ಸೋನಿ ತೆಕ್ಕೆಯಲ್ಲಿ ಸೋನಿ ಎರಿಕ್ಸನ್ !

Posted By: Staff

ಸೋನಿ ತೆಕ್ಕೆಯಲ್ಲಿ ಸೋನಿ ಎರಿಕ್ಸನ್ !
ಸೋನಿ ಎರಿಕ್ಸನ್ ಜಾಗದಲ್ಲಿ ಇನ್ನು ಮುಂದೆ ಬರಿ ಸೋನಿಯಷ್ಟೆ ಕಾಣಿಸಲಿದೆ ! ಹೌದು ಮಾರುಕಟ್ಟೆಯಲ್ಲಿ ಈಗಾಲೆ ಕಿಂಗ್ ನಂತಿರುವ ಸೋನಿ ಸೋನಿ ಎರಿಕ್ಸನ್ ಕಂಪನಿಯನ್ನು ಸಂಪೂರ್ಣವಾಗಿ1.45 ಬಿಲಿಯನ್ ಡಾಲರ್ ಅನ್ನು ಕೊಟ್ಟು ತನ್ನ ಅಧೀನಕ್ಕೆ ತೆಗೆದುಕೊಂಡಿದೆ.

ಹತ್ತು ವರ್ಷಗಳಿಂದ ಸೋನಿ ಎರಿಕ್ಸನ್ ಕಾಂಟ್ರಾಕ್ಟ್ ನಲ್ಲಿದ್ದು ಆ ಕಾಂಟ್ರಾಕ್ಟ್ ಮುಗಿಯಲು ಇನ್ನು ಸ್ವಲ್ಪ ಕಾಲವಷ್ಟೆ ಬಾಕಿ ಇದೆ.

ಆದರೆ ಈಗ ಸೋನಿಗೆ ಎರಿಕ್ಸನ್ ನ ಅರ್ಧದಷ್ಟು ಸ್ಟಾಕ್ ಮಾತ್ರ ಸಿಗುತ್ತಿದ್ದರೂ ಸಹ ಈ ಡೀಲ್ ನಿಂದಾಗಿ ಸೋನಿ ಮಾರುಕಟ್ಟೆಯಲ್ಲಿ ತನ್ನ ಸ್ವಾಧೀನವನ್ನು ಮತ್ತಷ್ಟು ಹೆಚ್ಚಸಲು ಅನುಕೂಲಕರವಾಗಿದೆ.

ಸೋನಿ ಕಳೆದ ವರ್ಷವೆ ಮೊಬೈಲ್ ಕ್ಷೇತ್ರದಲ್ಲಿ ಒಳ್ಳೆಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಕಷ್ಟು ಹಣವನ್ನು ವ್ಯಯಸಿದೆ.

ಕಂಪನಿಯು ತನ್ನ ಮಾರುಕಟ್ಟೆಯ ಕುಸಿತದಿಂದ ತೀವ್ರವಾದ ಹೊಡೆತಕ್ಕೆ ಒಳಗಾದ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಮಾಡಿದ ಸ್ಮಾರ್ಟ್ ಫೋನ್ ನಿಂದಾಗಿ ಅದು ಮಾರುಕಟ್ಟೆಯಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆಯನ್ನು ಕಂಡಿತು.

ಈಗ ಸೋನಿ ಕೂಡ ಸ್ಮಾರ್ಟ್ ಫೋನ್ ಅನ್ನು ತರಲು ಬಯಸಿದ್ದು ಅದರ ಮುಖಾಂತರ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲಿದೆ.

ಅದಕ್ಕಾಗಿ ಸೋನಿ ಅನೇಕ ಯೋಜನೆಗಳನ್ನು ಹೊಂದಿದ್ದು ಹೊಸ ಸ್ಮಾರ್ಟ್ ಫೋನ್ ಗಳಲ್ಲಿ ಗೇಮಿಂಗ್ ಜೊತೆ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ ಗಳನ್ನು ನೀಡ ಬೇಕೆಂದಿದೆ.

ಸೋನಿಯಿಂದ ತಯಾರಿಸಲ್ಪಡುವ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಹೊಸ ಗಾಳಿಯನ್ನು ಎಷ್ಟರಮಟ್ಟಿಗೆ ಬೀಸಲಿದೆ ಎಂದು ಕಾದು ನೋಡ ಬೇಕಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot