ಪಾರ್ಶ್ ಆಗಿರುವ ಈ ಮೊಬೈಲ್ ಯಾವುದು?

By Super
|
ಪಾರ್ಶ್ ಆಗಿರುವ ಈ ಮೊಬೈಲ್ ಯಾವುದು?
ಬ್ಲಾಕ್ ಬೆರಿ ಪಾರ್ಶ್ P9981 ಎಂಬ ಸ್ಮಾರ್ಟ್ ಫೋನನ್ನು ವಿನ್ಯಾಸಗೊಳಿಸುವ ಮೂಲಕ RIM ಇನ್ನೊಂದು ಮುನ್ನಡೆ ಸಾಧಿಸಲು ಹೊರಟಿದೆ.

ಪಾರ್ಶ್ ಕಾರ್ ವಿನ್ಯಾಸ ಹೊಂದಿರುವ ಈ ಮೊಬೈಲ್ ಮಾರುಕಟ್ಟೆಯಲ್ಲಿ ಸಖತ್ ಮಾರಾಟವಾಗುವ ನಿರೀಕ್ಷೆಯಿದೆ. OS 7.0 ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಮೊಬೈಲ್ 1.2 GHz Qualcomm MSM8655 ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ಇನ್ನೂ ಏನೇನು ವಿಶೇಷತೆಯಿದೆ ಎಂದು ಇಲ್ಲಿ ತಿಳಿಯೋಣ.

ಬ್ಲಾಕ್ ಬೆರಿ ಪಾರ್ಶ್ P9981 ವಿಶೇಷತೆ:
* 155 ಗ್ರಾಂ ತೂಕ
* 115 x 67 x 11.3 ಎಂಎಂ ಅಳತೆ
* 2.8 ಇಂಚಿನ ಸ್ಕ್ರೀನ್ ಡಿಸ್ಪ್ಲೇ, 640 x 480 ಪಿಕ್ಸಲ್ ರೆಸೊಲ್ಯೂಷನ್
* TFT ಟಚ್ ಸ್ಕ್ರೀನ್
* ಕ್ವೆರ್ಟಿ ಕೀಬೋರ್ಡ್
* ಅಕ್ಸೆಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್
* 3.5 ಎಂಎಂ ಆಡಿಯೋ ಜ್ಯಾಕ್
* 768MB RAM, 8 ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ
* ಮೈಕ್ರೊ SD ಕಾರ್ಡ್ ನೊಂದಿಗೆ 32 ಜಿಬಿವರೆಗೂ ಮೆಮೊರಿ ವಿಸ್ತರಣೆ
* ಬ್ಲೂಟೂಥ್, USB, 802.11 b/ g/ n ವೈ-ಫೈ ಸಂಪರ್ಕ
* GPRS, EDGE ಮತ್ತು HTML, A-GPS ತಂತ್ರಜ್ಞಾನ
* 720 p ವಿಡಿಯೋ ರೆಕಾರ್ಡಿಂಗ್
* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 x 1944 ಪಿಕ್ಸಲ್ ರೆಸೊಲ್ಯೂಷನ್

ಕ್ಯಾಮೆರಾದೊಂದಿಗೆ ಆಟೊ ಫೋಕಸ್ ತಂತ್ರಜ್ಞಾನ, LED ಫ್ಲಾಶ್, ಜಿಯೋ ಟ್ಯಾಗಿಂಗ್, ಫೇಸ್ ಡಿಟೆಕ್ಷನ್, ಇಮೇಜ್ ಸ್ಟೆಬಿಲೈಸೇಶನ್ ಕೂಡ ಲಭ್ಯವಿದೆ.

1000 mAh ಲೀಥಿಯಂ ಐಯಾನ್ ಬ್ಯಾಟರಿಯ ಪಾರ್ಶ್ ಮೊಬೈಲ್ 5 ಗಂಟೆ 30 ನಿಮಿಷ ಟಾಕ್ ಟೈಂ ಮತ್ತು 348 ಗಂಟೆ ಸ್ಟಾಂಡ್ ಬೈ ಟೈಂ ನೀಡುತ್ತದೆ. ಆದರೆ ಈ ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ. ಕೈಗೆಟುಕುವ ದರದಲ್ಲಿ ಇದು ದೊರೆಯುವ ನಿರೀಕ್ಷೆಯಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X