ಭಾರತಕ್ಕೆ ಬರಲಿದೆ ಬೆನ್ ಕ್ಯೂ ಸ್ಮಾರ್ಟ್ ಪೋನ್ !

Posted By: Staff

ಭಾರತಕ್ಕೆ ಬರಲಿದೆ ಬೆನ್ ಕ್ಯೂ ಸ್ಮಾರ್ಟ್ ಪೋನ್ !
ಟಿವಿ ಮತ್ತು ಪ್ರೊಜೆಕ್ಟರ್ ಗಳ ಉತ್ಪಾದನೆಯಲ್ಲಿ ಒಳ್ಳೆಯ ಹೆಸರು ಮಾಡಿರುವ ಬೆನ್ ಕ್ಯೂ ಸ್ಮಾರ್ಟ್ ಪೋನ್ ತಯಾರಿಸುವ ಯೋಜನೆಯಿಂದಾಗಿ ತನ್ನ ವಿಸ್ತಾರವನ್ನು ಹೆಚ್ಚಿಸಿದೆ.

ಭಾರತದಲ್ಲಿ ಸ್ಮಾರ್ಟ್ ಪೋನ್ ಗಳಿಗೆ ಬೇಡಿಕೆ ತುಂಬಾ ಇರುವುದರಿಂದ ಸ್ಮಾರ್ಟ್ ಪೋನ್ ಗಳನ್ನು ಬರುವ ವರ್ಷವಷ್ಟೆ ಮಾರುಕಟ್ಟೆಗೆ ಬಿಡಲಿದೆ.

ಈ ಡಿಜಿಟಲ್ ಸಾಧನವಾಗಿರುವ ಈ ಸ್ಮಾರ್ಟ್ ಟಚ್ ಸ್ಕ್ರೀನ್ ಪೇನಲ್ ಮತ್ತು ಅದರ ಸ್ಕ್ರೀನ್ ಸೈಜ್ 3.7 ಅಗಲವನ್ನು ಹೊಂದಿರುತ್ತದೆ.

ಬೆನ್ ಕ್ಯೂ ಇತಿಹಾಸವನ್ನು ಗಮನಿಸಿದಾಗ ಇದು ಪೋನಿನ ತಯಾರಿಯಲ್ಲಿ ಪ್ರಪಂಚದಲ್ಲಿಯೆ 6 ನೇ ಸ್ಥಾನದಲ್ಲಿದ್ದು 2005 ಇದು ತೆಗೆದು ಕೊಂಡ ತಪ್ಪಾದ ಯೋಜನೆಯಿಂದಾಗಿ ಇದರ ಬೆಳವಣಿಗೆಗೆ ಸ್ವಲ್ಪ ಹೊಡೆತ ಬಿದ್ದಿತು.

ಆದರೆ ಅದೇ ತಪ್ಪನ್ನುಸ್ಮಾರ್ಟ್ ಪೋನಿನಲ್ಲಿ ಆವರ್ತಿಸಲಾರೆ ಎಂಬ ಧೃಡ ವಿಶ್ವಾಸದಿಂದ ಬರುತ್ತದೆ.ಇತ್ತೀಚಿನ ಸಮೀಕ್ಷೆ ಪ್ರಕಾರ ಹೇಳುದಾದರೆ ಭಾರತದಲ್ಲಿ ಸ್ಮಾರ್ಟ್ ಪೋನಿನ ಬೇಡಿಕೆ 60% ಇದೆ.

ಮುಂಬರುವ ದಿನಗಳಲ್ಲಿ ಇದರ ಬೇಡಿಕೆ ಮತ್ತಷ್ಟು ಹೆಚ್ಚಲಿದ್ದು ಇನರು ಕೂಡ ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಸ್ವಾಗತಿಸುತ್ತಾರೆ ಎಂಬ ನಂಬಿಕೆಯಿಂದ ಭಾರತದಲ್ಲಿ ಸ್ಮಾರ್ಟ್ ಪೋನ್ ಮಾರುಕಟ್ಟೆ ಮಾಡಲು ಬರುತ್ತಿದೆ ಬೆನ್ ಕ್ಯೂ ಕಂಪನಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot