ಹೈಟೆಕ್ ಮೊಬೈಲ್ ಬೇಕೆಂದರೆ ಇದನ್ನ ತೊಗೊಳ್ಳಿ

Posted By: Staff

ಹೈಟೆಕ್ ಮೊಬೈಲ್ ಬೇಕೆಂದರೆ ಇದನ್ನ ತೊಗೊಳ್ಳಿ
ಮೊಟೊರೊಲಾ ಕಂಪನಿ ಅನೇಕ ಟಚ್ ಸ್ಕ್ರೀನ್ ಮೊಬೈಲ್ ಗಳನ್ನು ಬಿಡುಗಡೆಗೊಳಿಸಿದೆ. ಈಗ ಮತ್ತೊಂದು ಫೋನ್ ಆ ಸಾಲಿಗೆ ಸೇರಲಿದೆ.

ಮೊಟೊರೊಲಾ ಮೊಟೊ XT319 ಎಂಬ ಸ್ಮಾರ್ಟ್ ಫೋನನ್ನು ಸುಲಭವಾಗಿ ಟೈಪ್ ಮಾಡುವ ಉದ್ದೇಶದಿಂದ ರೂಪಿಸಲಾಗಿದೆ. ಮೊಟೊ ಎಂಬ ಇಂಟರ್ ಫೇಸ್ ಇರುವುದು ಇದರಲ್ಲಿ ವಿಶೇಷವಾಗಿದೆ. ಆಂಡ್ರಾಯ್ಡ್ 2.3.4 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಮೊಬೈಲ್ ನಿಮ್ಮನ್ನು ಖುಷಿ ಪಡಿಸಲಿದೆ.

ಮೊಟೊ XT319 ಮೊಬೈಲ್ ವಿಶೇಷತೆ:
* 320 x 480 ಸ್ಕ್ರೀನ್ ರೆಸೊಲ್ಯೂಷನ್
* 800 MHz ಸಿಂಗಲ್ ಕೋರ್ MSM7227T-1 ಪ್ರೊಸೆಸರ್
* 0.3 ಮೆಗಾ ಪಿಕ್ಸಲ್ ಕ್ಯಾಮೆರಾ VGA ಫ್ರಂಟ್ ಕ್ಯಾಮೆರಾ
* ಮತ್ತೊಂದು 3 ಮೆಗಾ ಪಿಕ್ಸಲ್ ಕ್ಯಾಮೆರಾ
* 512 ಎಂಬಿ ಮತ್ತು 512 ಎಂಬಿ ROM ಮೆಮೊರಿ
* 32 ಜಿಬಿ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಮತ್ತು ಮೈಕ್ರೊ SDHC
* v2.1 ಮತ್ತು EDR Class 2 ಬ್ಲೂಟೂಥ್, 802.11 b/g/n ವೈ-ಫೈ, USB 2.0 ಪೋರ್ಟ್, ಮೈಕ್ರೊ USB ಕನೆಕ್ಟರ್
* ಇಮೇಲ್ ಗಾಗಿ POP3, SMTP, IMAP ಮತ್ತು MobileMe
* ಗ್ರಾಫಿಕ್ ಸಹಾಯಕ್ಕೆ ಅಡೆರ್ನೊ 200 ಗ್ರಾಫಿಕ್ ಪ್ರೊಸೆಸರ್

ಈ ಮೊಟೊ ಮೊಬೈಲ್ ನಲ್ಲಿರುವ 1390 mAh ಬ್ಯಾಟರಿಯಿಂದ 5.66 ಗಂಟೆ ಟಾಕ್ ಟೈಂ ಮತ್ತು 100 ಗಂಟೆ ಸ್ಟ್ಯಾಂಡ್ ಬಯ ಟೈಂ ಪಡೆಯಬಹುದು. ಇದರ ಜೊತೆಗೆ 2ಜಿಬಿ ಮೈಕ್ರೊ SD ಕಾರ್ಡ್, ಸ್ಟಿರಿಯೋ ಹೆಡ್ ಸೆಟ್ ಕೂಡ ಇದೆ.

ಹಾಂಗ್ ಕಾಂಗ್ ನಲ್ಲಿ ಬಿಡುಗಡೆಗೊಂಡಿರುವ ಈ ಮೊಟೊ ಮೊಬೈಲ್ ಬೆಲೆ ಭಾರತದಲ್ಲಿ 11,000 ರು ಎಂದು ಅಂದಾಜಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot