Home
ಮೊಬೈಲ್

ನೋಕಿಯಾದಿಂದ ಎರಡೆರಡು ಉಡುಗೊರೆ ಬರಲಿವೆ

By Super
ನೋಕಿಯಾದಿಂದ ಎರಡೆರಡು ಉಡುಗೊರೆ ಬರಲಿವೆ
ಪ್ರತಿಷ್ಟಿತ ನೋಕಿಯಾ ಕಂಪನಿ ನೋಕಿಯಾ ಸಾಬ್ರೆ ಮತ್ತು ನೋಕಿಯಾ ಸೀ ರೇ ಎಂಬ ಎರಡು ಆಕರ್ಷಕ ಮೊಬೈಲ್ ಗಳನ್ನು ಬಿಡುಗಡೆಗೊಳಿಸಿದೆ.

ನೋಕಿಯಾ ಸಾಬ್ರೆ ಮೊಬೈಲ್ ವಿಂಡೋಸ್ ಫೋನ್ 7.5 ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದ್ದರೆ, ಸೀ ರೆ ವಿಂಡೋಸ್ ಫೋನ್ 7 ಬೆಂಬಲಿತವಾಗಿದೆ.

ಸಾಬ್ರೆ ಕ್ವಾಲ್ಕಂ ಸ್ನಾಪ್ ಡ್ರ್ಯಾಗನ್ 1400 MHz MSM8255T ಪ್ರೊಸೆಸರ್ ಹೊಂದಿದ್ದರೆ, ನೋಕಿಯಾ ಸೀ ರೆ 1GHz ಪ್ರೊಸೆಸರ್ ಹೊಂದಿದೆ.
ಸಾಬ್ರೆ ಮೊಬೈಲ್ ಸಿಯಾನ್, ಕಪ್ಪು ಮತ್ತು ಹಳದಿ ಬಣ್ಣಗಳಲ್ಲಿದ್ದರೆ, ಸೀ ರೆ ಕೇವಲ ಕಪ್ಪು ಬಣ್ಣದಲ್ಲಿ ನಿಮಗೆ ಲಭ್ಯವಿದೆ ಆದರೆ ಇದರೊಂದಿಗೆ ಸ್ಕ್ರ್ಯಾಚ್ ರೆಸಿಸ್ಟಂಟ್ ಗ್ಲಾಸನ್ನೂ ನೀಡಲಾಗಿದೆ.

ನೋಕಿಯಾ ಸಾಬ್ರೆ 710 119 x 62.4 x 12.48 ಎಂಎಂ ಸುತ್ತಳತೆ ಹೊಂದಿದ್ದರೆ, ಸೀ ರೆ 703 117 x 65 x 12 ಎಂಎಂ ಹೊಂದಿದೆ. ಸಾಬ್ರೆ 125.5 ಗ್ರಾಂ ತೂಕವಿದ್ದರೆ, ಸೀ ರೆ 114 ಗ್ರಾಂ ತೂಕವಿದೆ. ಎರಡೂ ಮೊಬೈಲ್ 3.7 ಇಂಚಿನ ಸ್ಕ್ರೀನ್, 480 x 800 ಪಿಕ್ಸಲ್ ರೆಸೊಲ್ಯೂಷನ್ ಹೊಂದಿದೆ.

ಎರಡೂ ಮೊಬೈಲಗಳಲ್ಲಿಯೂ 512ಎಂಬಿ RAM, ಪ್ರಾಕ್ಸಿಮಿಟಿ ಮತ್ತು ಅಕ್ಸೆಲೆರೊಮೀಟರ್ ಸೆನ್ಸಾರ್, IPS-TFT ಡಿಸ್ಪ್ಲೇ ಮಲ್ಟಿ ಟಚ್ ಸ್ಕ್ರೀನ್, 3.5ಎಂಎಂ ಆಡಿಯೋ ಜ್ಯಾಕ್ ಇದೆ. ಈ ಎರಡರಲ್ಲೂ ಸಂಪರ್ಕಕ್ಕೆಂದು USB ಪೋರ್ಟ್, ಬ್ಲೂಟೂಥ್ ಮತ್ತು 802.11 b/ g/ n ವೈ-ಫೈ LAN, A-GPS ನೇವಿಗೇಶನ್ ಸೌಲಭ್ಯ ಒದಗಿಸಲಾಗಿದೆ. 8ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ ಮತ್ತು 32 ಜಿಬಿ ವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶವನ್ನು ಎರಡರಲ್ಲೂ ನೀಡಲಾಗಿದೆ.

ಇನ್ನು ಕ್ಯಾಮೆರಾ ವಿಷಯಕ್ಕೆ ಬಂದರೆ ನೋಕಿಯಾದ ಈ ಎರಡೂ ಮೊಬೈಲ್ ಗಳು 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 x 1944 ಪಿಕ್ಸಲ್ ರೆಸೊಲ್ಯೂಷನ್, ಆಟೊ ಫೋಕಸ್ ಹೊಂದಿದೆ. ಎರಡರಲ್ಲೂ 720p ಹೈ ಡೆಫನಿಶನ್ ವಿಡಿಯೊ ರೆಕಾರ್ಡಿಂಗ್ ಕೂಡ ಸಾಧ್ಯವಿದೆ.

ನೋಕಿಯಾ ಸಾಬ್ರೆ 1300 mAh ಲೀಥಿಯಂ ಬ್ಯಾಟರಿ ಹೊಂದಿದ್ದು 6.5 ಗಂಟೆ ಟಾಕ್ ಟೈಂ ಮತ್ತು 400 ಗಂಟೆ ಸ್ಟಾಂಡ್ ಬೈ ಟೈಂ ನೀಡುತ್ತದೆ. ಇದರ ಬೆಲೆ 20,000 ಕ್ಕಿಂತ ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ.. ನೋಕಿಯಾ ಸೀ ರೆ ಕೂಡ ಲೀಥಿಯಂ ಬ್ಯಾಟರಿ ಹೊಂದಿದ್ದು, ಇದರ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+