Subscribe to Gizbot

ನೋಕಿಯಾ ಆಶಾ ಸಿರೀಸ್ ನಲ್ಲಿ ನಿಮ್ಮ ಆಯ್ಕೆ ಯಾವುದು?

Posted By: Staff

ನೋಕಿಯಾ ಆಶಾ ಸಿರೀಸ್ ನಲ್ಲಿ ನಿಮ್ಮ ಆಯ್ಕೆ ಯಾವುದು?
ಸ್ಟೈಲಿಶ್ ಹಾಗೂ ಬೆಲೆ, ಎರಡರಲ್ಲೂ ಸೈ ಅನಿಸುವ ನಾಲ್ಕು ನೋಕಿಯಾ ಮೊಬೈಲ್ ಗಳು ಇನ್ನೇನು ಮೊಬೈಲ್ ಶಾಪ್ ಗಳಲ್ಲಿ ನಿಮಗೆ ಲಭ್ಯವಾಗಲಿದೆ, ಆಶಾ ಸಿರೀಸ್ ಹೆಸರಿನಲ್ಲಿ ಆಶಾ 200 ಮತ್ತು 201, ಆಶಾ 300 ಮತ್ತು 303 ಮೊಬೈಲ್ ಗಳನ್ನು ನೋಕಿಯಾ ಬಿಡುಗಡೆಗೊಳಿಸಿದೆ.

ಕ್ವೆರ್ಟಿ ಕೀಪ್ಯಾಡ್ ಮತ್ತು ಸಾಮಾನ್ಯ ಕೀಪ್ಯಾಡ್ ಎರಡರಲ್ಲೂ ಲಭ್ಯವಿರುವ ಈ ಮೊಬೈಲ್ ಗಳು ಮೊದಲ ನೋಟಕ್ಕೆ ನಿಮ್ಮನ್ನು ಮೋಡಿಮಾಡಲಿವೆ.

ಅವಳಿಗಳಂತಿರುವ ಆಶಾ 200 ಮತ್ತು 201 ಮೊಬೈಲ್ ನಲ್ಲಿ ಸ್ವಲ್ಪವೇ ವ್ಯತ್ಯಾಸವಿದೆ. ಆಶಾ 200 ಡ್ಯೂಯಲ್ ಸಿಮ್ ಆದರೆ 201 ಮೊಬೈಲ್ ಸಿಂಗಲ್ ಸಿಮ್. ಎರಡರಲ್ಲೂ ಕ್ವೆರ್ಟಿ ಕೀ ಪ್ಯಾಡ್ ಮತ್ತು ಒಳ್ಳೆ ಬಣ್ಣದ ವಿಸ್ತಾರ ಸ್ಕ್ರೀನ್ ಹೊಂದಿದೆ.

ಎರಡೂ ಮೊಬೈಲ್ ಗಳಲ್ಲಿ 2 ಮೆಗಾ ಪಿಕ್ಸಲ್ ಕ್ಯಾಮೆರಾ ಇದ್ದು, ಮಲ್ಟಿ ಮೀಡಿಯಾ, ಎಫ್ ಎಂ ಮತ್ತು ಇನ್ನೂ ಹಲವು ಮನರಂಜನಾತ್ಮಕ ವಿಷಯಗಳನ್ನು ಪಡೆದುಕೊಂಡಿದೆ.

ಆಶಾ 303 ಮೊಬೈಲ್ ನಲ್ಲಿನ ಸೌಲಭ್ಯದ ಕುರಿತು ಹೇಳುವುದಾದರೆ, 2.6 ಇಂಚಿನ ಸ್ಕ್ರೀನ್ ಜೊತೆ ಟಚ್ ಸ್ಕ್ರೀನ್ ಮತ್ತು ಕ್ವೆರ್ಟಿ ಕೀಪ್ಯಾಡ್ ಇದೆ. ವೈ-ಫೈ, ಬ್ಲೂಟೂಥ್, ಇನ್ನಿತರ ಸಂಪಕರ್ಗಳಿಗೂ ಇಲ್ಲಿ ಅವಕಾಶವಿದೆ. 303 ಮೊಬೈಲ್ 3.2 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿದೆ.

ಇದೇ ಸಿರೀಸ್ ನ ಕೊನೆಯ ಮೊಬೈಲ್ ಆಶಾ 300 ನಲ್ಲಿ ನಿಮ್ಮನ್ನು ಚಕಿತಗೊಳಿಸುವ ಮೊದಲ ಅಂಶವೆಂದರೆ 5 ಮೆಗಾ ಪಿಕ್ಸಲ್ ಕ್ಯಾಮೆರಾ. 2.4 ಇಂಚಿನ ಸ್ಕ್ರೀನ್ ಮತ್ತು ಟಚ್ ಸೌಲಭ್ಯ ಹೊಂದಿರುವ ಈ ಮೊಬೈಲ್ ನಲ್ಲಿ ಕ್ವೆರ್ಟಿ ಕೀಪ್ಯಾಡ್ ನೀಡಲಾಗಿಲ್ಲ. ಬ್ಲೂಟೂಥ್ ಮತ್ತು ಇನ್ನಿತರ ಮಲ್ಟಿ ಮೀಡಿಯಾ ಆಯ್ಕೆಗಳು ನಿಮ್ಮ ಮನರಂಜನೆಗೆಂದೇ ಇದರಲ್ಲಿ ಲಭ್ಯವಿದೆ.

ಇನ್ನು ಈ ನಾಲ್ಕೂ ಮೊಬೈಲ್ ಗಳ ಬೆಲೆಯ ಕುರಿತು ಹೇಳುವುದಾದರೆ ಆಶಾ ಅವಳಿಗಳು ಸುಮಾರು 4,200 ಆಗಿದ್ದರೆ ಆಶಾ 303 8,000 ದಿಂದ 9000 ರು ಆಗಿದೆ. ಆಶಾ 300 ಮೊಬೈಲ್ ಬೆಲೆ 6000ರು ಎಂದು ಅಂದಾಜಿಸಲಾಗಿದೆ.


Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot