ಸ್ಯಾಮ್ ಸಂಗ್ ನೀಡಲಿದೆ ಸ್ಕೈ ರಾಕೆಟ್ ಮೊಬೈಲ್

By Super
|
ಸ್ಯಾಮ್ ಸಂಗ್ ನೀಡಲಿದೆ ಸ್ಕೈ ರಾಕೆಟ್ ಮೊಬೈಲ್
ತಂತ್ರಜ್ಞಾನದ ಬೆಳವಣಿಗೆ ಎಂದಿಗೂ ನಿಲ್ಲುವುದಿಲ್ಲ. ತಂತ್ರಜ್ಞಾನ ಬೆಳೆದಂತೆ, ಗ್ರಾಹಕರಿಗೆ ನೂತನವಾದದ್ದನ್ನು ನೀಡಲು ಕಂಪನಿಗಳು ತರಾತುರಿಯಲ್ಲಿರುತ್ತವೆ.
ಇದೀಗ ಆ ಸಾಲಿಗೆ ಸ್ಯಾಮ್ ಸಂಗ್ ಸೇರಿಕೊಂಡಿದೆ.

ಸ್ಯಾಮ್ ಸಂಗ್ ಕಂಪನಿ ಸ್ಯಾಮ್ ಸಂಗ್ ಗ್ಯಾಲಕ್ಸಿ S II ಸ್ಕೈ ರಾಕೆಟ್ ಎಂಬ ಮೊಬೈಲ್ ಪರಿಚಯಿಸಲಿದ್ದು, ಅಮೆರಿಕದ ಪ್ರಿಮಿಯರ್ AT&T, 4G LTE ಸೇವೆ ಒದಗಿಸಲಿದೆ. ಆಂಡ್ರಾಯ್ಡ್ ಜಿಂಜರ್ ಬರ್ಡ್ 2.3.5 ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಮೊಬೈಲ್ ನಿಮಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಸ್ಯಾಮ್ ಸಂಗ್ ಗ್ಯಾಲಕ್ಸಿ S II ಸ್ಕೈ ರಾಕೆಟ್ ವಿಶೇಷತೆ:
* 4.5 ಇಂಚಿನ ಡಿಸ್ಪ್ಲೇ
* 1.5 GHz ಡ್ಯೂಯಲ್ ಕೋರ್ ಪ್ರೊಸೆಸರ್
* 800x480 ಪಿಕ್ಸಲ್, AMOLED ಪ್ಲಸ್ ಡಿಸ್ಪ್ಲೇ
* 16ಜಿಬಿಯೊಂದಿಗೆ 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್
* 2 ಕ್ಯಾಮೆರಾ, 8 ಮೆಗಾ ಪಿಕ್ಸಲ್ LED ಫ್ಲಾಶ್
* ವಿಡಿಯೋ ಕಾನ್ಫೆರೆನ್ಸಿಂಗ್ ಗೆಂದು 2 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ
* HD 1080p ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯ

ಆದರೆ ಭಾರತದಲ್ಲಿ ಈ ಮೊಬೈಲ್ ಎಷ್ಟು ಬೆಲೆಗೆ ದೊರೆಯುವುದು ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X