ಅತ್ಯಾಚಾರಿಗಳಿಂದ ಪಾರಾಗಲು ಮೊಬೈಲ್ ಬಾಡಿಗಾರ್ಡ್

Posted By: Staff

ಅತ್ಯಾಚಾರಿಗಳಿಂದ ಪಾರಾಗಲು ಮೊಬೈಲ್ ಬಾಡಿಗಾರ್ಡ್
ಯುವತಿಯರು ಇನ್ನು ಮುಂದೆ ಧೈರ್ಯವಾಗಿ ತಿರುಗಾಡುವ ಕಾಲ ಬರಲಿದೆ. ಅವರ ಕೈಲಿರುವ ಮೊಬೈಲೇ ಅವರಿಗೆ ಸೆಕ್ಯುರಿಟಿಯಾಗಿರಲು ಸಿದ್ಧಗೊಂಡಿದೆ.

ಹೌದು. ದಿನೇ ದಿನೇ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಲ್ ಆಫ್ 6 ಮತ್ತು ಆನ್ ವಾಚ್ ಎಂಬ ವಿಶೇಷ ಅಪ್ಲಿಕೇಶನ್ ಗಳು ಬಂದಿವೆ. ಇದು ನಿಮ್ಮ ಮೊಬೈಲ್ ನಲ್ಲಿದ್ದರೆ ಸಾಕು, ನೀವು ಧೈರ್ಯವಾಗಿ ತಿರುಗಾಡಬಹುದು. ಅಷ್ಟೇ ಅಲ್ಲ, ಕೊಲೆ, ದರೋಡೆ ಮುಂತಾದ ಕಷ್ಟದ ಸಮಯದಲ್ಲೂ ಇವು ಸಹಾಯ ಮಾಡಲಿದೆ.

ಮೊಬೈಲ್ ತಂತ್ರಜ್ಞಾನವನ್ನು ಇನ್ನಷ್ಟು ಪರಿಷ್ಕ್ರತಗೊಳಿಸುವ ನಿಟ್ಟಿನಲ್ಲಿ ಜುಲೈನಲ್ಲಿ ಬಿಡುಗಡೆಗೊಂಡ ಈ ಅಪ್ಲಿಕೇಶನ್ ದೌರ್ಜನ್ಯದ ವಿರುದ್ಧ ಹೋರಾಡುವ ತಂತ್ರಜ್ಞಾನ ಎಂಬ ಬಹುಮಾನವನ್ನೂ ತನ್ನದಾಗಿಸಿಕೊಂಡಿದೆ.

ತುರ್ತು ಪರಿಸ್ಥಿತಿಯಲ್ಲಿ ತಕ್ಷಣವೇ ಸಹಾಯ ಪಡೆಯುವ ಮತ್ತು ತಾವು ಎಲ್ಲಿದ್ದೇವೆ ಎಂದು ನಿಖರ ಮಾಹಿತಿಯ ಸಂದೇಶವನ್ನು ನೀಡುವಂತೆ ತಯಾರಿಸಲಾಗಿರುವ ಈ ಅಪ್ಲಿಕೇಶನ್ ನಿಂದ ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ಕ್ಯಾಂಪಸ್ ಪೊಲೀಸ್ ಗೆ ತಕ್ಷಣವೇ ತಿಳಿಸಬಹುದಾಗಿದೆ.

ಸರ್ಕಲ್ ಆಫ್ 6 ಅಪ್ಲಿಕೇಶನ್ ನಲ್ಲಿ ತುಂಬಾ ಪ್ರಮುಖವೆನಿಸುವ ಐದು ಸಂಪರ್ಕವನ್ನು ಶೇಖರಿಸಿ, ಕಠಿಣ ಪರಿಸ್ಥಿತಿಯಲ್ಲಿ ಒಂದು ಬಟನ್ ಒತ್ತಿದರೆ ಸಾಕು, ಸ್ವಯಂಚಾಲಿತವಾಗಿ ಶೇಖರಿಸಿಟ್ಟ ಸಂಪರ್ಕಗಳಿಗೆ ಸಂದೇಶ ಹೋಗುತ್ತದೆ ಮತ್ತು ಕರೆಯನ್ನೂ ಮಾಡಬಹುದಾಗಿದೆ.

ಆನ್ ವಾಚ್ ಅಪ್ಲಿಕೇಶನ್ ನಲ್ಲಿ ಯಾವ ಸಮಯದಲ್ಲೂ, ಎಲ್ಲಿ ಬೇಕಾದರೂ, ಯಾವುದೇ ಕಾರಣಕ್ಕೂ ಸಿದ್ದವಾದ ಸ್ನೇಹಿತರ ಪಟ್ಟಿಯನ್ನು ಮಾಡಿ, ಅವರಿಗೆ ತಕ್ಷಣವೇ ಸಂದೇಶ ಕಳುಹಿಸುವ ಅವಕಾಶ ನೀಡಲಾಗಿದೆ. ಇದರಲ್ಲಿ ಟೈಮರ್ ಕೂಡ ಇದ್ದು, ಎಲ್ಲವೂ ಸರಿ ಹೋದರೆ, ಸಂದೇಶವನ್ನು ರದ್ದು ಪಡಿಸುವ ಆಯ್ಕೆಯೂ ನೀಡಲಾಗಿದೆ.

ಈ ಅಪ್ಲಿಕೇಶನ್ ನೊಂದಿಗೆ ಪ್ಯಾನಿಕ್ ಬಟನ್ ಇದ್ದು, ಇದರಿಂದ ತಕ್ಷಣವೇ ಕರೆ, ಸಂದೇಶ, ಇ ಮೇಲ್ ಅನ್ನು ಮೊದಲೇ ನಿಗದಿಪಡಿಸಿದ ಕಾಂಟಾಕ್ಟ್ ಗಳಿಗೆ ಕಳುಹಿಸಬಹುದು. ಇದರಿಂದ ನೀವೂ ಸೇಫ್ ಆಗುವುದಲ್ಲದೆ, ನಿಮ್ಮ ಸ್ನೇಹಿತರು ಕಷ್ಟದಲ್ಲಿದ್ದರೆ ಅವರನ್ನೂ ಸೇಫ್ ಮಾಡುವ ಸುಲಭ ಮಾರ್ಗ ಸಿಕ್ಕಿದಂತಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot