ಸ್ಲೈಡ್ ಮಾಡಿದರೆ ಸಾಕು ಸಖತ್ ಅಚ್ಚರಿ ಕಾಣುತ್ತೆ

By Super
|
ಸ್ಲೈಡ್ ಮಾಡಿದರೆ ಸಾಕು ಸಖತ್ ಅಚ್ಚರಿ ಕಾಣುತ್ತೆ
ನೀವು ಮೊಬೈಲ್ ನಿಂದ ಅತ್ಯುತ್ತಮ ಅನುಭವ ಬಯಸುವುದಾದರೆ ಆಲ್ಕಾಟೆಲ್ ಸ್ಪಾರ್ಕ್ ಅಥವಾ ಆಲ್ಕಾಟೆಲ್ OT-606A ಉತ್ತಮ ಆಯ್ಕೆ. ಎರಡೆರಡು ಕೀಪ್ಯಾಡ್ ಹೊಂದಿರುವ ಈ ಮೊಬೈಲನ್ನು ನಿಮ್ಮ ಇಚ್ಛೆಗೆ ತಕ್ಕಂತೆ ಬಳಸಬಹುದು.

ಈ ಆಲ್ಕಾಟೆಲ್ OT-606A ನಲ್ಲಿ ಸರಳ ಸುಲಭವಾಗಿ ಉಪಯೋಗಿಸಬಹುದಾದ ಕೀಪ್ಯಾಡ್ ಒಂದಿದ್ದು, ಅದರೊಟ್ಟಿಗೆ ಇನ್ನೊಂದು ಅಚ್ಚರಿ ಮೂಡಿಸುವ ಕೀಪ್ಯಾಡ್ ಕೂಡ ಇರುತ್ತದೆ. ಈ ಕೀಪ್ಯಾಡ್ ಅನ್ನು ಸುಮ್ಮನೆ ಸ್ಲೈಡ್ ಮಾಡಿದರೆ ಸಾಕು ಅತ್ಯಾಧುನಿಕ ಕ್ವೆರ್ಟಿ ಕೀ ಪ್ಯಾಡ್ ನಿಮಗೆಂದೇ ಲಭ್ಯವಿರುತ್ತದೆ.

ಆಸಿಡ್ ಗ್ರೀನ್ ಮತ್ತು ಪಿಂಕ್ ನ ಅಪರೂಪದ ಬಣ್ಣ, ಅಪ್ಪಟ ಕಪ್ಪು ಮತ್ತು ಸಿಲ್ವರ್ ಗಳ ಆಕರ್ಷಕ ಬಣ್ಣಗಳಲ್ಲಿ ಮೊಬೈಲ್ ಲಭ್ಯವಿದೆ.

ಆಲ್ಕಾಟೆಲ್ OT-606A ವಿಶೇಷತೆ:
* 2.20 ಇಂಚಿನ ಡಿಸ್ಪ್ಲೇ, 320 x 240 ಪಿಕ್ಸಲ್ ರೆಸೊಲ್ಯೂಷನ್
* VGA ಕ್ಯಾಮೆರಾ
* ಆಂತರಿಕ ಮೆಮೊರಿ ಸಾಮರ್ಥ್ಯ4 ಎಂಬಿ
* ಮೆಮೊರಿ ವಿಸ್ತರಣೆಗೆಂದು 8 ಜಿಬಿ ಸಾಮರ್ಥ್ಯ
* ಬ್ಲೂಟೂಥ್, ಮೈಕ್ರೊ USB

ಲೀಥಿಯಂ 670 mAh ಬ್ಯಾಟರಿ ಹೊಂದಿರುವ ಈ ಮೊಬೈಲ್ 11.2 ಗಂಟೆ ಟಾಕ್ ಟೈಂ 530 ಗಂಟೆ ಸ್ಟಾಂಡ್ ಬೈ ಟೈಂ ನೀಡುತ್ತದೆ. ಸಂಗೀತಕ್ಕೆಂದು 20 ಗಂಟೆ ಬ್ಯಾಕ್ ಅಪ್ ಕೂಡ ನೀಡುತ್ತದೆ. ಆಲ್ಕಾಟೆಲ್ OT-606A ಮೊಬೈಲ್ ಬೆಲೆ ಭಾರತದಲ್ಲಿ ಕೇವಲ 4,000 ರು ಎನ್ನಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X