Subscribe to Gizbot

ಹೆಸರಿನಲ್ಲಿರುವ ಸಾಮರಸ್ಯ ಗುಣದಲ್ಲಿ ಕಾಣೆ

Posted By: Staff

ಹೆಸರಿನಲ್ಲಿರುವ ಸಾಮರಸ್ಯ ಗುಣದಲ್ಲಿ ಕಾಣೆ
ಮೊಟೊರೊಲಾ ರೇಝರ್ ಅಥವಾ ಡ್ರಾಯ್ಡ್ ರೇಝರ್ ಹೆಸರಿನ ಹ್ಯಾಂಡ್ ಸೆಟ್ ಗಳು ಒಂದೇ ಕಂಪನಿಯಿಂದ ಬಂದಿದ್ದರೂ ತಮ್ಮದೇ ಆದ ಗುಣ ಲಕ್ಷಣದಿಂದ ಮತ್ತು ಬೆಲೆಯಲ್ಲಿ ಒಂದಕ್ಕೊಂದು ಭಿನ್ನವಾಗಿದೆ.

ನಿಮಗೆ ನೆನಪಿರಬಹುದು ಹಿಂದಿನ ವರ್ಷ ಮೊಟೊರೊಲಾ ರೇಝರ್ ಹೆಸರಿನಿಂದ 10ಗ್ರಾಂ ತೂಕದ, 2.2 ಅಗಲದ ಸ್ಕ್ರೀನ್ ಜೊತೆನೊಂದಿಗೆ ಬಂದ ಸ್ಲಿಮ್ ಬ್ಯೂಟಿ ಮಾರುಕಟ್ಟೆಗೆ ಬಂದಿದೆ ತಡ ತನ್ನ ವೈಯಾರದಿಂದ ಗ್ರಾಹಕರನ್ನು ಸೆಳೆದಿತ್ತು.

ಅದರ ನಂತರ ಇತ್ತೀಚಿಕೆಗೆ ಬಂದ ಮೊಟೊರೊಲಾ ಡ್ರಾಯ್ಡ್ ರೇಝರ್ ಆ ರೇಜರ್ ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಈ ಮೊಬೈಲ್ ನೋಡಲು ಆಡಂಬರವಾಗಿದ್ದು, 4.3 ಇಂಚಿನ ಅಗಲದ ಸ್ಕ್ರೀನ್ , ಮಲ್ಟಿ ಟಚ್ ಸೌಲಭ್ಯ, ಗೊರಿಲ್ಲಾ ಗ್ಲಾಸ್ ಡಿಸ್ ಪ್ಲೇ ಹೊಂದಿದೆ.

ಹಿಂದಿನ ರೇಝರ್ ನಲ್ಲಿ ಸಾಮನ್ಯವಾದ ಫ್ಲಾಟ್ ಫಾಮ್ ಬಳಸಿ ತಯಾರಿಸಲಾಗಿತ್ತು, ಆದರೆ ಈ ಹೊಸ ಮೊಬೈಲ್ ನಲ್ಲಿ ಆಂಡ್ರಾಯ್ಡ್ ಸಿಸ್ಟಮ್ ಬಳಸಲಾಗಿದ್ದು ಅದರ ಜೊತೆ 1.2 GHz ನ ಡ್ಯುಯಲ್ ಕೋರ್ ಫ್ರೊಸೆಸರ್ ಹೊಂದಿದೆ.

ಕ್ಯಾಮೆರಾವನ್ನು ತೆಗೆದುಕೊಂಡರೆ ಹಿಂದಿನ ರೇಝರ್ ಮೊಬೈಲ್ 1.23 ಮೆಗಾ ಪಿಕ್ಸಲ್ ಹೊಂದಿದ್ದರೆ ಹೀಗಿನದು8 ಮೆಗಾ ಪಿಕ್ಸಲ್ ಕ್ಯಾಮೆರಾ ಜೊತೆ LED ಫ್ಲಾಷ್ ಮತ್ತು 2 ಮೆಗಾ ಪಿಕ್ಸಲ್ ನ ಸೆಂಕಡರಿ ಕ್ಯಾಮೆರಾ ಸೌಲಭ್ಯ ಹೊಂದಿದೆ.

ಹೀಗೆ ಗುಣದಲ್ಲಿ ಸಾಕಷ್ಟು ವ್ಯತ್ಯಾಸ ಇರುವ ಈ ಮೊಬೈಲ್ ಗಳು ಬೆಲೆಯಲ್ಲಿ ಸಹ ಸಾಕಷ್ಟು ವ್ಯತ್ಯಾಸ ಹೊಂದಿದ್ದು ಹಳೆಯ ರೇಝರ್ ರು. 7,500 ಹಾಗೂ ಹೊಸ ಮತ್ತಷ್ಟು ಹೊಸ ತಂತ್ರಜ್ಞಾನದಿಂದ ಬಂದಿರುವ ಮೊಟೊರೊಲಾ ಡ್ರಾಯ್ಡ್ ರೇಝರ್ ಸುಮಾರು ರು. 25,000-30,000 ಒಳಗೆ ದೊರೆಯುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot