ರೇಸ್ ನಲ್ಲಿರುವ ಎಚ್ ಟಿ ಸಿ ಮತ್ತು ಸೋನಿ

Posted By: Staff

ರೇಸ್ ನಲ್ಲಿರುವ ಎಚ್ ಟಿ ಸಿ ಮತ್ತು ಸೋನಿ
ಮೊಬೈಲ್ ಸ್ಮಾರ್ಟ್ ಫೋನ್ ಗಳ ರೇಸ್ ನಲ್ಲಿ ಎಚ್ ಟಿ ಸಿ ಮತ್ತು ಸೋನಿ ಮೊಬೈಲ್ ಗಳು ಸೇರಿ ಸ್ಪರ್ಧೆಯು ಬಲವಾಗಿವೆ. ಎಚ್ ಟಿ ಸಿ ಕಂಪನಿಯ ಎಚ್ ಟಿ ಸಿ ಟ್ರೋಫಿ ಹಾಗೂ ಸೋನಿ ಎರಿಕ್ಸನ್ ಎಕ್ಸ್ ಪಿರಿಯಾ ಎರಡು ಮೊಬೈಲ್ ಗಳು ತಾ ಮುಂದು ಎಂಬಂತೆ ಈ ರೇಸ್ ನಲ್ಲಿ ಓಡುತ್ತಿದೆ.

ಸೋನಿ ಎರಿಕ್ಸನ್ ಎಕ್ಸ್ ಪಿರಿಯಾ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರಟಿಂಗ್ ಸಿಸ್ಟಮ್ ಹಾಗೂ ಎಚ್ ಟಿ ಸಿ ಟ್ರೋಫಿ ವಿಂಡೋಸ್ ಫೋನ್ 7 ಆಪರಟಿಂಗ್ ಸಿಸ್ಟಮ್ ಹೊಂದಿದೆ.

ಎಕ್ಸ್ ಪಿರಿಯಾ 4 ಇಂಚಿನ LCD ಡಿಸ್ ಪ್ಲೇ ಜೊತೆ 480 x 854 ಪಿಕ್ಸಲ್ ನ ರೆಸ್ಯೂಲೇಶನ್ ಹೊಂದಿದ್ದರೆ, ಎಚ್ ಟಿ ಸಿ ಟ್ರೋಫಿ 3.8 ಡಿಸ್ ಪ್ಲೇಯೊಂದಿಗೆ 480 x 800 ಪಿಕ್ಸಲ್ ರೆಸ್ಯೂಲೇಶನ್ ಹೊಂದಿದೆ.

ಆದರೆ ಈ ಎರಡೂ ಮೊಬೈಲ್ ಗಳು ಕ್ಯಾಮೆರಾ ಸಾಮರ್ಥ್ಯ 5 ಮೆಗಾ ಪಿಕ್ಸಲ್ ಹೊಂದಿದೆ. ಇದ್ನು ಬಳಸಿ 720p ಹೈ ಡೆಫಿನಿಶನ್ ನ ವೀಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದೆ.

ಸೋನಿ ಎಕ್ಸ್ ಪಿರಿಯಾದಲ್ಲಿ 1GHz ನ ಕ್ವಾಲ್ ಕಮ್ MSM825 ಪ್ರೊಸೆಸರ್ ಮತ್ತು ಎಚ್ ಟಿ ಸಿ ಟ್ರೋಫಿ ಯಲ್ಲಿ 1GHz ನ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ ಪ್ರೊಸೆಸರ್ ಅನ್ನು ಬಳಸಲಾಗಿದೆ. ಅಲ್ಲದೆ RAM ಸಾಮರ್ಥ್ಯದಲ್ಲಿ ಸೋನಿ ಎಕ್ಸ್ ಪಿರಿಯಾ 512 MB ಮತ್ತು ಎಚ್ ಟಿ ಸಿ ಟ್ರೋಫಿ 576 MBಯನ್ನು ಹೊಂದಿದೆ.

ಮೆಮೊರಿ ಸ್ಟೋರೇಜ್ ವಿಷಯಕ್ಕೆ ಬಂದಾಗ ಎಚ್ ಟಿ ಸಿ ಟ್ರೋಫಿ 16 GB ಮತ್ತು ಎಕ್ಸ್ ಪಿರಿಯಾ 8 GBರಷ್ಟು ಸಾಮರ್ಥ್ಯವನ್ನು ಹೊಂದಿದೆ.
ಈ ಎರೆಡೂ ಮೊಬೈಲ್ ಗಳು 3G ತಂತ್ರಜ್ಞಾನವನ್ನು ಬಳಸಿದ್ದು ವೈಫೈ ಸಂಪರ್ಕದ ಸೌಲಭ್ಯವನ್ನು ಹೊಂದಿದೆ.

ಆದರೆ ಇವುಗಳಲ್ಲಿ ಎಕ್ಸ್ ಪಿರಿಯಾದಲ್ಲಿ 1500 mAh ಲೀಥಿಯಂ ಬ್ಯಾಟರಿ , ಎಚ್ ಟಿ ಸಿ ಟ್ರೋಫಿ 1300 mAHಯ ಬ್ಯಾಟರಿ ಬಳಸಲಾಗಿದೆ.

ಈ ಮೊಬೈಲ್ ಗಳಲ್ಲಿ 175 ಗ್ರಾಂ ತೂಕದ ಎಕ್ಸ್ ಪಿರಿಯಾ ರು 26,000ಕ್ಎ ಹಾಗೂ 140 ತೂಕದ ಎಚ್ ಟಿ ಸಿ ಟ್ರೋಫಿ ಬೆಲೆ ಕೂಡ ಸರಿ ಸುಮಾರು ಇದೆ ಬೆಲೆಯಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot