ನೋಕಿಯಾದಿಂದ ಮತ್ತೆರಡು ಸ್ಮಾರ್ಟ್ ಫೋನ್ ಸಿದ್ಧ

Posted By: Staff

ನೋಕಿಯಾದಿಂದ ಮತ್ತೆರಡು ಸ್ಮಾರ್ಟ್ ಫೋನ್ ಸಿದ್ಧ
ಪ್ರತಿಷ್ಟಿತ ನೋಕಿಯಾ ಕಂಪನಿ ನೋಕಿಯಾ 603 ಮತ್ತು 701 ನೂತನ ಸ್ಮಾರ್ಟ್ ಫೋನ್ ಪರಿಚಯಿಸಿದೆ. ನೋಕಿಯಾ 701 ಆಗಸ್ಟ್ ನಲ್ಲಿಯೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದರೆ, ನೋಕಿಯಾ 603 ಬಿಡುಗಡೆಗೆ ಸಜ್ಜಾಗಿದೆ.

ಎರಡೂ ಮೊಬೈಲ್ ಗಳು ಸಿಂಬಿಯಾನ್ ಬೆಲ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದ್ದು, 1 GHz ಪ್ರೊಸೆಸರ್ ಹೊಂದಿದೆ. ನೋಕಿಯಾ 701ನಲ್ಲಿ 3ಡಿ ಗ್ರಾಫಿಕ್ಸ್ ಬಳಕೆದಾರರಿಗೆ ಅನನ್ಯ ಅನುಭವ ನೀಡಲಿದೆ. ಎರಡು ಸ್ಮಾರ್ಟ್ ಫೋನ್ ಗಳಲ್ಲು 2ಜಿ ಮತ್ತು 3 ಜಿ ಸಂಪರ್ಕ ಕಲ್ಪಿಸಲಾಗಿದೆ.

ನೋಕಿಯಾ 701 ಮೊಬೈಲ್ ವಿಶೇಷತೆ:
* 131 ಗ್ರಾಂ ತೂಕ
* ಸಿಲ್ವರ್ ಲೈಟ್, ಸ್ಟೀಲ್ ಡಾರ್ಕ್, ಅಮೆಥಿಸ್ಟ್ ವಯೊಲೆಟ್ ಬಣ್ಣಗಳಲ್ಲಿ ಲಭ್ಯ
* 35 ಇಂಚಿನ LED-Backlit TFT ಟಚ್ ಸ್ಕ್ರೀನ್, 360 x 640 ಪಿಕ್ಸಲ್ ರೆಸೊಲ್ಯೂಷನ್
* MP3, ಸ್ಟಿರಿಯೋ ಎಫ್ ಎಂ ರೆಡಿಯೋ, RDS, ಎಫ್ ಎಂ ಟ್ರಾನ್ಸ್ ಮಿಟರ್
* 8 ಮೆಗಾ ಪಿಕ್ಸಲ್ ಕ್ಯಾಮೆರಾ, 3264 x 2248 ಪಿಕ್ಸಲ್ ರೆಸೊಲ್ಯೂಷನ್, ಡ್ಯೂಯಲ್ LED ಫ್ಲಾಶ್ ತಂತ್ರಜ್ಞಾನ
* ಆಂತರಿಕ ಮೆಮೊರಿ ಸಾಮರ್ಥ್ಯ ಒಟ್ಟಾರೆ 8 ಜಿಬಿ
* ಮೈಕ್ರೊ SD ಕಾರ್ಡ್, 32 ಜಿಬಿ ವರೆಗೂ ಮೆಮೊರಿ ವಿಸ್ತರಣೆ

ನೋಕಿಯಾ 603 ಮೊಬೈಲ್ ವಿಶೇಷತೆ:
* 109.6 ಗ್ರಾಂ ತೂಕ
* ಕಪ್ಪು ಬಣ್ಣದಲ್ಲಿ ಲಭ್ಯ
* 3.5 ಇಂಚಿನ IPS LCD ಟಚ್ ಸ್ಕ್ರೀನ್ ಡಿಸ್ಪ್ಲೇ 360 x 640 ಪಿಕ್ಸಲ್ ರೆಸೊಲ್ಯೂಷನ್
* MP3, ಸ್ಟಿರಿಯೋ ಎಫ್ ಎಂ ರೆಡಿಯೋ, RDS
* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 x 1944 ಪಿಕ್ಸಲ್ ರೆಸೊಲ್ಯೂಷನ್
* ಆಂತರಿಕೆ ಮೆಮೊರಿ ಸಾಮರ್ಥ್ಯ 2 ಜಿಬಿ
* ಮೈಕ್ರೊ SD ಕಾರ್ಡ್, 32 ಜಿಬಿ ವರೆಗೂ ಮೆಮೊರಿ ವಿಸ್ತರಣೆ

603 ಮತ್ತು 701 ಎರಡೂ ಮೊಬೈಲ್ ಗಳಲ್ಲೂ 720p ಹೈ ಡೆಫನಿಶನ್ ವಿಡಿಯೋ ರೆಕಾರ್ಡಿಂಗ್, 512MB RAM, USB, ಬ್ಲೂಟೂಥ್ ಸಂಪರ್ಕ, GPRS ಮತ್ತು EDGE ಸಂಪರ್ಕ ನೀಡಲಾಗಿದೆ. ಇಷ್ಟಲ್ಲದೆ 802.11 b/ g/ n ವೈ-ಫೈ ಸಂಪರ್ಕ, ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸೆಲೆರೊಮೀಟರ್, ಡಿಜಿಟಲ್ ಕಾಂಪಸ್ ಮತ್ತು ಫೋಟೊ ಎಡಿಟರ್, A-GPS ತಂತ್ರಜ್ಞಾನ ಕೂಡ ಇದರಲ್ಲಿದೆ.

ನೋಕಿಯಾ 701 ಮೊಬೈಲ್ ಬೆಲೆ 17,000ರು ಇದ್ದರೆ, ನೋಕಿಯಾ 603 ಬೆಲೆ 13,500 ರು ಇರಬಹುದೆಂದು ಅಂದಾಜಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot