Subscribe to Gizbot

ಗ್ಯಾಲಕ್ಸಿ ಜೋಡಿ ಬಂದಿದೆ ಸ್ಯಾಮ್ ಸಂಗ್ ನಿಂದ

Posted By: Super

{im

ಗ್ಯಾಲಕ್ಸಿ ಜೋಡಿ ಬಂದಿದೆ ಸ್ಯಾಮ್ ಸಂಗ್ ನಿಂದ
ಬಹು ದಿನಗಳಿಂದ ನಿರೀಕ್ಷೆಯಲ್ಲಿದ್ದ ಸ್ಯಾಮ್ ಸಂಗ್ ನ ಎರಡು ನೂತನ ಹ್ಯಾಂಡ್ ಸೆಟ್ ಗಳು ಬಿಡುಗಡೆಗೆ ಸಜ್ಜಾಗಿವೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಪ್ಲೇಯರ್ 4.0 ಮತ್ತು ಪ್ಲೇಯರ್ 5.0 ಎಂಬ ಹೆಸರಿನ ಹ್ಯಾಂಡ್ ಸೆಟ್ ಸದ್ಯದಲ್ಲೇ ಕಾಲಿಡಲಿವೆ.

ಎರಡೂ ಮೊಬೈಲ್ ಗಳು ಆಂಡ್ರಾಯ್ಡ್ 2.2 ಫ್ರೊಯೊ ಪ್ಲಾಟ್ ಫಾರ್ಮ್ ಬೆಂಬಲಿತವಾಗಿದ್ದು, ಹೊಸ ಆಂಡ್ರಾಯ್ಡ್ ಆಯಾಮಗಳಿಗೆ ಅಪ್ ಡೇಟ್ ಮಾಡಿಕೊಳ್ಳುವ ಸೌಲಭ್ಯವೂ ಇದೆ.

4.0 ಮೊಬೈಲ್ 4 ಇಂಚಿನ ಸ್ಕ್ರೀನ್ ಹೊಂದಿದ್ದರೆ, 5.0 ಮೊಬೈಲ್ 5 ಇಂಚಿನ ಸ್ಕ್ರೀನ್ ಪಡೆದುಕೊಂಡಿದೆ. ಎರಡೂ ಡಿಸ್ಪ್ಲೇಗಳು WVGA TFT LCD ತಂತ್ರಜ್ಞಾನ ಹೊಂದಿದೆ. ಒಟ್ಟಾರೆ 40 ಜಿಬಿ ಶೇಖರಣಾ ಸಾಮರ್ಥ್ಯ ಹೊಂದಿರುವ ಈ ಎರಡೂ ಮೊಬೈಲ್ ನ ಆಂತರಿಕ ಮೆಮೊರಿ 8ಜಿಬಿಯಾದರೆ, 32 ಜಿಬಿವರೆಗೂ ಮೆಮೊರಿ ವಿಸ್ತರಣೆ ಸಾಧ್ಯವಿದೆ.

3.2 ಮೆಗಾ ಪಿಕ್ಸಲ್ ಫ್ರಂಟ್ ಮತ್ತು ಬ್ಯಾಕ್ ಕ್ಯಾಮೆರಾ ಹೊಂದಿರುವ ಈ ಎರಡು ಮೊಬೈಲ್ ನಲ್ಲಿ ವಿಡಿಯೋ ಚಾಟಿಂಗ್ ಅನುಕೂಲವಾಗಲೆಂದು VGA ಕ್ಯಾಮೆರಾ ನೀಡಲಾಗಿದೆ.

ಸಂಗೀತದ ಅನುಭವಕ್ಕೆ ಸೌಂಡ್ ಅಲೈವ್ ಸೌಂಡ್ ಎಂಜಿನ್ ಮತ್ತು ಸ್ಟಿರಿಯೋ ಸ್ಪೀಕರ್ ನೀಡಲಾಗಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ 4.0 ಮತ್ತು 5.0 MP3, AAC ಮುಂತಾದ ಮಲ್ಟಿ ಫಾರ್ಮೆಟ್ ಫೈಲ್ ಗಳನ್ನು ಬೆಂಬಲಿಸುತ್ತದೆ. ಬ್ಲೂಟೂಥ್, ವೈ-ಫೈ, GPS ನೇವಿಗೇಶನ್ ಸೌಲಭ್ಯ ಇದೆ.

ಸ್ಕೈಪ್ ಮತ್ತು ವೈ-ಫೈ ಆಡಿಯೋ ಕಾಲ್, ವೈ-ಫೈ ಮೂಲಕ ವಿಡಿಯೋ ಚಾಟಿಂಗ್ ಗೆ Qik ಕೂಡ ನೀಡಲಾಗಿದೆ. ಪ್ಲೇಯರ್ 5.0 2500 mAh ಬ್ಯಾಟರಿ ಹೊಂದಿದ್ದು, 60 ಗಂಟೆ ಮ್ಯುಸಿಕ್ ಪ್ಲೇ ಬ್ಯಾಕ್ ನೀಡಿದರೆ, ಪ್ಲೇಯರ್ 4.0 1200 mAh ಬ್ಯಾಟರಿಯೊಂದಿಗೆ 54 ಗಂಟೆ ಬ್ಯಾಟರಿ ಪವರ್ ನೀಡುತ್ತದೆ.

ಭಾರತದಲ್ಲಿ ಈ ಹ್ಯಾಂಡ್ ಸೆಟ್ ಬೆಲೆ ಎಷ್ಟಿರಬಹುದೆಂದು ತಿಳಿದುಬಂದಿಲ್ಲ. ಆದರೆ ಭಾರತೀಯರಿಗೆ ಈ ಮೊಬೈಲ್ ಗಳು ತುಂಬಾ ಸೂಕ್ತವೆನಿಸಲಿದೆ ಎಂದು ಕಂಪನಿ ತಿಳಿಸಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot