ಸ್ಮಾರ್ಟ್ ಆಗಿವೆ HTC ಸ್ಮಾರ್ಟ್ ಪೋನ್ ಗಳು

Posted By: Staff

ಸ್ಮಾರ್ಟ್ ಆಗಿವೆ HTC ಸ್ಮಾರ್ಟ್ ಪೋನ್ ಗಳು
ಮೊಬೈಲ್ ಕ್ಷೇತ್ರದಲ್ಲಿ HTC ಮೊಬೈಲ್ ಹೆಸರು ತುಂಬಾನೆ ಚಿರಪರಿಚಿತ. ಅದರಲ್ಲೂ ಈ ಕಂಪನಿಯ ಸ್ಮಾರ್ಟ್ ಪೋನ್ ಗಳಿಗೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ.

ಈಗ ಮತ್ತೆರಡು ಹೊಸ ಮಾಡಲ್ ನ ಸ್ಮಾರ್ಟ್ ಪೋನ್ ಗಳನ್ನು ಪರಿಚಯಿಸಿದ್ದು ಸ್ಮಾರ್ಟ್ ಪೋನ್ ಗಳ ಕ್ಷೇತ್ರದಲ್ಲಿ ಮತ್ತಷ್ಟು ಕ್ರಾಂತಿಯನ್ನು ಉಂಟು ಮಾಡುವ ಪ್ರಯತ್ನದಲ್ಲಿದೆ.

ಅದರಲ್ಲಿ ಇದರ ಹೊಸ HTC ರೈಮೆ ಹೆಣ್ಣು ಮಕ್ಕಳಿಗಾಗಿಯೆ ಮಾಡಲಾದ ಸ್ಮಾರ್ಟ್ ಪೀನ್ ಇದಾಗಿದೆ. ಆಂಡ್ರಯ್ಡ್ 2.3.4 ಆಯಾಮ ಹೊಂದಿರುವ ಈ ಸ್ಮಾರ್ಟ್ ಪೋನ್ ಒಳ್ಳೆಯ ಗುಣಮಟ್ಟದಾಗಿದ್ದು HTC ಸೆನ್ಸೇಷನ್ XLಕ್ಕೆ ಹೋಲಿಸಿದಾಗ ಇವುಗಳ ನಡುವೆ ಹೆಚ್ಚಿನ ವ್ಯತ್ಯಾಸ ಕಂಡು ಬರುವುದಿಲ್ಲ.

ಆದರೆ ಇವುಗಳ ಸ್ಕ್ರೀನ್ ಸೈಜ್ ನಲ್ಲಿ ವ್ಯತ್ಯಾಸವಿದ್ದು HTC ರೈಮೆ 3.7 ಮತ್ತು HTC ಸೆನ್ಸೇಷನ್ XL 4.7 ಸ್ಕ್ರೀನ್ ಸೈಜ್ ಹೊಂದಿದೆ. ಇದನ್ನು ಹೊಪರೆತು ಪಡಿಸಿದರೆ ಎರಡೂ ಸ್ಮಾರ್ಟ್ ಪೋನಿನಲ್ಲಿ ಕೂಡ ಮಲ್ಟಿ ಟಚ್ ಫೀಚರ್, ಲೈಟ್ ಸೆನ್ಸಾರ್, ಸ್ಕ್ರಾಚ್ ತಡೆಗಟ್ಟುವ ಗ್ಲಾಸ್ ಹೊಂದಿದೆ.

ಈ ಸ್ಮಾರ್ಟ್ ಪೋನ್ ಗಳಲ್ಲಿ 1600 mAh ಸ್ಟ್ಯಾಂಡರ್ಡ್ ಬ್ಯಾಟರಿ ಬಳಸಿದ್ದು, HTC ರೈಮೆ 6.83 ಮತ್ತು HTC ಸೆನ್ಸೇಷನ್ XL 11.83 ಗಂಟೆಗಳ ಟಾಕ್ ಟೈಮ್ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ ಸಾಮರ್ಥ್ಯದಲ್ಲೂ ವ್ಯತ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್ ಪೋನ್ ಗಳಲ್ಲಿ HTC ರೈಮೆ 5 ಮೆಗಾ ಪಿಕ್ಸಲ್ ಮತ್ತು HTC ಸೆನ್ಸೇಷನ್ XL 8 ಮೆಗಾ ಪಿಕ್ಸಲ್ ಹೊಂದಿದೆ.

ಹೀಗೆ ಒಂದೆರಡು ವಿಷಯಗಳಲ್ಲಿ ವ್ಯತ್ಯಾಸ ಹೊಂದಿರುವ ಈ ಸ್ಮಾರ್ಟ್ ಪೋನ್ ಗಳು ಬೆಲೆಯಲ್ಲಿ ಸ್ವಲ್ಪ ಮಟ್ಟಿಗಿನ ವ್ಯತ್ಯಾಸ ಹೊಂದಿದ್ದು ಅದರಲ್ಲಿ HTC ರೈಮೆ ರು. 25,000 ಹಾಗೂ HTC ಸೆನ್ಸೇಷನ್ XL ರು. 35,000 ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot