ಈ ಸ್ಮಾರ್ಟ್ ಫೋನ್ ಗಳಲ್ಲಿ ನಿಮ್ಮ ಸೆಳೆತ ಯಾರೆಡೆಗೆ?

Posted By: Staff

ಈ ಸ್ಮಾರ್ಟ್ ಫೋನ್ ಗಳಲ್ಲಿ ನಿಮ್ಮ ಸೆಳೆತ ಯಾರೆಡೆಗೆ?
ಬಲಿಷ್ಠ ಮೊಬೈಲ್ ಕಂಪನಿಗಳಾದ ಮೊಟೊರೊಲಾ ಮತ್ತು ಸ್ಯಾಮ್ ಸಂಗ್ ಗುಣಮಟ್ಟದ ಫೋನಿನ ತಯಾರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ಹೆಸರುಗಳಿಸಿವೆ.

ಈಗ ತಮ್ಮ ಹೊಸ ಮಾದರಿಯ ಸ್ಮಾರ್ಟ್ ಫೋನ್ ಮೊಟೊರೊಲಾ ಆಟ್ರಿಕ್ಸ್ 2 ಮತ್ತು ಸ್ಯಾಮ್ ಸಂಗ್ ಟ್ರಾನ್ಸ್ ಫಿಕ್ಸ್ ಗಳನ್ನು ಬಿಡುಗಡೆ ಮಾಡುವುದರ ಮುಖಾಂತರ ಪರಸ್ಪರ ತೀವ್ರವಾದ ಪ್ರತಿಸ್ಪರ್ಧೆಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ.

ಗುಣ ಲಕ್ಷಣದಲ್ಲಿ ಸ್ವಲ್ಪ ಭಿನ್ನವಾಗಿದ್ದು ಅದರಲ್ಲೂ ಮಪಟರೊಲಾ ಮತ್ತಷ್ಟು ಉತ್ತಮವಾಗಿದ್ದು ಸ್ಪರ್ಧೆಯಲ್ಲಿ ಸರಿಸಮವಾಗಿರುವ ಇವುಗಳಲ್ಲಿ ಮೊಟೊರೊಲಾ ಆಟ್ರಿಕ್ಸ್ 2 ಡಿಸ್ ಪ್ಲೇಯಲ್ಲಿ 4.3 ಇಂಚು ಮತ್ತು 540 x 960 ಪಿಕ್ಸಲ್ ರೆಸ್ಯೂಲೇಶನ್ ಹೊಂದಿದ್ದರೆ ಸ್ಯಾಮ್ ಸಂಗ್ ಟ್ರಾನ್ಸ್ ಫಿಕ್ಸ್ 3.2 ಇಂಚು ಡಿಸ್ ಪ್ಲೇ ಮತ್ತು 230 x 480 ರೆಸ್ಯೂಲೇಶನ್ ಹೊಂದಿದೆ.

ಕ್ಯಾಮೆರಾ ವಿಷಯದಲ್ಲಿ ಆಟ್ರಿಕ್ಸ್ 2, 8 ಮೆಗಾ ಪಿಕ್ಸಲ್ ಮತ್ತು 0.3 ಒಮೆಗಾ ಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದ್ದರೆ ಟ್ರಾನ್ಸ್ ಫಿಕ್ಸ್ 3.2ನ ಮೆಗಾ ಪಿಕ್ಸಲ್ ಕ್ಯಾಮೆರಾ ಸಾಮರ್ಥ್ಯವನ್ನು ಹೊಂದಿದೆ.

ಆಟ್ರಿಕ್ಸ್ 2 ರಲ್ಲಿ ವೈಫೈ ಸಂಪರ್ಕದ ಸೌಲಭ್ಯವಿದ್ದು ಟ್ರಾನ್ಸ್ ಫಿಕ್ಸ್ ನಲ್ಲಿ ಈ ಸೌಲಭ್ಯವು ಲಭ್ಯವಿಲ್ಲವಾಗಿದೆ. ಈ ಫೋನ್ ಗಳಲ್ಲಿ ಇಂಟರ್ ನೆಟ್ ಬ್ರೌಸ್ ಮಾಡಲು HTML ಬಳಸಿದರೆ, ಮೊಟೊರೊಲಾ ಆಟ್ರಿಕ್ಸ್ 2 GPRS ಮತ್ತು EDGE ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.

ರಿಂಗ್ ಟೋನ್ ನ ವಿಷಯಕ್ಕೆ ಬಂದಾಗ ಮೊಟೊರೊಲಾ ಆಟ್ರಿಕ್ಸ್ 2 MP3 ಮತ್ತು WAV ರಿಂಗ್ ಟೋನ್, ಸ್ಯಾಮ್ ಸಂಗ್ ಟ್ರಾನ್ಸ್ ಫಿಕ್ಸ್ 72 ಪೊಲಿ ಫೋನಿಕ್ ಮತ್ತು MP3 ರಿಂಗ್ ಟೋನ್ ಅನ್ನು ಬಳಸಿಕೊಳ್ಳುತ್ತದೆ.

ಅದಲ್ಲದೆ ಈ ಎರಡು ಫೋನ್ ಗಳಲ್ಲಿ ಕಂಡುಬರುವ ಸಾಮರಸ್ಯಗುಣವೆಂದರೆ ಡಿಜಿಟಲ್ ಝೂಮ್ ಅಟೋ ಫೋಕಸ್ ತಂತ್ರಜ್ಞಾನವನ್ನು ಹೊಂದಿದೆ. ಎರಡರಲ್ಲೂ ಬ್ಲೂಟೂಥ್ ಸಂಪರ್ಕದ ಸೌಲಭ್ಯವಿದೆ. ಎರಡರಲ್ಲೂ ಬಳಕೆದಾರರು ಅತ್ಯುತ್ತಮವಾದ ಗೇಮಿಂಗ್ ಅನುಭವವನ್ನು ಪಡೆಯಬಹುದಾಗಿದೆ.

ಈ ಸ್ಮಾರ್ಟ್ ಫೋನ್ ಗಳಲ್ಲಿ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿವೆ. ಅಷ್ಟೆ ಅಲ್ಲಾ ಬ್ಯಾಟರಿಯ್ಲೂ ಸಹ ಸಾಮರಸ್ಯವಿರುವ ಈ ಮೊಬೈಲ್ ಗಳಲ್ಲಿ ಲೀಥಿಯಂ ಐಯಾನ್ ಬ್ಯಾಟರಿಯನ್ನು ಬಳಸಿವೆ.

ಈ ಸ್ಮಾರ್ಟ್ ಫೋನ್ ಗಳಲ್ಲಿ ಮೊಟೊರೊಲಾ ಆಟ್ರಿಕ್ಸ್ 2 ಬೆಲೆ ರು.30, 000 ಎಂದು ನಿಗದಿಪಡಿಸಲಾಗಿದ್ದು ಸ್ಯಾಮ್ ಸಂಗ್ ಟ್ರಾನ್ಸ್ ಫಿಕ್ಸ್ ಬೆಲೆಯನ್ನು ಕಂಪನಿ ಇನ್ನೂ ಪ್ರಕಟಿಸಲಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot