ಕಾರ್ಡ್ ನಂತಿರುವ ಈ ಮೊಬೈಲ್ ನಿಮ್ಮಲ್ಲೂ ಇರಲಿ

By Super
|
ಕಾರ್ಡ್ ನಂತಿರುವ ಈ ಮೊಬೈಲ್ ನಿಮ್ಮಲ್ಲೂ ಇರಲಿ
ಲಾವಾ ಮೊಬೈಲ್ ಎಂದರೆ ಅಲ್ಲೇನೊ ವಿಶೇಷತೆಯಿದೆ ಎಂದೇ ಅರ್ಥ. ಭಾರತದಲ್ಲಿ ಲಾವಾ ಮೊಬೈಲ್ ಗೆ ತನ್ನದೇ ಆದ ಸ್ಥಾನವಿದೆ. ತಕ್ಕ ಬೆಲೆಗೆ ಅತ್ಯುನ್ನತ ಗುಣಮಟ್ಟದ ಮೊಬೈಲ್ ಬಿಡುಗಡೆಮಾಡುವ ಖ್ಯಾತಿ ಹೊಂದಿರುವ ಲಾವಾ ಈ ಬಾರಿ ನೆಟ್ ವರ್ಕ್ ವಿಭಾಗಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದೆ.

ಲಾವಾ W150 ಮೊಬೈಲ್ ಬಿಡುಗಡೆಗೆ ಲಾವಾ ತಯಾರಿ ನಡೆಸಿದೆ. 2ಜಿ ಮತ್ತು 3ಜಿ ಬೆಂಬಲಿಸಲಿರುವ ಈ ಮೊಬೈಲ್ ನಲ್ಲಿ ವೈ-ಫೈ ಮೂಲಕ WAN ಕೂಡ ಲಭ್ಯವಿದೆ. ಕಾರ್ಡ್ ನಂತೆ ಇರುವ ಈ ಮೊಬೈಲ್ ವಿನ್ಯಾಸ ನಿಮ್ಮನ್ನು ನಿಬ್ಬೆರಗಾಗಿಸುತ್ತದೆ.

ಲಾವಾ WAN ಮೊಬೈಲ್ ವಿಶಿಷ್ಟತೆ:
* 100 ಗ್ರಾಂ ತೂಕ
* 2ಜಿ ಮತ್ತು 3ಜಿಗೆ ಪವರ್ ಸ್ವಿಚ್
* ಎಥೆರ್ನೆಟ್ ಪೋರ್ಟ್
* ಸುರಕ್ಷತಾ ಕವಚ
* ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್ ನೊಂದಿಗೆ ವೈರ್ ಲೆಸ್ ಸಂಪರ್ಕ
* ಮಾಹಿತಿ ವಿನಿಮಯಕ್ಕೆ ಅಗತ್ಯವಾದ ವೇಗ: 802.11 n ಗೆ 150Mbps, 802.11 gಗೆ 54 Mbps ಮತ್ತು 802.11 bಗೆ 11 Mbps
* ವೈರಸ್ ಪತ್ತೆಗೆ six multiple SSIDs ಸೌಲಭ್ಯ
* IP, ಪೋರ್ಟ್ ಫಿಲ್ಟರಿಂಗ್ ಮತ್ತು ರಿಮೋಟ್ ಮ್ಯಾನೇಜ್ ಮೆಂಟ್ ವ್ಯವಸ್ಥೆ
* ನೇವಿಗೇಶನ್ ಸೌಲಭ್ಯ
* 2300 mAh. ಲೀಥಿಯಂ ಬ್ಯಾಟರಿ

ಆಕರ್ಷಿತವಾದ ಮತ್ತು ಅನೇಕ ಅವಕಾಶಗಳನ್ನು ನೀಡಿರುವ ಈ ಲಾವಾ WAN ಮೊಬೈಲ್ ಬೆಲೆ 3,199 ರು ಎಂದು ಕಂಪನಿ ತಿಳಿದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X