ಹ್ಯಾಪಿ ಮಾಡುತ್ತೆ ಈ ಝಿಪ್ಪಿ ಮೊಬೈಲ್

By Super
|
ಹ್ಯಾಪಿ ಮಾಡುತ್ತೆ ಈ ಝಿಪ್ಪಿ ಮೊಬೈಲ್
ಇದು ಟಚ್ ಸ್ಕ್ರೀನ್ ಜಮಾನ. ಕಡಿಮೆ ಬೆಲೆಗೆ ಹೆಚ್ಚು ಆಯ್ಕೆ ಹೊಂದಿರುವ ಮೊಬೈಲ್ ಗ್ರಾಹಕರ ಮನಗೆಲ್ಲುತ್ತೆ. ಇದಕ್ಕೆಂದೇ ಭಾರತದ ಮ್ಯಾಕ್ಸ್ ಮೊಬೈಲ್ ಕಂಪನಿ ಮ್ಯಾಕ್ಸ್ ಝಿಪ್ಪಿ MT105 ಎಂಬ ಫುಲ್ ಟಚ್ ಸ್ಕ್ರೀನ್ ಮೊಬೈಲನ್ನು ಬಿಡುಗಡೆಗೊಳಿಸಿದೆ.

ಬಾರ್ ಫೋನ್ ವಿನ್ಯಾಸದಲ್ಲಿರುವ ಈ ಮೊಬೈಲ್ ಕಪ್ಪು, ಕೆಂಪು ಮತ್ತು ಕೇಸರಿ ಬಣ್ಣದಲ್ಲಿದ್ದು, ಡ್ಯೂಯಲ್ ಸಿಮ್ ಆಯ್ಕೆ ಕೂಡ ನಿಮ್ಮ ಅನುಕೂಲಕ್ಕೆಂದು ನೀಡಲಾಗಿದೆ.

ಮ್ಯಾಕ್ಸ್ ಝಿಪ್ಪಿ MT105 ಮೊಬೈಲ್ ವಿಶೇಷತೆ:
* 96x54x13.5 ಎಂಎಂ ಸುತ್ತಳತೆ
* 55 ಗ್ರಾಂ ತೂಕ
* ಡ್ಯೂಯಲ್ ಸಿಮ್
* 2.4 ಇಂಚು, TFT ಟಚ್ ಸ್ಕ್ರೀನ್, 240x320 ಪಿಕ್ಸಲ್ ರೆಸೊಲ್ಯೂಷನ್
* ಡಿಜಿಟಲ್ ಕ್ಯಾಮೆರಾ, LED ಫ್ಲಾಶ್, 640x480 ಪಿಕ್ಸಲ್ ರೆಸೊಲ್ಯೂಷನ್, ಡಿಜಿಟಲ್ ಝೂಮ್
* 115ಕೆಬಿ ಆಂತರಿಕ ಮೆಮೊರಿ ಮತ್ತು 64 ಎಂಬಿ ಸಿಸ್ಟಮ್ ಮೆಮೊರಿ
* ಮೆಮೊರಿ ವಿಸ್ತರಣೆಗೆ 4 ಜಿಬಿ ಮೈಕ್ರೊ SD ಕಾರ್ಡ್
* ಬ್ಲೂಟೂಥ್, WAP/GPRS
* ಇ-ಬುಕ್ ರೀಡರ್

1000mAh BAT05 ಬ್ಯಾಟರಿ ಹೊಂದಿರುವ ಝಿಪ್ಪಿ ಮೊಬೈಲ್ 400-450 ಗಂಟೆ ಸ್ಟಾಂಡ್ ಬೈ ಮತ್ತು 3-4 ಗಂಟೆ ಟಾಕ್ ಟೈಂ ನೀಡುತ್ತದೆ. ಈ ಮೊಬೈಲ್ ಬೆಲೆ ವಿಷಯಕ್ಕೆ ಬಂದರೆ ನಿಮಗೆಲ್ಲಾ ಖುಷಿ ಕಾದಿದೆ. ಕೇವಲ 2,550 ರುಗೆ ಈ ಟಚ್ ಸ್ಕ್ರೀನ್ ಮೊಬೈಲ್ ಲಭ್ಯವಾಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X