ಫ್ಲೈ ಮೊಬೈಲನ್ನ ನೀವು ಟಚ್ ಮಾಡೋದು ಯಾವಾಗ?

By Super
|
ಫ್ಲೈ ಮೊಬೈಲನ್ನ ನೀವು ಟಚ್ ಮಾಡೋದು ಯಾವಾಗ?
ಫ್ಲೈ ಮೊಬೈಲ್ ಕಂಪನಿ ಇದೀಗ ಕಡಿಮೆ ಬೆಲೆಗೆ ಎರಡು ಸಿಮ್ ಮತ್ತು ಇನ್ನಿತರ ಅತ್ಯುನ್ನತ ಆಯ್ಕೆಗಳನ್ನು ಹೊಂದಿರುವ ಫ್ಲೈ E322 ಮೊಬೈಲ್ ಪರಿಚಯಿಸಿದೆ. ಅತಿ ಅಗ್ಗದ ಬೆಲೆಗೆ ವಿನೂತನ ತಂತ್ರಜ್ಞಾನಗಳನ್ನು ಹೊಂದಿರುವ ಈ ಮೊಬೈಲ್ ನೋಡಲೂ ಆಕರ್ಷಕ.

ಮೋಡಿ ಮಾಡುವಂತಿರುವ ಇದರ ಟಚ್ ಸ್ಕ್ರೀನ್ ನಿಮ್ಮ ಉತ್ತಮ ಆಯ್ಕೆ ಎನಿಸುವುದರಲ್ಲಿ ಸಂಶಯವೇ ಇಲ್ಲ.

ಫ್ಲೈ E322 ಮೊಬೈಲ್ ವಿಶೇಷತೆ:
* 85 ಗ್ರಾಂ ತೂಕ
* ಡ್ಯೂಯಲ್ ಸಿಮ್ ತಂತ್ರಜ್ಞಾನ
* 112 x 62 x 14.1 ಎಂಎಂ ಡೈಮೆಂಶನ್
* ಎರಡು GSM ನೆಟ್ ವರ್ಕ್ ಬೆಂಬಲಿಸುತ್ತದೆ
* QVGA TFT ತಂತ್ರಜ್ಞಾನದ ಸ್ಕ್ರೀನ್, ಟಚ್ ಸ್ಕ್ರೀನ್
* 240 x 320 ಪಿಕ್ಸಲ್ ಡಿಸ್ಪ್ಲೇ
* 2 ಮೆಗಾ ಪಿಕ್ಸಲ್ ಕ್ಯಾಮೆರಾ, 1600 x 1200 ಪಿಕ್ಸಲ್ ರೆಸೊಲ್ಯೂಷನ್
* ಡಿಜಿಟಲ್ ಝೂಮ್
* ಮಲ್ಟಿ ವಿಡಿಯೋ ಮತ್ತು ಆಡಿಯೋ ಫಾರ್ಮೆಟ್
* 2.19 ಎಂಬಿ ಆಂತರಿಕ ಮೆಮೊರಿ ಸಾಮರ್ಥ್ಯ
* 32 ಜಿಬಿವರೆಗೂ ಮೆಮೊರಿ ವಿಸ್ತರಣೆ ಸಾಮರ್ಥ್ಯ
* ಬ್ಲೂಟೂಥ್, ವೈ-ಫೈ, USB ಪೋರ್ಟ್
* ಸಾಮಾಜಿಕ ತಾಣಗಳ ಆಯ್ಕೆ
* ಮೊಬೈಲ್ ಟ್ರ್ಯಾಕರ್ ಮತ್ತು ಆಟೊ ಕಾಲ್ ರೆಕಾರ್ಡಿಂಗ್

1400 mAH ಬ್ಯಾಟರಿಯ ಬ್ಯಾಕಪ್ ಉತ್ತಮವಾಗಿದ್ದು, 300 ಗಂಟೆ ಸ್ಟಾಂಡ್ ಬೈ ಟೈಂ ಮತ್ತು 14 ಗಂಟೆ 30 ನಿಮಿಷ ಬ್ಯಾಟರಿ ಬ್ಯಾಕಪ್ ನೀಡುತ್ತದೆ. ಇಷ್ಟೆಲ್ಲಾ ಉತ್ತಮ ಅವಕಾಶಗಳು ಕೇವಲ 3,000 ರುಗೆ ನಿಮ್ಮ ಕೈತಲುಪಲು ಸಿದ್ಧಗೊಂಡಿರುವುದು ನಿಜಕ್ಕೂ ಆಶ್ಚರ್ಯಕರ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X