ಮೊಟೊರೊಲಾ ಡ್ರಾಯ್ಡ್ 4 ಬರಲಿದೆಯೆ?

By Super
|
ಮೊಟೊರೊಲಾ ಡ್ರಾಯ್ಡ್ 4 ಬರಲಿದೆಯೆ?
ಹೊಸ ತಂತ್ರಜ್ಞಾನಗಳನ್ನು ಬಳಸಿ ದಿನಕ್ಕೊಂದಂತೆ ಹೊಸ ಮೊಬೈಲ್ ಗಳು ಮಾರುಕಟ್ಟೆಗೆ ಪರಿಚಯಗೊಳ್ಳುತ್ತವೆ. ಮೊಬೈಲ್ ಹೆಸರಾಂತ ಕಂಪನಿಗಳಲ್ಲಿ ಒಂದಾಗಿರುವ ಮೊಟೊರೊಲಾ ಡ್ರಾಯ್ಡ್ ನ ಸರಣಿ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುವುದರ ಮುಖಾಂತರ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಉಂಟು ಮಾಡುತ್ತಿದೆ.

ನೋಡಲು ತುಂಬಾನೆ ಸ್ಟೈಲಿಷ್ ಆಗಿರುವ ಡ್ರಾಯ್ಡ್ 3 ಫೋನ್ ನಲ್ಲಿ 4G ವೆರಿಜೋನ್ LTE ಸಂಪರ್ಕದ ಕೊರತೆ ಇದೆ. ಇದನ್ನು ಮುಂಬರುವ ಡ್ರಾಯ್ಡ್ 4 ರಲ್ಲಿ ಪೂರೈಸಬಹುದೇನೊ ಆದರೆ ಈ ಡ್ರಾಯ್ಡ್ 4 ಬರಲಿರುವ ಬಗ್ಗೆ ಮೊಟೊರೊಲಾ ಅಧಿಕೃತವಾಗಿ ಏನೂ ಹೇಳಲಿಲ್ಲ.

ಈಗಾಗಲೆ ಇದರ ಪಿಕ್ಚರ್ ವೆಬ್ ಸೈಟ್ ಗಳಲ್ಲಿ ಲೀಕ್ ಆಗಿದ್ದು ಜನರು ಇದರತ್ತ ಪ್ರತಿಕ್ರಿಯೆ ನೀಡಲಾರಂಭಿಸಿದ್ದಾರೆ.ಇದು ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಗೆ ಆಂಡ್ರಾಯ್ಡ್ ಬಳಸಲಿದೆ ಎಂಬ ರೂಮರ್ ಕೇಳಿಬರುತ್ತಿದೆ. ಡ್ರಾಯ್ಡ್ 4 ನೋಡಲು ಡ್ರಾಯ್ಡ್ 3 ಕ್ಕಿಂತ ಸಪೂರವಾಗಿದೆ.

ಇದು ಹಗುರವಾಗಿದ್ದು ಇದರ ಬ್ಯಾಟರಿಯನ್ನು ಬಿಚ್ಚಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಲಾಂಗ್ ಓವರ್ ಡ್ಯು 4G ಸಂಪರ್ಕವನ್ನು ಹೊರೆತುಪಡಿಸಿ ಅನೇಕ ಧನಾತ್ಮಕ ವಿಷಯಗಳೂ ಇವೆ ಇದರಲ್ಲಿ.

ಇದರಲ್ಲಿ 2 ಕ್ಯಾಮೆರಾ, ವೀಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯವಿದೆ. ಇದರಲ್ಲಿರುವ ರೇರ್ ಫೇಸಿಂಗ್ 8 ಮೆಗಾ ಪಿಕ್ಸಲ್ ಕ್ಯಾಮೆರಾದಿಂದ 1080p ವೀಡಿಯೊ ಮಾಡುವ ಸಾಮರ್ಥ್ಯ ಹೊಂದಿದೆ.

ಇದು 4 ಇಂಚು ಡಿಸ್ ಪ್ಲೇನಲ್ಲಿ ನೋಡಲು ಸುಂದರವಾಗಿದ್ದರೂ ಐಸ್ ಕ್ರೀಮ್ ಸ್ಯಾಂಡ ವಿಚ್ ಆಪರೇಟಿಂಗ್ ಸಿಸ್ಟಮ್ ನಷ್ಟು ಪರಿಣಾಮಕಾರಿಯಲ್ಲ ಎಂಬ ರೂಮರ್ ಸಹ ಕೇಳಿ ಬರುತ್ತಿದೆ. ಒಮ್ಮೆ ಈ ಮೊಬೈಲ್ ಬಿಡುಗಡೆಯಗುವ ಇದರ ಲೋಪದೋಷಗಳನ್ನು ಸರಿಪಡಿಸಲಾಗುವುದು ಎಂದು ಸಹ ಹೇಳಲಾಗಿದೆ.

ಈ ಮೊಬೈಲ್ ನಲ್ಲಿ ವೆಬ್ ಟಾಪ್ ಲಕ್ಷಣಗಳಿದ್ದರೆ ಲಾಪ್ ಡಕ್ 500 ಮತ್ತು 100ಗೆ ಪ್ರತಿಸ್ಪರ್ಧೆ ಒಡ್ಡಲಿದೆ. ಡ್ರಾಯ್ಡ್ ರೇಜರ್ ನಲ್ಲ ಬಳಸಿದಂತಹ ಡ್ಯುಯೆಲ್ ಕೋರ್ ನ 1.2 GHz OMAP4430 ಪ್ರೊಸೆಸರ್ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಇದು ಬಿಡುಗಡಯಾದರೆ ಮೊಟೊರೊಲಾ ಡ್ರಾಯ್ಡ್ 4 QWERTY 4G ಸ್ಮಾರ್ಟ್ ಫೋನ್ ಗಳಲ್ಲಿ ಅತ್ಯುತ್ತಮವಾದದು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X