ದಟ್ಸ್ ಕನ್ನಡಕ್ಕೆ ಪಾಕಿಸ್ತಾನದಿಂದ ಉಪಟಳ

By Super
|
ದಟ್ಸ್ ಕನ್ನಡಕ್ಕೆ ಪಾಕಿಸ್ತಾನದಿಂದ ಉಪಟಳ
ಪಾಕಿಸ್ತಾನಿಗಳಿಗೆ ಸದಾ ಭಾರತದ ಮೇಲೇನೇ ಕಣ್ಣು. ಅದು ವಂಡರ್ ಕಣ್ಣಲ್ಲ. ವರ್ಕಗಣ್ಣು. ನೆಮ್ಮದಿಯಾಗಿ ಇರಾಣಾಂದ್ರೆ ಇರಾಕೇ ಬಿಡಾಕಿಲ್ಲ. ದಿನಾ ಏನಾದರೊಂದು ಲಫಡಾ ಮಾಡದೇ ಇದ್ರೆ ತಿಂದ ಬಿರಿಯಾನಿ ಅವರಿಗೆ ಜೀರ್ಣಾನೇ ಆಗಕಿಲ್ಲ.

ಭಾರತದ ಮೇಲೆ ದ್ವೇಷ ಸಾಧಿಸಿದ್ರೆ ಪರವಾಗಿಲ್ಲ. ಯಾಕಂದ್ರೆ ಅದನ್ನ ಎದುರಿಸೋಕೆ ನಮ್ಮ ಚಿದಂಬರಂ ಸಾಹೇಬರು ಇದಾರೆ. ಪಂಚೆ ಉಟ್ಕೊಂಡೇ ಯುದ್ಧಭೂಮಿಗೆ ಹೋಗಿ ವೈರಿಗಳನ್ನ ಸದೆಬಡಿತಾರೇ.

ಆದ್ರೆ ನಮ್ಮಂಥ ಕನ್ನಡಿಗರ ಕಷ್ಟ ನಮಗೇ ಗೊತ್ತು. ಎಷ್ಟು ಡಿಲೀಟ್ ಮಾಡಿದ್ರೂ, ಎಂಥದೇ spam filter ಹಾಕಿದ್ರೂ ಪ್ರತಿದಿನ ದಟ್ಸ್ ಕನ್ನಡಕ್ಕೆ ಪಾಕಿಗಳು ಹಾಳೂಮೂಳೂ ಇಮೇಲ್ ಕಳಿಸ್ತಾನೇ ಇರ್ತಾರೆ.

ಇವತ್ತೂ ಒಂದು ಕಳಿಸಿದಾರೆ. ಮೊಬೈಲ್ ಫೋನಿನಲ್ಲಿ ಕುರಾನ್ ಶ್ಲೋಕಗಳು ಮಂತ್ರಗಳು ನಮಾಜುಗಳು ಇದಾವಂತೆ. GSM Mobile Quran 133 4799 ರೂಪಾಯಿಗೆ ಒಂದು ಸಿಂಬಿಯಾಸಿಸ್ ಫೋನು, available in Pakistan only, though. ಇವತ್ತೇ ಖರೀದಿಸಿ ಅಂತ ಹೇಳ್ತಾರೆ.

ನಮಗೆ ಕೋಪಾನೇ ಬಂತು.. ನಾವೂ ತೊಗೊತೀವಿ, ಆದ್ರೆ ನಿಮ್ಮ ಮೊಬೈಲು ಸೆಕ್ಯುಲರ್ ಆಗಿದ್ರೆ ಮಾತ್ರ ತೊಗೊತೀವಿ. ಸಿಕ್ಯುಲರ್ ಆದ್ರೆ ಬೇಡ. ಕುರಾನು, ರಾಮಾಯಣ, ಮಹಾಭಾರತ. ಲಲಿತಾ ಸಹಸ್ರನಾಮ, ಹೋಮರ್, ಈಲಿಯಡ್, ಡಿವೈನ್ ಕಾಮಿಡಿ, ಬೈಬಲ್ಲು, ಉಪನಿಷತ್, ಮಂಕುತಿಮ್ಮನ ಕಗ್ಗ, ಪುರಂದರದಾಸರ ಕೀರ್ತನೆಗಳು ಇದ್ರೆ ಮಾತ್ರ ಅಂತ ಖಡಕ್ ಉತ್ತರ ಬರೆದಿದೀವಿ.

ಅಂಥ ಬಿಲ್ಟ್ ಇನ್ ಪುರಾಣ ಪುಣ್ಯಕಥೆ, ಮಂತ್ರಪುಷ್ಪಗಳನ್ನು ಗುನುಗುವ ಮೊಬೈಲ್ ಬಂದರೆ ನೀವೂ ತೊಗೊತೀರಾ ಅಂತ ನಾವೂ ಅಂದ್ಕೊತೀವಿ. ಒಂದು ಕಂಡೀಷನ್ ಅಂದ್ರೆ ಚೈನೀಸ್ ಮಾಡಲ್ ಬೇಡಪ್ಪಾ. ಇನ್ ದ ಮೀನ್ ವೈಲ್, ನಮ್ಮ ರಿಪ್ಲೈಗೆ ಪಾಕಿಸ್ತಾನದಿಂದ ಏನು ಉತ್ತರ ಬರತ್ತೋ ನೋಡ್ಕೊಂಡು ಮತ್ತೆ ನಿಮಗೆ ಹೇಳ್ತೀವಿ. ಅಲ್ಲಿಯವರೆಗೆ ಏರ್ ಟೆಲ್ ಮ್ಯೂಸಿಕ್ ಡೌನ್ ಲೋಡ್ ಮಾಡ್ಕೊಂಡು ಸಿನಿಮಾ ಹಾಡುಗಳನ್ನ ಕೇಳ್ತಾನೇ ಕಾಲಕಳೀರಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X