ಡೆಲ್ ನಿಂದ ಬರುತಿದೆ ಹ್ಯಾಂಕಾಕ್ ಮೊಬೈಲ್

Posted By: Staff

ಡೆಲ್ ನಿಂದ ಬರುತಿದೆ ಹ್ಯಾಂಕಾಕ್ ಮೊಬೈಲ್
ಡೆಲ್ ಕಂಪನಿ ಡೆಲ್ ಹ್ಯಾಂಕಾಕ್ ಎಂಬ ಆಂಡ್ರಾಯ್ಡ್ ಐಸ್ ಕ್ರೀಂ ಸ್ಯಾಂಡ್ ವಿಚ್ ಆವೃತ್ತಿಯ ಸ್ಮಾರ್ಟ್ ಫೋನ್ ಬಿಡುಗಡೆ ಮೂಲಕ ಗ್ರಾಹಕರನ್ನು ಸಂತೋಷಗೊಳಿಸಲಿದೆ.

ಅತ್ಯಾಧುನಿಕ ಆಂಡ್ರಾಯ್ಡ್ ಆವೃತ್ತಿ ಅಷ್ಟೇ ಅಲ್ಲ, ಇನ್ನೂ ಅನೇಕ ವಿನೂತನ ಆಯ್ಕೆಗಳು ಇದರಲ್ಲಿದೆ.

ಡೆಲ್ ಹ್ಯಾಂಕಾಕ್ ವಿಶೇಷತೆ:
* ಕ್ವೆರ್ಟಿ ಕೀಪ್ಯಾಡ್ ಜೊತೆ ಸ್ಲೈಡ್ ಆಯ್ಕೆ
* 4 ಇಂಚಿನ ವಿಸ್ತಾರದ ಡಿಸ್ಪ್ಲೇ, 540 x 960 ಪಿಕ್ಸಲ್ ರೆಸೊಲ್ಯೂಷನ್
* ಟಚ್ ಸ್ಕ್ರೀನ್, ಮಲ್ಟಿ ಟಚ್ ಸೌಲಭ್ಯ
* ಲೈಟ್ ಸೆನ್ಸಾರ್
* ಡ್ಯೂಯಲ್ ಕೋರ್ ಪ್ರೊಸೆಸರ್
* 8 ಮೆಗಾ ಪಿಕ್ಸಲ್ ಕ್ಯಾಮೆರಾ
* ಫ್ರಂಟ್ ಕ್ಯಾಮೆರಾ
* ಬ್ಲೂಟೂಥ್, USB, ವೈ-ಫೈ ಸೌಲಭ್ಯ

ಈ ಹ್ಯಾಂಕಾಕ್ ಮೊಬೈಲ್ ನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಬಗ್ಗೆ ತಿಳಿದುಬಂದಿಲ್ಲ. ಆದರೆ ಇದು ಉತ್ತಮ ಟಾಕ್ ಟೈಂ ಮತ್ತು ಸ್ಟ್ಯಾಂಡ್ ಬೈ ಟೈಂ ನೀಡಲಿದೆ ಎಂದು ತಿಳಿದುಬಂದಿದೆ. ಇಷ್ಟು ಅವಕಾಶವನ್ನು ನೀಡಲಿರುವ ಈ ಮೊಬೈಲ್ ಬೆಲೆ 25,000 ರಿಂದ 30,000ರು ಇರಬಹುದೆಂದು ಅಂದಾಜಿಸಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot