ವಿವೋ V11 ಪ್ರೋ ಖರೀದಿಗೆ ಇಷ್ಟು ಕಾರಣ ಸಾಕಲ್ಲವೇ..! ಅಗ್ಗದ ಬೆಲೆಯಲ್ಲಿ ಫ್ಲಾಗ್‌ಶಿಪ್‌ ಫೀಚರ್ಸ್‌..!

|

ಮಧ್ಯಮ ಶ್ರೇಣಿ ಬೆಲೆಯಲ್ಲಿ ಅತ್ಯುತ್ತಮ ಫ್ಲಾಗ್‌ಶಿಪ್‌ ಫೀಚರ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಉತ್ಪಾದಕ ವಿವೋ ಭಾರತೀಯ ಮಾರುಕಟ್ಟೆಯಲ್ಲಿ ಪ್ರಭಲವಾಗಿ ಬೆಳೆಯುತ್ತಿದೆ. ಜಿಪ್ಪಿ ಕಾರ್ಯಕ್ಷಮತೆ ಹಾಗೂ ಸಾಟಿಯಿಲ್ಲದ ಕ್ಯಾಮೆರಾ ನಿರ್ವಹಣೆಯನ್ನು ಹೊಂದಿದ ಸ್ಮಾರ್ಟ್‌ಫೋನ್‌ಗಳು ಮಧ್ಯಮ ಶ್ರೇಣಿ ಬೆಲೆಯ ವರ್ಗದಲ್ಲಿ ಕಂಪನಿ ಪ್ರಾಬಲ್ಯ ಸಾಧಿಸಲು ನೆರವಾಗಿವೆ. ಹೌದು, ವಿವೋ ಇತ್ತೀಚೆಗಷ್ಟೇ ತನ್ನ ಪ್ರಾಬಲ್ಯವನ್ನು ಭಾರತೀಯ ಮಾರುಕಟ್ಟೆಯಲ್ಲಿ ಮುಂದುವರೆಸಲು ಮತ್ತೊಂದು ಸ್ಮಾರ್ಟ್‌ಫೋನ್‌ನ್ನು ಬಿಡುಗಡೆಗೊಳಿಸಿತ್ತು.

ವಿವೋ V11 ಪ್ರೋ ಖರೀದಿಗೆ ಇಷ್ಟು ಕಾರಣ ಸಾಕಲ್ಲವೇ..!

ಕೇವಲ ₹ 25990ಕ್ಕೆ ಭವಿಷ್ಯದ ಹಲವು ಫೀಚರ್‌ಗಳನ್ನು ಹೊಂದಿರುವ ವಿವೋ V11 ಪ್ರೋ ಸ್ಮಾರ್ಟ್‌ಫೋನ್‌ನ್ನು ಭಾರತೀಯ ಬಳಕೆದಾರರಿಗೆ ನೀಡಿತ್ತು. ಹಿಂದಿನ ವಿವೋ ಸ್ಮಾರ್ಟ್‌ಫೋನ್‌ಗಳಂತೆ V11 ಪ್ರೋ ಸ್ಮಾರ್ಟ್‌ಫೋನ್‌ ಉನ್ನತ ದರ್ಜೆಯ ಫೀಚರ್‌ಗಳನ್ನು ಹಾಗೂ ಕ್ರಾಂತಿಕಾರಿ ತಂತ್ರಜ್ಞಾನಗಳ ಮಿಶ್ರಣವಾಗಿದೆ. ಆದರೆ, ವಿವೋ V11 ಪ್ರೋನಲ್ಲಿ ಅತ್ಯಾಧುನಿಕ ಫೀಚರ್‌ಗಳನ್ನು ಅಗ್ಗದ ದರದಲ್ಲಿ ನೀಡುತ್ತಿದೆ. ಅದಕ್ಕಾಗಿಯೇ ನೀವು ಈ ಕೆಳಗಿನ 11 ಕಾರಣಗಳನ್ನು ತಿಳಿದುಕೊಂಡರೆ ಖಂಡಿತ ವಿವೋ V11 ಪ್ರೋ ಸ್ಮಾರ್ಟ್‌ಫೋನ್‌ನ್ನು ನಿಮ್ಮ ಕೈಗೆ ತೆಗೆದುಕೊಳ್ಳುತ್ತಿರಿ.

ವಿವೋ V11 ಪ್ರೋ ಸ್ಮಾರ್ಟ್‌ಫೋನ್‌ ಖರೀದಿಸಲು ನಿಮಗೆ ಕೆಳಗಿನ ಕಾರಣಗಳು ಸಾಕಲ್ಲವೇ..

ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ತಂತ್ರಜ್ಞಾನ

ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ತಂತ್ರಜ್ಞಾನ

ಉತ್ತಮ ಕಾರ್ಯನಿರ್ವಹಣೆಗಾಗಿ ಹೊಸ ಸ್ಮಾರ್ಟ್‌ಫೋನ್‌ನಲ್ಲಿ 4ನೇ ಜನರೇಷನ್‌ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್ನ್ನು ಅಳವಡಿಸಲಾಗಿದೆ. ಹೊಸ ಸೆನ್ಸಾರ್‌ ಅದರ ಹಿಂದಿನ ಆವೃತ್ತಿಗಿಂತ ಶೇ.50ರಷ್ಟು ಹೆಚ್ಚು ನಿಖರವಾಗಿ ಕಾರ್ಯನಿರ್ವಹಿಸುವಂತೆ ರೂಪಿಸಲಾಗಿದೆ. ನಾವು ಪರೀಕ್ಷಿಸಿದಾಗ ಹೊಸ ಬಯೋಮೆಟ್ರಿಕ್ ಸ್ಕ್ಯಾನರ್ ಸ್ಮಾರ್ಟ್‌ಫೋನ್‌ನ್ನು ಅನ್‌ಲಾಕ್‌ ಮಾಡಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಮತ್ತು ನಾವು ಪರೀಕ್ಷಿಸಿದ ಹಿಂದಿನ ವಿವೋ ಸ್ಮಾರ್ಟ್‌ಫೋನ್‌ಗಳ ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳಿಗಿಂತ ಹೆಚ್ಚು ನಿಖರವಾಗಿದೆ.

ಭವಿಷ್ಯದ ಬಯೋಮೆಟ್ರಿಕ್ ಸ್ಕ್ಯಾನರ್ ವಿವೋ V11 ಪ್ರೊ ಸ್ಮಾರ್ಟ್‌ಫೋನ್‌ನ್ನು ಉತ್ತಮಗೊಳಿಸಿದೆ. ಪ್ರತಿ ಸಲವು ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ನಿಂದ ವಿವೋ V11 ಪ್ರೊ ಸ್ಮಾರ್ಟ್‌ಫೋನ್‌ನ್ನು ಅನ್‌ಲಾಕ್‌ ಮಾಡಿದಾಗ ಈ ಸ್ಮಾರ್ಟ್‌ಫೋನ್‌ ಎಷ್ಟು ಮುಂದಿದೆ ಎಂಬುದು ನಿಮಗೆ ಅರಿವಾಗುತ್ತದೆ.

ಫಿಂಗರ್‌ಪ್ರಿಂಟ್‌ ಪ್ಯಾಡ್‌ ತೆಗೆದುಹಾಕಿ ವಿವೋ ಅದ್ಭುತ ವಿನ್ಯಾಸವನ್ನು ಸೃಷ್ಟಿಸಿ, ಭವಿಷ್ಯದ ಸ್ಮಾರ್ಟ್‌ಫೋನ್‌ ಎನ್ನುವ ಭಾವನೆಯನ್ನು ರೂಪಿಸುತ್ತದೆ. ವಿವೋ V11 ಪ್ರೋ ಸ್ಮಾರ್ಟ್‌ಫೋನ್‌ ಹೊಸ ತಂತ್ರಜ್ಞಾನದಿಂದ ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಹೊಂದಿದ ಅಗ್ಗದ ಸ್ಮಾರ್ಟ್‌ಫೋನ್‌ ಆಗಿಯೂ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿದೆ.

ಆಕರ್ಷಕ ವಿನ್ಯಾಸ ಮತ್ತು ಬಣ್ಣ

ಆಕರ್ಷಕ ವಿನ್ಯಾಸ ಮತ್ತು ಬಣ್ಣ

ಕಲಾತ್ಮಕವಾದ ಸುಂದರ ಸ್ಮಾರ್ಟ್‌ಫೋನ್‌ನ್ನು ಬಳಕೆದಾರನಿಗೆ ನೀಡಲು ವಿವೋ ಕಂಪನಿ ವಿವೋ V11 ಪ್ರೋ ಮೂಲಕ ಯಶಸ್ವಿಯಾಗಿದೆ. ಈ ಸ್ಮಾರ್ಟ್‌ಫೋನ್‌ 1.76 ಮಿಮೀ ದಪ್ಪವಿದ್ದು, ಹಿಂಬದಿ ಪ್ಯಾನೆಲ್‌ನಲ್ಲಿ ಅಳವಡಿಸಿರುವ 3D ಕವರ್ ಫ್ಯುಷನ್‌ ಬಣ್ಣವನ್ನು ತೋರಿಸುತ್ತದೆ. ಪ್ರದರ್ಶನದ ವಿನ್ಯಾಸ, ಗುಣಮಟ್ಟ ಮತ್ತು ಪ್ರಯತ್ನಗಳು ಈ ಸ್ಮಾರ್ಟ್‌ಫೋನ್‌ನ್ನು ಉತ್ತಮಗೊಳಿಸಿವೆ.

ವಿವೋ V1 ಪ್ರೋ ಎರಡು ಆಕರ್ಷಕ ಬಣ್ಣಗಳಲ್ಲಿ ದೊರೆಯುತ್ತಿದ್ದು, ಸ್ಟಾರ್ರಿ ನೈಟ್‌ ಮತ್ತು ಡ್ಯಾಜ್ಲಿಂಗ್‌ ಗೋಲ್ಡ್‌ ಬಣ್ಣದ ಆವೃತ್ತಿಗಳಲ್ಲಿ ಲಭ್ಯವಾಗುತ್ತಿದೆ. ಅತ್ಯಾಕರ್ಷಕ ವಿನ್ಯಾಸದ ಹೊರತಾಗಿ ಸ್ಮಾರ್ಟ್‌ಫೋನ್‌ ಆಕರ್ಷಕ ಬಣ್ಣಗಳಿಂದ ಇನ್ನು ಚೆಂದ ಕಾಣುತ್ತಿದೆ.

ಹ್ಯಾಲೋ ಫುಲ್‌ವೀವ್‌ ಡಿಸ್‌ಪ್ಲೇ

ಹ್ಯಾಲೋ ಫುಲ್‌ವೀವ್‌ ಡಿಸ್‌ಪ್ಲೇ

ವಿವೋ V1 ಪ್ರೋ 6.4 ಇಂಚಿನ FHD+ ಹ್ಯಾಲೋ ಫುಲ್‌ವೀವ್‌ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಸ್ಮಾರ್ಟ್‌ಫೋನ್‌ 1.76 ಮಿಮೀ ತೆಳುವಾಗಿರುವುದರಿಂದ ಅನುಕೂಲವಾಗಿದ್ದು, ಶೇ. 91.27ರಷ್ಟು ಸ್ಕ್ರೀನ್‌ ಟು ಬಾಇ ರೇಷಿಯೋವನ್ನು ಹೊಂದಿದೆ. ಫ್ರಾಂಟ್‌ ಕ್ಯಾಮೆರಾವನ್ನು ಕನಿಷ್ಟ ಮಟ್ಟದ ನೋಚ್‌ನಲ್ಲಿ ಅಳವಡಿಸಿ ಪ್ರಭಾವಶಾಲಿ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಸಾಧಿಸಲಾಗಿದೆ. 19:5:9 ಆಸ್ಪೆಕ್ಟ್‌ ರೇಷಿಯೋ ಹೊಂದಿರುವ ಡಿಸ್‌ಪ್ಲೇ ಮಾರುಕಟ್ಟೆಯಲ್ಲಿ ದೊರೆಯುವ ಬೇರೆ ಸ್ಮಾರ್ಟ್‌ಫೋನ್‌ಗಳಿಗಿಂತ ಉತ್ತಮ ಅನುಭವವನ್ನು ನೀಡುತ್ತದೆ.

AI ಫೇಸ್‌ ಶೇಪರ್‌ನೊಂದಿಗೆ ಫ್ರಾಂಟ್‌ ಕ್ಯಾಮೆರಾ

AI ಫೇಸ್‌ ಶೇಪರ್‌ನೊಂದಿಗೆ ಫ್ರಾಂಟ್‌ ಕ್ಯಾಮೆರಾ

ಸೆಲ್ಫೀಗಳಿಗಾಗಿ ವಿವೋ V11 ಪ್ರೋನಲ್ಲಿ ಉತ್ತಮ ಗುಣಮಟ್ಟದ ಫೋಟೋಗಾಗಿ 25 MP ಸೂಪರ್-ಹೈ ರೆಸಲ್ಯೂಷನ್ ಸೆನ್ಸಾರ್‌ನ್ನು ಹೊಂದಿದೆ. ಅದಲ್ಲದೇ ಈ ಕ್ಯಾಮೆರಾ ಇತ್ತೀಚಿನ AI ಫೇಸ್ ಶೇಪಿಂಗ್ ತಂತ್ರಜ್ಞಾನದೊಂದಿಗೆ ಸುಸಜ್ಜಿತಗೊಂಡಿದೆ. ಈ AI ಫೀಚರ್‌ ನೈಸರ್ಗಿಕ ಅಂಶಗಳನ್ನು ಫೋಟೋದಲ್ಲಿ ಹಾಗೆಯೇ ಇಟ್ಟುಕೊಂಡು ಸುಂದರ ಹಾಗೂ ಸ್ಪಷ್ಟವಾದ ಸೆಲ್ಫೀ ಸೃಷ್ಟಿಸಲು ನಿಮ್ಮ ಮುಖದ ವೈಶಿಷ್ಟ್ಯಗಳನ್ನು ಹೆಚ್ಚಿಸುತ್ತದೆ.

ಡ್ಯುಯಲ್‌ ಪಿಕ್ಸೆಲ್‌ ಕ್ಯಾಮೆರಾ

ಡ್ಯುಯಲ್‌ ಪಿಕ್ಸೆಲ್‌ ಕ್ಯಾಮೆರಾ

ವಿವೋ V11 ಪ್ರೋ ಹಿಂಬದಿಯಲ್ಲಿ ಅತ್ಯಾಧುನಿಕ 12MP (24 million photosensitive units) + 5MP ಡ್ಯುಯಲ್‌ ಕ್ಯಾಮೆರಾ ಸಂಯೋಜನೆಯನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾ f/1.8 ಅಪಾರ್ಚರ್ ಮತ್ತು 1.28μm ಪಿಕ್ಸೆಲ್‌ ಹೊಂದಿದೆ. ಇದು ಬ್ಯಾಕ್‌ಲೈಟ್‌ ಅಥವಾ ಕಡಿಮೆ ಬೆಳಕಿನಲ್ಲಿ ಫೋಟೋ ಸಂವೇದನೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

ಹೊಸ ತಂತ್ರಜ್ಞಾನವು ಪಿಕ್ಸೆಲ್‌ಗಳಲ್ಲಿರುವ ಪೋಟೋಡಯೋಡ್‌ಗಳನ್ನು ಹೆಚ್ಚಿಸಿ ಮಂದಬೆಳಕಿನಲ್ಲಿ ಕ್ಯಾಮೆರಾ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಟ್ರೈಪಾಡ್ ಇಲ್ಲದೆಯೂ ಕೇವಲ ಪಾಯಿಂಟ್‌ ಮತ್ತು ಶೂಟ್‌ನೊಂದಿಗೆ ಉತ್ತಮ ಫೋಟೋಗಳನ್ನು ಸೆರೆ ಹಿಡಿಯಲು ಹೊಸ ತಂತ್ರಜ್ಞಾನ ಸಹಕಾರಿಯಾಗುತ್ತದೆ.

ಉತ್ತಮ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 660AIE ಚಿಪ್‌ಸೆಟ್‌

ಉತ್ತಮ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 660AIE ಚಿಪ್‌ಸೆಟ್‌

ವಿವೋ V11 ಪ್ರೋ ಸ್ಮಾರ್ಟ್‌ಫೋನ್‌ ಒಕ್ಟಾ ಕೋರ್‌ ಪ್ರೊಸೆಸರ್ ಹೊಂದಿದ್ದು, ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 660AIE ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. 6GB RAM ಮತ್ತು 64GB ಮೆಮೊರಿ ಹೊಂದಿದ್ದು, ದೈನಂದಿನ ಸ್ಮಾರ್ಟ್‌ಫೋನ್‌ ಬಳಕೆಯಲ್ಲಿ ಹ್ಯಾಂಗ್‌ಫ್ರೀ ಕಾರ್ಯನಿರ್ವಹಣೆಯನ್ನು ನಿಮಗೆ ನೀಡುತ್ತದೆ. ಬ್ಯಾಟರಿ, ಕಂಪ್ಯೂಟಿಂಗ್ ಮತ್ತು ಗ್ರಾಫಿಕ್ಸ್‌ ಕಾರ್ಯಕ್ಷಮತೆ ಹೆಚ್ಚಿಸಲು AI ಇಂಜಿನ್‌ನ್ನು ಚಿಪ್‌ಸೆಟ್‌ನೊಂದಿಗೆ ಸಂಯೋಜಿಸಲಾಗಿದೆ.

ಉತ್ತಮ Funtouch OS 4.5

ಉತ್ತಮ Funtouch OS 4.5

ಆಂಡ್ರಾಯ್ಡ್‌ 8.1 ಒಎಸ್‌ ಆಧಾರಿತ Funtouch OS 4.5 ಮತ್ತು ಕಂಪನಿಯ ಜೊವಿ AI ಇಂಜಿನ್ ಹಿಂದೆಂದಿಗಿಂತಲೂ ಹೆಚ್ಚು ಸಿಪಿಯು ಮತ್ತು ಮೆಮೊರಿ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಗ್ರಾಹಕನಿಗೆ ನೀಡುತ್ತವೆ. ಸುಲಭ ಕಾರ್ಯಗಳಿಂದ ಹೈ-ಎಂಡ್‌ ಗೇಮ್‌ಪ್ಲೇ ವರೆಗೂ ವಿವೋ V11 ಪ್ರೋ ಸ್ಮಾರ್ಟ್‌ಫೋನ್‌ನ್ನು ಸರಳವಾಗಿ ಬಳಸಬಹುದು. ಫೋಟೋ, ವಿಡಿಯೋ ಎಡಿಟಿಂಗ್‌, ಗ್ರಾಫಿಕ್‌ನಂತಹ ಅನೇಕ ಕಾರ್ಯಗಳನ್ನು ಒಂದೇ ಸಮಯದಲ್ಲಿ ಮಾಡಿದರೂ ವಿವೋ V11 ಪ್ರೋ ಯಾವುದೇ ಹ್ಯಾಂಗ್‌ ಸಮಸ್ಯೆಯನ್ನು ಎದುರಿಸಿಲ್ಲ ಎನ್ನುವುದು ಇನ್ನೊಂದು ವಿಶೇಷ.

ಡ್ಯುಯಲ್‌ ಇಂಜಿನ್‌ ವೇಗದ ಚಾರ್ಜಿಂಗ್‌

ಡ್ಯುಯಲ್‌ ಇಂಜಿನ್‌ ವೇಗದ ಚಾರ್ಜಿಂಗ್‌

ಸ್ಮಾರ್ಟ್‌ಫೋನ್‌ 3,400 mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಡ್ಯುಯಲ್ ಇಂಜಿನ್‌ ವೇಗದ ಚಾರ್ಜಿಂಗ್‌ ಬೆಂಬಲ ಹೊಂದಿದೆ. ಸ್ಮಾರ್ಟ್‌ಫೋನ್‌ನ್ನು ಸುರಕ್ಷಿತವಾಗಿಡಲು 9 ಲೇಯರ್‌ಗಳ ರಕ್ಷಣಾ ತಂತ್ರಜ್ಞಾನವನ್ನು ಬಳಸಲಾಗಿದೆ. ಡ್ಯುಯಲ್ ಇಂಜಿನ್ ಬ್ಯಾಟರಿಯನ್ನು ವೇಗವಾಗಿ ಚಾರ್ಜ್‌ ಮಾಡುತ್ತದೆ. ನಿಮಗೆ ಬ್ಯಾಟರಿ ಚಾರ್ಜ್‌ ಮಾಡಲು ಹೆಚ್ಚು ಸಮಯವಿಲ್ಲದಿದ್ದಾಗ ಈ ತಂತ್ರಜ್ಞಾನ ಹೆಚ್ಚು ಅನುಕೂಲಕರವಾಗಿದೆ.

IR ಬೆಂಬಲಿತ ಫೇಸ್‌ ಅನ್‌ಲಾಕ್‌

IR ಬೆಂಬಲಿತ ಫೇಸ್‌ ಅನ್‌ಲಾಕ್‌

ಭದ್ರತಾ ದೃಷ್ಟಿಯಿಂದಲೂ ವಿವೋ V11 ಪ್ರೋ ಸ್ಮಾರ್ಟ್‌ಫೋನ್‌ ಹಿಂದೆ ಬಿದ್ದಿಲ್ಲ. ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಜತೆಗೆ ಫೇಸ್‌ ಅನ್‌ಲಾಕ್‌ ವ್ಯವಸ್ಥೆಯನ್ನು ನೀಡಲಾಗಿದೆ. ಫೇಸ್‌ ಅನ್‌ಲಾಕ್‌ IR ಸಂವೇದಕ ಹೊಂದಿದ್ದು, ಕತ್ತಲೆಯಲ್ಲೂ ಸುರಕ್ಷತೆ ಮಾನದಂಡಗಳನ್ನು ಸುಧಾರಿಸುತತ್ತದೆ. ಇದರಿಂದ ಸ್ಮಾರ್ಟ್‌ಫೋನ್‌ನ್ನು ಮಾಲೀಕರಲ್ಲದೇ ಮತ್ಯಾರೂ ಪ್ರವೇಶಿಸಲು ಸಾಧ್ಯವಿಲ್ಲ.

AI ಗೇಮ್ ಮೋಡ್

AI ಗೇಮ್ ಮೋಡ್

ವಿವೋ V11 ಪ್ರೋ ಸ್ಮಾರ್ಟ್‌ಫೋನ್‌ನ ಮತ್ತೊಂದು ಪ್ರಮುಖ ಅಂಶವೆಂದರೆ AI ಗೇಮ್ ಮೋಡ್. ನೀವು ಗೇಮ್‌ ಆಡುತ್ತಿರುವಾಗ ಎಲ್ಲಾ ಕರೆ ಮತ್ತು ನೋಟಿಫಿಕೇಷನ್‌ಗಳನ್ನು ಬ್ಲಾಕ್‌ ಮಾಡಿ ಅಡತಡೆಯಿಲ್ಲದ ಗೇಮಿಂಗ್‌ ಅನುಭವವನ್ನು ನೀಡುತ್ತದೆ. ನೀವು ಗೇಮ್‌ ಆಡುತ್ತಿರುವಾಗ ಪಾಪ್‌ ಅಪ್‌ ವಿಂಡೋದಲ್ಲಿ ಚಾಟ್‌ ಆಪ್‌ಗಳನ್ನು ತೆರೆಯುವ ಆಯ್ಕೆ ಇದ್ದು, ಗೇಮ್‌ ಆಡುತ್ತಾ ಚಾಟ್‌ ಮಾಡುವ ವೈಶಿಷ್ಟ್ಯವನ್ನು ಹೊಂದಿದೆ.

ಜೊವಿ ಅಸಿಸ್ಟಂಟ್‌

ಜೊವಿ ಅಸಿಸ್ಟಂಟ್‌

ವಿವೋ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಿಗೆ ಜೊವಿ AI ಅಸಿಸ್ಟಂಟ್‌ನ್ನು ಪರಿಚಯಿಸಿದೆ. ಜೊವಿ ಎಂದರೆ, "ವಿವೋದ ಎಐನ್ನು ಆನಂದಿಸಿ" ಎಂದರ್ಥ. ಇದು ಬಳಕೆದಾರರಿಗೆ ಭವಿಷ್ಯದ AI-ಬೆಂಬಲಿತ ಅನುಭವವನ್ನು ನೀಡುತ್ತದೆ. ಸಮಯ ಕಳೆದಂತೆ, AI ಅಸಿಸ್ಟಂಟ್‌ ನಿಮ್ಮನ್ನು ಉತ್ತಮವಾಗಿ ಅರ್ಥಮಾಡಿಕೊಂಡು, ಜೀವನವನ್ನು ಸುಲಭ, ಸರಳ ಮತ್ತು ಸ್ಮಾರ್ಟ್‌ ಆಗಿ ಮಾಡುತ್ತದೆ.

Best Mobiles in India

English summary
11 reasons to buy the Vivo V11 Pro. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X