ಎಂಟ್ರಿಗೆ ರೆಡಿಯಾಗಿದೆ ಸೋನಿ ಎರಿಕ್ಸನ್ ಎಂಡೊ

Posted By: Staff

ಎಂಟ್ರಿಗೆ ರೆಡಿಯಾಗಿದೆ ಸೋನಿ ಎರಿಕ್ಸನ್ ಎಂಡೊ
ಎಲೆಕ್ಟ್ರಾನಿಕ್ ವಸ್ತುಗಳ ತಯಾರಿನಲ್ಲಿ ಸೋನಿ ಎರಿಕ್ಸನ್ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಹ ಹೆಸರುವಾಸಿಯಾಗಿದೆ. ದಿನದಿಂದ ದಿನಕ್ಕೆ ಇದರ ಬೇಡಿಕೆ ಹೆಚ್ಚುತ್ತಿದ್ದು, ಇತ್ತೀಚಿಕೆಗೆ ಸೋನಿ ಎರಿಕ್ಸನ್ ಎಂಡೊ W150ಯನ್ನು ಬಿಡುಗಡೆ ಮಾಡಿದೆ.

ಇದರ ಡಿಸ್ ಪ್ಲೇ ಗಾತ್ರವು 2.60 ಇಂಚಿನಷ್ಟಿದ್ದು 240 x 320 ಪಿಕ್ಸಲ್ ರೆಸ್ಯೂಲೇಶನ್ ಅನ್ನು ಹೊಂದಿದೆ. ಇದರಲ್ಲಿ 2 ಮೆಗಾ ಪಿಕ್ಸಲ್ ಕ್ಯಾಮೆರಾ ಮತ್ತು 2x ಡಿಜಿಟಲ್ ಝೂಮ್ ತಂತ್ರಜ್ಞಾನವನ್ನು ಹೊಂದಿದೆ.

81 ಗ್ರಾಂ ತೂಕದ ಈ ಮೊಬೈಲ್ 2G ನೆಟ್ ವರ್ಕ್ ಅನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೆ 16GB ಯಷ್ಟು ಅಧಿಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಈ ಹ್ಯಾಂಡ್ ಸೆಟ್ ನಲ್ಲಿರುವ microSD ಕಾರ್ಡ್ ಸ್ಲೋಟ್ ಅನ್ನು ಬಳಸಿ ಇದರ ಮೆಮೋರಿಯನ್ನು ವಿಸ್ತರಿಸಬಹುದಾಗಿದೆ.

ಇದನ್ನು ಹೊರೆತು ಪಡಿಸಿ ಬ್ಲೂಟೂಥ್ ಮತ್ತು GPRS ಸೌಲಭ್ಯವನ್ನು ನೀಡಲಾಗಿದೆ. ಸೋನಿ ಎರಿಕ್ಸನ್ ಎಂಡೊ W150ನಲ್ಲಿ 156 MHz ಪ್ರೊಸೆಸರ್ ಉಪಯೋಗಿಸಲಾಗುತ್ತಿದೆ.

ಈ ಮೊಬೈಲ್ ನಲ್ಲಿ ಬ್ರೌಸ್ ಮಾಡಲು HTML ಬ್ರೌಸರ್ ಅನ್ನು ಬಳಸಲಾಗುವುದು, ಇದರಲ್ಲೂ ಸಹ FM ರೇಡಿಯೊ ಕೇಳಬಹುದಾಗಿದೆ. ಈ ಮೊಬೈಲ್ ನಲ್ಲಿರವ 970 mAh ಲೀಥಯಂ ಪಾಲಿಮರ್ ಬ್ಯಾಟರಿಯನ್ನು ಬಳಸಿ 4 ಗಂಟೆಗಳ ನಿರಂತರವಾಗಿ ಮಾತನಾಡಬಹುದಾಗಿದೆ.

ಈ ಮೊಬೈಲ್ ಸಾಮನ್ಯ ಜನರಿಗೂ ಕೈಗೆಟುಕುವ ದರದಲ್ಲಿ ರು. 5, 000 ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot