಮೆಮೊರಿ 8GB ಇದ್ದು ಬ್ಲೂಟೂತ್ ಮತ್ತು USB ಸಂಪರ್ಕವನ್ನು ಹೊಂದಿದೆ. ಇದರಲ್ಲಿರುವ 900 mAh Li-Ion ಬ್ಯಾಟರಿ ಬಳಸಿ 200 ಗಂಟೆಗತಳ ಕಾಲ ಮಾತನಾಡಬಹುದಾಗಿದೆ.

2.4” QVGA ನೋಡಲು ಆಕರ್ಷಕವಾಗಿದ್ದು 320x240 ಪಿಕ್ಸಲ್ ರೆಸ್ಯೂಲಶನ್ ಹೊಂದಿದೆ. ಇದು ವೈಫೈ EDGEಯನ್ನು ಸಪೋರ್ಟ್ ಮಾಡುವುದಿಲ್ಲ.

100ಗ್ರಾಂ ತೂಕವಿರುವ ಈ ಹ್ಯಾಂಡ್ ಸೆಟ್ ಬೆಲೆ ರು.2650 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot