ಸ್ಲಿಮ್ ಸ್ಪೈಸ್ ಹ್ಯಾಂಡ್ ಸೆಟ್ ಸರ್ಚ್ ಮಾಡ್ತಿದ್ದೀರಾ?

By Super
|
ಸ್ಲಿಮ್ ಸ್ಪೈಸ್ ಹ್ಯಾಂಡ್ ಸೆಟ್ ಸರ್ಚ್ ಮಾಡ್ತಿದ್ದೀರಾ?
ಸ್ಪೈಸ್ ಕಂಪನಿ ಸ್ಪೈಸ್ M5225 ಎಂಬ ಸ್ಲಿಮ್ ಹ್ಯಾಂಡ್ ಸೆಟ್ ಬಿಡುಗಡೆಗೊಳಿಸಿದೆ. ವಿನ್ಯಾಸದಲ್ಲಿ ವಿಶೇಷವೆನಿಸಿರುವ ಈ ಮೊಬೈಲ್ ಕಪ್ಪು ಮತ್ತು ಹಸಿರು ಮಿಶ್ರಣದಲ್ಲಿ ಆಕರ್ಷಕವಾಗಿ ಕಾಣುತ್ತೆ.

ಇದರಲ್ಲಿ ನಿಮ್ಮ ಮೆಚ್ಚುಗೆ ಗಳಿಸುವ ಇನ್ನೊಂದಿಷ್ಟು ಅಂಶಗಳಿವೆ. ಅದೇನೆಂದು ಇಲ್ಲಿ ತಿಳಿಯಿರಿ.

ಸ್ಪೈಸ್ ಎಂ5225 ಮೊಬೈಲ್ ವಿಶೇಷತೆ:
* ಡ್ಯೂಯಲ್ ಸಿಮ್
* 88.5 ಗ್ರಾಂ ತೂಕ
* 118.3 ಎಂಎಂ x 49.8 ಎಂಎಂ x 13.5 ಎಂಎಂ ಸುತ್ತಳತೆ
* 2.0 ಇಂಚಿನ ಡಿಸ್ಪ್ಲೇ, 176 x 220 ಪಿಕ್ಸಲ್ ರೆಸೊಲ್ಯೂಷನ್
* ಡಿಜಿಟಲ್ ಕ್ಯಾಮೆರಾದೊಂದಿಗೆ ಝೂಮ್ ಸೌಲಭ್ಯ
* GPRS ಮತ್ತು EDGE
* ಮಲ್ಟಿ ಫಾರ್ಮೆಟ್ ಆಡಿಯೋ ಫೈಲ್ಸ್
* ಆಂತರಿಕ ಮೆಮೊರಿ ಸಾಮರ್ಥ್ಯ 27 k
* 8ಜಿಬಿ ಮೆಮೊರಿ ವಿಸ್ತರಣೆಗೆ ಅವಕಾಶ
* ಬ್ಲೂಟೂಥ್ ಸಂಪರ್ಕ

1350 mAh ಲಿಯಾನ್ ಬ್ಯಾಟರಿ ಹೊಂದಿರುವ ಈ ಮೊಬೈಲ್ 500 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 5 ಗಂಟೆ ಟಾಕ್ ಟೈಂ ನೀಡುತ್ತೆ. ಈ ಮೊಬೈಲ್ ಬೆಲೆ ಕೇಳಿದರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗುತ್ತೆ. ಭಾರತದಲ್ಲಿ ಕೇವಲ 2,000ರುಗೆ ಈ ಮೊಬೈಲ್ ನಿಮಗೆ ಲಭ್ಯವಾಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X