Subscribe to Gizbot

ಶಾಕ್ ನೀಡುತ್ತೆ ಮೊಟೊರೊಲಾ ಎಲೆಕ್ಟ್ರಿಫೈ ಮೊಬೈಲ್

Posted By: Super
ಶಾಕ್ ನೀಡುತ್ತೆ ಮೊಟೊರೊಲಾ ಎಲೆಕ್ಟ್ರಿಫೈ ಮೊಬೈಲ್
ಮೊಬೈಲ್ ತಯಾರಿಕೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಮೊಟೊರೊಲಾ ಕಂಪನಿ ನೂತನ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಿದೆ. ಮೊಟೊರೊಲಾ ಎಲೆಕ್ಟ್ರಿಫೈ ಎಂಬ ಈ ಫೋನ್ ಭಾರಿ ಮಾರಾಟವಾಗುವ ನಿರೀಕ್ಷೆಯಿದೆ.

ಗೂಗಲ್ ಆಂಡ್ರಾಯ್ಡ್ 2.3.4 ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಹ್ಯಾಂಡ್ ಸೆಟ್ ಅತ್ಯುನ್ನತ 1000 MHz NVIDIA Tegra 2 250 AP20H ಪ್ರೊಸೆಸರ್ ಹೊಂದಿದೆ.

ಮೊಟೊರೊಲಾ ಎಲೆಕ್ಟ್ರಿಫೈ ವಿಶೇಷತೆ:
* 6.9 x 126.9 x 12.2 ಎಂಎಂ ಸುತ್ತಳತೆ
* 158 ಗ್ರಾಂ ತೂಕ
* 4.3 ಇಂಚಿನ ಡಿಸ್ಪ್ಲೇ, 540 x 960 ಪಿಕ್ಸಲ್ ರೆಸೊಲ್ಯೂಷನ್
* 720p ಹೈ ಡೆಫನಿಷನ್ ವಿಡಿಯೋ ರೆಕಾರ್ಡಿಂಗ್
* 8 ಮೆಗಾ ಪಿಕ್ಸಲ್ ಕ್ಯಾಮೆರಾ, 3264 x 2448 ಪಿಕ್ಸಲ್ ರೆಸೊಲ್ಯೂಷನ್
* 1 ಜಿಬಿ RAM
* 3.5 ಎಂಎಂ ಆಡಿಯೋ ಜ್ಯಾಕ್
* ಮಲ್ಟಿ ಟಚ್ ಸ್ಕ್ರೀನ್ ತಂತ್ರಜ್ಞಾನ
* ಬ್ಲೂಟೂಥ್, 802.11 b/ g/n ವೈ-ಫೈ, USB
* ಮೆಮೊರಿ ವಿಸ್ತರಣೆಗೆ 32ಜಿಬಿವರೆಗೂ ಮೈಕ್ರೊ SD ಕಾರ್ಡ್
* 0.3 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ
* ಡ್ಯೂಯಲ್ LED ತಂತ್ರಜ್ಞಾನ

RDS ತಂತ್ರಜ್ಞಾನ ಬೆಂಬಲಿತ ಎಫ್ ಎಂ ಕೂಡ ಈ ಮೊಬೈಲಲ್ಲಿದೆ. 1700 mAh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಎಲೆಕ್ಟ್ರಿಫೈ ಮೊಬೈಲ್ ಒಳ್ಳೆಯ ಟಾಕ್ ಟೈಂ ಮತ್ತು ಸ್ಟಾಂಡ್ ಬೈ ಟೈಂ ನೀಡಲಿದೆ.

ಆದರೆ ಕಂಪನಿ ಈ ಮೊಟೊರೊಲಾ ಎಲೆಕ್ಟ್ರಿಫೈ ಮೊಬೈಲ್ ಬೆಲೆಯನ್ನು ಇನ್ನೂ ಘೋಷಿಸಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot