ಟಚ್ ಮಾಡಲು ರೆಡಿ ಟ್ವಿಸ್ಟ್ ಅಂಡ್ ಟರ್ನ್ ಮೊಬೈಲ್

Posted By: Staff

ಟಚ್ ಮಾಡಲು ರೆಡಿ ಟ್ವಿಸ್ಟ್ ಅಂಡ್ ಟರ್ನ್ ಮೊಬೈಲ್
ಈಗ ಡ್ಯೂಯಲ್ ಸಿಮ್ ಮೊಬೈಲ್ ಬಯಸುವವರೇ ಹೆಚ್ಚು. ಆದ್ದರಿಂದ ಡ್ಯೂಯಲ್ ಸಿಮ್ ಮೊಬೈಲ್ ಗಳ ತಯಾರಿಕೆಯೂ ಹೆಚ್ಚಾಗಿದೆ. ಡ್ಯೂಯಲ್ ಸಿಮ್ ಜೊಗೆ ಒಳ್ಳೆಯ ವಿನ್ಯಾಸದ ಮೊಬೈಲ್ ಬಯಸುವವರಿಗೆಂದೇ ಮೈಕ್ರೊ ಮ್ಯಾಕ್ಸ್ ಕಂಪನಿ ನೂತನ ಮೊಬೈಲ್ ಹೊರತಂದಿದೆ.

ಯುವ ಪೀಳಿಗೆಯನ್ನು ಉದ್ದೇಶದಲ್ಲಿಟ್ಟುಕೊಂಡು ಹೊರತಂದಿರುವ ಮೈಕ್ರೊಮ್ಯಾಕ್ಸ್ X395 ಮೊಬೈಲ್ ಕೆಂಪು, ಹಳದಿ, ಕಪ್ಪು ಈ ಮೂರು ಬಣ್ಣಗಳ ಬ್ಯಾಕ್ ಪ್ಯಾನೆಲ್ ನಲ್ಲಿ ಲಭ್ಯವಿದೆ.

ಮೈಕ್ರೊ ಮ್ಯಾಕ್ಸ್ X395 ನಲ್ಲಿನ ಆಯ್ಕೆ:
* ಡ್ಯೂಯಲ್ ಸಿಮ್
* 73.2 ಗ್ರಾಂ ತೂಕ, 115x52x11.4ಎಂಎಂ ಡೈಮೆಂಶನ್
* 6.1-cm QVGA ಡಿಸ್ಪ್ಲೇ ಸ್ಕ್ರೀನ್
* 1.3 ಮೆಗಾ ಪಿಕ್ಸಲ್ ಕ್ಯಾಮೆರಾ, ಡಿಜಿಟಲ್ ಝೂಮ್
* GSM 900/1800/1900 ಮೆಗಾ ಹಟ್ಸ್ ಫ್ರಿಕ್ವೆನ್ಸಿ
* ಬ್ಲೂಟೂಥ್ ಮತ್ತು ಜಾವಾ
* ಮಲ್ಟಿ ಫಾರ್ಮೆಟ್ ಮ್ಯುಸಿಕ್ ಪ್ಲೇಯರ್, ಎಫ್ ಎಂ
* H.263 MP3 player
* ಒಪೆರಾ ಮಿನಿ ಬ್ರೌಸರ್
* 8ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್

ಅಷ್ಟೇ ಅಲ್ಲ, ಇದರಲ್ಲಿ ನಿಮಗೆ ತುಂಬಾ ಆಶ್ಚರ್ಯ ತರುವ ಇನ್ನೊಂದು ಆಯ್ಕೆ ಇದೆ. ಡ್ಯೂಯಲ್ ಸಿಮ್ ಮೊಬೈಲ್ ಆದ್ದರಿಂದ ಸಿಮ್ ಸುಲಭ ಬಳಕೆಗೆ 3-way ಆಕ್ಸಿಸ್ ಮೋಶನ್ ಸೆನ್ಸಾರ್ ನೀಡಲಾಗಿದೆ. ಇದರಿಂದ ಟ್ವಿಸ್ಟ್ ಮತ್ತು ಶೇಕ್ ಮಾಡಿದರೆ ಸಾಕು ತನ್ನಿಂತಾನೆ ತಕ್ಷಣವೇ ಕೆಲಸ ನಿರ್ವಹಿಸುತ್ತದೆ.

ಹೆಚ್ಚು ಬಾಳಿಕೆ ಬರುವ ಲಿಯಾನ್ 800mAh ಬ್ಯಾಟರಿ 6 ದಿನದ ಸ್ಟಾಂಡ್ ಬೈ ಟೈಂ ಮತ್ತು 3 ಗಂಟೆ ಟಾಕ್ ಟೈಂ ನೀಡುತ್ತದೆ. ಇಷ್ಟು ನೂತನ ಆಯ್ಕೆ ಹೊಂದಿರುವ ಈ ಮೊಬೈಲ್ ಬೆಲೆ ಕೇವಲ 2,500 ರಿಂದ 3,000ರು ಇರಬಹುದೆಂದು ಅಂದಾಜಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot