ನಿಮಗೆ ತಕ್ಕಂತೆ ಬದಲಾಗುತ್ತೆ ಈ ಸ್ಮಾರ್ಟ್ ಮೊಬೈಲ್

Posted By: Staff

ನಿಮಗೆ ತಕ್ಕಂತೆ ಬದಲಾಗುತ್ತೆ ಈ ಸ್ಮಾರ್ಟ್ ಮೊಬೈಲ್
ಕೆಲಸ ಮತ್ತು ಮೋಜು, ಎರಡೂ ಕಾರಣಗಳಿಗೂ ಸಹಾಯವಾಗುವಂಥ ಒಂದೇ ಮೊಬೈಲನ್ನು ಕೊಂಡುಕೊಳ್ಳಲು ಹುಡುಕುತ್ತಿದ್ದರೆ ಇಲ್ಲಿದೆ ನಿಮಗೆ ಸೂಕ್ತ ಆಯ್ಕೆ. ಇತ್ತೀಚೆಗಷ್ಟೆ HTC ಕಂಪನಿ ಸ್ಮಾರ್ಟ್ F3188 ಕಾಪಾಕ್ಟ್ ಫೋನ್ ಬಿಡುಗಡೆಗೊಳಿಸಿದೆ.

ಈ ಮೊಬೈಲಲ್ಲಿ ಲಭ್ಯವಿರುವ "Comes with Scenes" ನಿಮ್ಮ ಮೂಡ್ ಗೆ ತಕ್ಕಂತೆ ಹೊಂದಿಕೊಳ್ಳುತ್ತೆ. ನಿಮ್ಮ ಅಭಿರುಚಿಗೆ ತಕ್ಕಂತೆ ಕಾನ್ ಫಿಗರೇಶನ್ ಆಯ್ಕೆ ಮಾಡಿಟ್ಟುಕೊಳ್ಳಬಹುದು. ನಿಮಗೆ ಬೇಕೆನಿಸಿದ ಅಪ್ಲಿಕೇಶನ್ ಮತ್ತು ಫೀಚರ್ಸ್ ಗಳನ್ನು ನಿಮಗೆ ಬೇಕೆಂದಾಗ ಬದಲಾಯಿಸಿಕೊಳ್ಳುತ್ತಿರಬಹುದು.

ಮೊಬೈಲ್ ನಲ್ಲಿರುವ HTC ಸೆನ್ಸ್ ನೂತನ ನೇವಿಗೇಶನ್ ಅನುಭವವನ್ನು ನಿಮಗೆ ನೀಡಲಿದೆ. ಹವಾಮಾನ, ಸಂಗೀತ, ಫೋಟೊ ಮತ್ತು ಸಾಮಾಜಿಕ ತಾಣಗಳ ಅತಿವೇಗದ ಸಂಪರ್ಕಕ್ಕೆಂದು ಮೊಬೈಲ್ ನಲ್ಲಿ widgets (ವಿಡ್ಜೆಟ್) ಅಳವಡಿಸಲಾಗಿದೆ.

ಮೊಬೈಲ್ ನಲ್ಲಿರುವ ಫ್ರೆಂಡ್ ಅಪ್ಲಿಕೇಶನ್, ಟ್ವಿಟ್ಟರ್, ಫೇಸ್ ಬುಕ್, ಫ್ಲಿಕ್ಕರ್ ಮತ್ತು ಇನ್ನಿತರ ಸಾಮಾಜಿಕ ತಾಣಗಳಲ್ಲಿ ನಿಮ್ಮ ಸ್ನೇಹಿತರ ಅಪ್ಡೇಟ್ ಗಳನ್ನು ನಿಮಗೆ ನೀಡುತ್ತಿರುತ್ತದೆ.

HTC ಸ್ಮಾರ್ಟ್ F3188 ವಿಶೇಷತೆ:
* ಟಚ್ ಸೆನ್ಸಿಟಿವಿಟಿ
* 2.8 ಇಂಚು QVG ಹೈ ರೆಸೊಲ್ಯೂಷನ್ ಸ್ಕ್ರೀನ್
* TFT-LCD ಸ್ಕ್ರೀನ್ * 3.0 ಮೆಗಾ ಪಿಕ್ಸಲ್ ಕ್ಯಾಮೆರಾ, ಫ್ಲಾಶ್ ಲೈಟ್ ಮತ್ತು ಫಿಕ್ಸಡ್ ಫೋಕಸ್

ಅತ್ಯಾಧುನಿಕ ಸ್ಮಾರ್ಟ್ ಫೋನ್ ಗಳಲ್ಲಿರುವ Brew MP ಅಥವಾ Qualcomm Brew Mobile Platform ಆಪರೇಟಿಂಗ್ ಸಿಸ್ಟಮ್ ಈ ಮೊಬೈಲ್ ನ ಕೇಂದ್ರಬಿಂದು. ಇಷ್ಟು ಅತ್ಯಾಧುನಿಕ ಆಯ್ಕೆಗಳನ್ನು ನೀಡಿರುವ ಈ ಮೊಬೈಲ್ ಬೆಲೆ 6,700 ರು ಎಂದು ಕಂಪನಿ ಪ್ರಕಟಿಸಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot